ಹುಳಿಯಾರು: ಸಂಕ್ರಾAತಿ ಹಬ್ಬಕ್ಕಾದರೂ ರಾಗಿ ಖರೀಧಿಸಿ ಸರ್ಕಾರ ಹಣ ಕೊಡುತ್ತದೆಂದು ರೈತರು ಭಾವಿಸಿದ್ದರು. ಸಂಕ್ರಾAತಿ ಕಳೆದು ಶಿವರಾತ್ರಿ ಬಂದಿದ್ದರೂ ಖರೀದಿಯ ಬಗ್ಗೆ ಸರ್ಕಾರದಿಂದ ಸ್ಪಷ್ಟ ಮಾಹಿತಿಯಿಲ್ಲ. ರಾಗಿ ಖರೀದಿಗೆ ಇನ್ನೆಷ್ಟು ದಿನ ರೈತರು ಕಾಯಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಪ್ರಶ್ನಿಸಿದರು.
ಹೊಸಹಳ್ಳಿ ಚಂದ್ರಣ್ಣ ಬಣದ ರಾಜ್ಯ ರೈತ ಸಂಘದಿAದ ಸೋಮವಾರ ಹುಳಿಯಾರಿನ ಎಪಿಎಂಸಿ ಮೂಲಕ ರಾಜ್ಯ ಸರ್ಕಾರಕ್ಕೆ ರಾಗಿ ಖರೀದಿ ಆರಂಭಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಕಟಾವು ಹೀಗೆ ರಾಗಿ ಬೆಳೆಯಲು ರೈತ ಸಾವಿರಾರು ರೂ. ವೆಚ್ಚ ಮಾಡಿದ್ದಾನೆ. ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಕೈ ಕೊಟ್ಟಿದ್ದರಿಂದ ಈ ವರ್ಷ ಸಾಲಸೂಲ ಮಾಡಿ ರಾಗಿ ಬೆಳೆದಿದ್ದಾರೆ. ಜ.1 ರಂದು ನಫೆಡ್‌ಗೆ ರಾಗಿ ಬಿಟ್ಟರೆ ಸಂಕ್ರಾAತಿ ಹಬ್ಬಕ್ಕಾದರೂ ಬ್ಯಾಂಕ್ ಖಾತೆಗೆ ಸರ್ಕಾರ ಹಣ ಹಾಕುತ್ತದೆ ಎಂದು ನಿರೀಕ್ಷಿಸಿದ್ದ. ಆದರೆ ಶಿವರಾತ್ರಿ ಹಬ್ಬ ಬಂದರೂ ರಾಗಿ ಖರೀಧಿಸಲು ಸರ್ಕಾರ ಇನ್ನು ಮೀನಾಮೇಷ ನೋಡುತ್ತಿದೆ. ಈಗ ಸಾಲುಸಾಲು ಹಬ್ಬ, ಜಾತ್ರೆ, ಮದುವೆಗಳಿಗೆ ರೈತ ಪುನಃ ಸಾಲ ಮಾಡಬೇಕಾದ ಅನಿವಾರ್ಯತೆಯನ್ನು ಸರ್ಕಾರ ಸೃಷ್ಠಿಸಿದೆ ಎಂದು ಆರೋಪಿಸಿದರು.
ಅತೀ ಸಣ್ಣ ರೈತರು ಜೀವನ ನಿರ್ವಹಣೆಗೆ ವರ್ತಕರಿಗೆ ಕಡಿಮೆ ಬೆಲೆಗೆ ರಾಗಿ ಮಾರುವ ದುಸ್ಥಿತಿ ನಿರ್ಮಾಣವಾಗಿದೆ. ಇದೇ ರಾಗಿಯನ್ನು ವರ್ತಕರು ಹೆಚ್ಚು ಬೆಲೆಗೆ ನಫೆಡ್ ಮಾರುವ ವಾಮ ಮಾರ್ಗದ ಜಾಲ ಇದೆ. ಹಾಗಾಗಿ ರಾಗಿ ಖರೀದಿ ತಡವಾದಷ್ಟು ರೈತರಿಗಿಂದ ವರ್ತಕರಿಗೆ ಬೆಂಬಲ ಬೆಲೆಯ ಲಾಭ ಆಗುವ ಸಾಧ್ಯತೆ ಇದೆ. ಸರ್ಕಾರ ಕೂಡ ನಫೆಡ್ ಮೂಲಕ ರಾಗಿ ಖರೀದಿಗೆ ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ವರ್ತಕರಿಗೆ ಲಾಭ ಮಾಡಿಕೊಡುವ ಕುತಂತ್ರ ಅಡಗಿರುವ ಅನುಮಾನ ಕಾಡುತ್ತಿದೆ. ಹಾಗಾಗಿ ಶಿವರಾತ್ರಿ ಹಬ್ಬ ಮುಗಿದ ತಕ್ಷಣ ರಾಗಿ ಖರೀದಿ ಆರಂಭಿಸಬೇಕು. ಖರೀದಿ ಮಾಡಿದ ವಾರದೊಳಗೆ ರೈತರ ಖಾತೆಗಳಿಗೆ ಹಣ ಜಮೆ ಮಾಡಬೇಕು. ಇಲ್ಲವಾದರೆ ಖರೀದಿ ಕೇಂದ್ರದ ಎದುರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಹೂವಿನ ತಿಮ್ಮಯ್ಯ, ಭೈರಾಪುರ ಕುಮಾರಸ್ವಾಮಿ, ನರುವಗಲ್ಲು ಲಕ್ಕಮ್ಮ, ನಂದಿಹಳ್ಳಿ ರೇವಣ್ಣ, ಸೋಮಜ್ಜನಪಾಳ್ಯ ಪುಟ್ಟಯ್ಯ, ತಮ್ಮಡಿಹಳ್ಳಿ ಗೊಲ್ಲರಹಟ್ಟಿ ನಿಂಗಪ್ಪ, ಹುಳಿಯಾರು ಹನುಮಂತರಾಜು, ಸೀಗೇಬಾಗಿ ಜಗ್ಗಣ್ಣ, ಗಂಗಣ್ಣ, ಕುಮಾರಸ್ವಾಮಿ, ಮಂಜುನಾಥ್, ಆಶಾ, ಮಂಜಮ್ಮ, ವಾಣಿಶ್ರೀ, ರೇಷ್ಮಾ, ಚಂದ್ರಶೇಖರ ರಾವ್, ಪುಟ್ಟಿಬಾಯಿ ಮತ್ತಿತರರು ಇದ್ದರು.
(Visited 1 times, 1 visits today)