ತುಮಕೂರು: ಜಾತಿ,ಧರ್ಮ,ವರ್ಣ, ವರ್ಗ,ಭಾಷೆಯ ಹೆಸರಿನಲ್ಲಿ ಛಿದ್ರವಾಗಿರುವ ಭಾರತವನ್ನು ಒಂದೇ ಸೂರನಡಿ ತರುವ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಸಂವಿಧಾನದಲ್ಲಿ ಜಾತ್ಯಾತೀತ ತತ್ವಗಳನ್ನು ಆಳವಡಿಸಿ, ಎಲ್ಲರೂ ಸಮಾನತೆಯಿಂದ ಬದುಕುವಂತಹ ಅವಕಾಶ ಕಲ್ಪಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ವಿಭಾಗದಿಂದ ಹಮ್ಮಿಕೊಂಡಿದ್ದ ಸಂವಿಧಾನದ ಆಶಯಗಳು ಮತ್ತು ರಾಜಕೀಯ ಜಾಗೃತಿ ಎಂಬ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ,ಕರಪತ್ರ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, ವರ್ಣ,ವರ್ಗ ಬೇಧಗಳಿಂದ ಬಸವಳಿದಿದ್ದ ಭಾರತ,ಇನ್ನೂ ಮುಂದಾದರೂ ಸಮಾನತೆ,ಸಾಮಾಜಿಕ ನ್ಯಾಂiÀi,ಜಾತ್ಯಾತೀತ ತತ್ವಗಳ ಮೇಲೆ ನಡೆದು ಶತಮಾನ ಗಳಿಂದ ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾದ ಜನರು, ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂಬ ಕಾರಣಕ್ಕೆ ಹಲವಾರು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು,ಇದು ಯಾವುದೇ ಒಂದು ಜಾತಿ,ಧರ್ಮವನ್ನು ಗಮನದಲ್ಲಿಟ್ಟು ಕೊಂಡು ಬರೆದ ಸಂವಿಧಾನವಲ್ಲ. ಇಡೀ ಭಾರತೀಯರ ಸಮಗ್ರ ಆಭಿವೃದ್ದಿಯ ದೃಷ್ಟಿಕೋನದ ಸಂವಿಧಾನ ಎಂದರು. ಪುರುಷ ಪ್ರಧಾನ ಸಮಾಜದಲ್ಲಿ ಎರಡನೇ ಪ್ರಜೆಯಾಗಿದ್ದ ಮಹಿಳೆಯರಿಗೆ ಅಸ್ತಿಯ ಹಕ್ಕು ಸಿಗಬೇಕು, ಗಂಡಿಗೆ ಸಮಾನವಾಗಿ ಹೆಣ್ಣಿಗೂ ಎಲ್ಲಾ ರೀತಿಯ ಹಕ್ಕುಗಳು ಸಿಗಬೇಕು ಎಂಬ ಉದ್ದೇಶದಿಂದ ಹಿಂದೂ ಕೋಡ್‌ಬಿಲ್‌ನ್ನು ಮೊದಲ ಕಾನೂನು ಮಂತ್ರಿಯಾಗಿ ಸದನದಲ್ಲಿ ಅಂಬೇಡ್ಕರ್ ಮಂಡಿಸಿದರು.ಆದರೆ ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅದು ಸದನದಲ್ಲಿ ಪಾಸಾಗದ ಹಿನ್ನೆಲೆಯಲ್ಲಿ ತಮ್ಮ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ನಂತರದಲ್ಲಿ ಮಹಿಳೆಯರಿಗೆ ಅನೇಕ ಹಕ್ಕುಗಳು, ಮಹಿಳಾ ಪರ ಕಾಯ್ದೆಗಳಿದ್ದರೂ, ಹಿಂದು ಕೋಡ್‌ಬಿಲ್‌ಗೆನ ಆಶಯಗಳನ್ನು ಈಡೇರಿಸಲು ಸಾಧ್ಯವಿಲ್ಲ.ಅಸ್ತಿಯ ಹಕ್ಕಿನ ಜೊತೆಗೆ ಮಹಿಳೆಯರಿಗೆ ಮತದಾನದ ಹಕ್ಕು ಲಭಿಸಿದ್ದು ಸಹ ಅಂಬೇಡ್ಕರ್ ಅವರ ಪರಿಶ್ರಮದಿಂದ ಇದನ್ನು ಪ್ರತಿಯೊಬ್ಬ ಹೆಣ್ಣು ಮಗಳು ಅರ್ಥ ಮಾಡಿಕೊಳ್ಳಬೇಕು.ಅಂಬೇಡ್ಕರ್ ಅವರ ಆಶಯದಂತೆ ರಾಜಕೀಯ ಅಧಿಕಾರವೂ ಪುರುಷರಿಗೆ ಸರಿಸಮಾನಗಿ ಸೀಗುವಂತಾಗಬೇಕು ಎಂದು ಚಂದ್ರಶೇಖರಗೌಡ ನುಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್,ಲೋಕೇಶಸ್ವಾಮಿ,ಭಾಗ್ಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು
(Visited 1 times, 1 visits today)