ತುಮಕೂರು: ನೇರ, ನಿಷ್ಟೂರ ನಡೆಯ ಮನೋಭಾವನೆ ರೂಪಿಸಿಕೊಂಡಿದ್ದ ಸರ್ವಜ್ಞ ಕವಿಯ ಆಶಯ ಸಮಾಜದ ಓರೆ, ಕೋರೆಗಳನ್ನು ತಿದ್ದುವುದೇ ಆಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ರಂಗಮAದಿರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಕುಂಬಾರರ ಸಂಘ,ಸರ್ವಜ್ಞ ಯುವ ವೇದಿಕೆ, ಶ್ರೀಕುಂಭೇಶ್ವರಿ ಮಹಿಳಾ ಸಂಘ,ಶ್ರೀಕುAಭೇಶ್ವರಿ ಹಿಂದುಳಿದ ವರ್ಗಗಳ ವಿವಿದೋದ್ದೇಶ ಸಹಕಾರ ಸಂಘವತಿಯಿAದ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ತೆಲುಗಿನಲ್ಲಿ ವೇಮನ, ಕನ್ನಡದಲ್ಲಿ ಸರ್ವಜ್ಞ ತಮ್ಮ ತ್ರಿಪದಿಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ ಎಂದರು.
ಮನುಷ್ಯರಲ್ಲಿ ಯಾರು ಮೇಲಲ್ಲ, ಕೀಳಲ್ಲ ಎಂಬುದನ್ನು ಸರ್ವಜ್ಞ ಕವಿ ಹೂವು ಯಾವ ಜಾತಿಯದ್ದಾದರೇನು, ಅದರ ಪರಿಮಳವಷ್ಟೇ ಮುಖ್ಯ ಎಂಬುದನ್ನು ಸಾರಿ ಹೇಳಿದ್ದಾರೆ. ಜಾತಿ ಹೀನನ ಮನೆಯ ಜೋತಿ ತಾ ಹೀನವೇ ?,ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ, ಅನ್ನದೇವರ ಸಕಲ ಪ್ರಾಣಿಗಳಿಗೆ ಎಂಬ ಅವರ ವಾಕ್ಯ 21ನೇ ಶತಮಾನದಲ್ಲಿ ಇಂದಿಗೂ ಪ್ರಸ್ತುತವಾಗಿವೆ.ಕೇಳುವುದಕ್ಕೆ ಕಠಿಣವೆನಿಸಿದರು, ಸತ್ಯದಿಂದ ಕೂಡಿವೆ.ಸಮಾಜದಲ್ಲಿರುವ ಮೌಢ್ಯ, ಆಂಧಕಾರ, ಜಾತಿ ತಾರತಮ್ಯಗಳ ಕುರಿತು ತಮ್ಮ ತ್ರಿಪದಿಗಳಲ್ಲಿ ನಿರ್ಭೀತಿಯಿಂದ ಹೇಳಿದ ಕವಿ ಸರ್ವಜ್ಞ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್ ಕುಮಾರ್,ಜಿಲ್ಲಾ ಕುಂಬಾರರ ಸಂಘದ ಖಜಾಂಚಿ ಜಯಮ್ಮ ನಾಗರಾಜು,ಸಹಕಾರ್ಯದರ್ಶಿ ಆಶ್ವತ್ಥಪ್ಪ, ನಿರ್ದೇಶಕರಾದ ಬಿ.ಆರ್.ಶಿವಕುಮಾರ್, ಗೋವಿಂದರಾಜು, ವೆಂಕಟೇಶ್, ಭಾಸ್ಕರ್, ಆಕಾಶ್,ಕುಂಬಾರ ಸಂಘದ ಮುಖಂಡರಾದ ಗುರುರಾಜ್, ಕುಂಭೇಶ್ವರಿ ಮಹಿಳಾ ಸಘದದ ಶ್ರೀಮತಿ ರಾಧಾ ಆಶ್ವತ್ಥ್, ಶ್ರೀನಿವಾಸ್, ಕಾರ್ತಿಕ್, ಅರುಣ್, ಅನಿತಾ, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾವೇದಿಕೆಯ ಅಧ್ಯಕ್ಷ ಮೀಸೆ ಸತೀಶ್, ಕನ್ನಡ ಸಂಸ್ಕೃತಿ ವೇದಿಕೆಯ ಅಧ್ಯಕ್ಷ ಕನ್ನಡ ಪ್ರಕಾಶ್ ಇದ್ದರು.
(Visited 1 times, 1 visits today)