ತುಮಕೂರು: ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಆರ್. ಕುರಂದವಾಡ ಹಾಗೂ ಕಾರ್ಯದರ್ಶಿ ಟಿ.ಎನ್. ಶ್ರೀಕಂಠಸ್ವಾಮಿ ಅವರು ಭೇಟಿ ಮಾಡಿ ಜಿಲ್ಲೆಯ ವಾಣಿಜ್ಯ, ಕೈಗಾರಿಕಾ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರವಾಗಿ ಬೇಡಿಕೆಗಳ ಪ್ರಸ್ತಾವನೆಯನ್ನು ಸಲ್ಲಿಸಿ, 2025-26 ನೇ ಸಾಲಿನ ಬಜೆಟ್ ನಲ್ಲಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಶೈಕ್ಷಣಿಕ ನಗರ ಎಂದು ಪ್ರಸಿದ್ದಿಯಾಗಿರುವ ತುಮಕೂರು ಜಿಲ್ಲೆಯಲ್ಲಿ ಏಳು ಇಂಜನಿಯರಿAಗ್ ಕಾಲೇಜು, ಮೂರು ಮೆಡಿಕಲ್ ಕಾಲೇಜುಗಳು. ಸುಮಾರು ಐಟಿಐ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು ಹಾಗೂ ತುಮಕೂರು ಯನಿರ್ವಸಿಟಿ ಇದ್ದು ಸುಮಾರು 50ರಿಂದ 60 ಸಾವಿರ ಜನರು ತುಮಕೂರಿನಿಂದ ಬೆಂಗಳೂರಿಗೆ ವಿವಿಧ ಐಟಿ ಕಂಪನಿಗಳಿಗೆ ಹೋಗುತ್ತಿರುವುದರಿಂದ ತುಮಕೂರಿನಲ್ಲೇ ಐಟಿ ಹಬ್ ನ್ನು ನಿರ್ಮಾಣ ಮಾಡಬೇಕು ಎಂದು ಕೋರಿದ್ದಾರೆ.
ನಗರದ ಮಹಾನಗರ ಪಾಲಿಕೆಯ ಸರಹದ್ದಿನಲ್ಲಿ ಬರುವ ಕೈಗಾರಿಕೆಗಳಿಗೆ ಆಸ್ತಿತೆರಿಗೆಯನ್ನು ಏIಂಆಃ ಇಂದ ಮಹಾನಗರಪಾಲಿಕೆಗೆ ವರ್ಗಾವಣೆ ಮಾಡಿಕೊಂಡು ನಂತರ ಪ್ರತ್ಯೇಕ ಕೈಗಾರಿಕಾ ವರ್ಗಮಾಡಿ ಕಮರ್ಷಿಯಲ್ ಹಾಗೂ ರೆಸಿಡೆನ್‌ಷಿಯಲ್ ಸ್ಲಾಬ್ ಗಿಂತ ತೆರಿಗೆಯನ್ನು ಕಡಿಮೆಮಾಡಿ ಪ್ರಸ್ತುತ ಗ್ರಾಮಪಂಚಾಯಿತಿ ವ್ಯಾಪಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ನಿಗದಿಪಡಿಸಿರುವ ಆಸ್ತಿ ತೆರಿಗೆಯಂತೆ ನಗರ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ತೆರಿಗೆಯನ್ನು ನಿಗದಿಪಡಿಸುವುದು ಹಾಗೂ ಕೈಗಾರಿಕಾ ಪ್ರದೇಶವು ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡ ಪ್ರಸ್ತುತ ವರ್ಷದಿಂದ ನಾವು ತೆರಿಗೆಯನ್ನು ಕಟ್ಟಲು ಸಿದ್ದರಿದ್ದೇವೆ.
ಏIಂಆಃ ಅಂತಿಮ ದರ ನಿರ್ದಾರ ಮಾಡುವ ಬಗ್ಗೆ ಅಲಾಟ್‌ಮೆಂಟ್ ದರ ಅಂತಿಮ ದರಕ್ಕೆ 20% ಮೀರಿರಬಾರದು ಇಲ್ಲದಿದ್ದರೆ ಆ ಕೈಗಾರಿಕಾ ಪ್ರಾಜೆಕ್ಟ್ ವಿಫಲವಾಗುತ್ತದೆ.
ಟ್ರೇಡ್ ಆಂಡ್ ಇಂಡಸ್ಟ್ರಿಗಳಿಗೆ ಹಾಲಿ ಇರುವ ವೃತ್ತಿ ತೆರಿಗೆಯನ್ನು ರದ್ದು ಮಾಡುವುದು. ಈ ಎಲ್ಲ ಅಂಶಗಳನ್ನು ಈ ವರ್ಷದ ಬಜೆಟ್ ನಲ್ಲಿ ಮಂಡಿಸುವAತೆ ಹಾಗೂ ತುಮಕೂರು ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯತೆ ಕಲ್ಪಿಸುವಂತೆ
ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.
(Visited 1 times, 1 visits today)