ತುಮಕೂರು: ನಾವು ಇಂದು ದುರಿತ ಕಾಲದಲ್ಲಿ ಬದುಕುತ್ತಿದ್ದು ಇಡೀ ನಗರಕ್ಕೆ ತಮ್ಮ ಶ್ರಮದಿಂದ ಅಭಿವೃದ್ಧಿ ಶಕ್ತಿ ತುಂಬುತ್ತಿರುವ ಸ್ಲಂ ಜನರನ್ನು ವ್ಯವಸ್ಥೆ ತಾರತಮ್ಯದಿಂದ ನೋಡುತ್ತಿದ್ದು ಜಾತಿಯ ಪ್ರತಿ ರೂಪಗಳಾಗಿ ಕೊಳಚೆ ಪ್ರದೇಶಗಳನ್ನು ಈ ಪ್ರಭುತ್ವ ಉಳಿಸಿಕೊಂಡಿದೆ, ಹಾಗಾಗಿ ಸ್ಲಂ ಜನರ ಶಕ್ತಿ ಚೈತನ್ಯದಿಂದ ನಮ್ಮ ಹಕ್ಕು ಪಡೆಯಲು ಮುಂದಾಗಬೇಕು ದಮನಕ್ಕೆ ಒಳಗಾದವರೇ ಮೇಲೆದ್ದು ನಿಲ್ಲ ಬೇಕಿದೆ ಎಂದು ಸಾಹಿತಿ ದು.ಸರಸ್ವತಿ ಕರೆ ನೀಡಿದ್ದರು ಇಂದು ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾತರರಿಬಾಯಿಪುಲೆ ಮಹಿಳಾ ಸಂಘಟನೆಯಿAದ ನಡೆದ ಸ್ಲಂ ಜನರ ಮೇಲಿನ ಸಾಮಾಜಿಕ ಮತ್ತು ಅಭಿವೃದ್ಧಿ ತಾರತಮ್ಯ ವಿರೋಧಿಸಿ ಪ್ರತಿಭಟನೆಯನ್ನು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಿದೆ ಇದನ್ನೇ ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿ, ರಮಾ,ಫಾತೀಮಾ ಹೇಳಿದ ತತ್ವ ನಾವು ಈ ತತ್ವ ಮುಟ್ಟಬೇಕಾದರೇ ಶಿಕ್ಷಣವನ್ನು ಸ್ಲಂಗಳಲ್ಲಿರುವ ವಂಚಿತ ಸಮುದಾಯಗಳು ಪಡೆಯಲೇ ಬೇಕು. ನಾವು ಗುಲಾಮರಾಗಿದ್ದಕ್ಕೆ ನಮ್ಮ ಮೇಲೆ ಧೌರ್ಜನ್ಯವನ್ನು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲಬಾಡಿಗೆ ಸ್ಲಂಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೇ ಕೂಲಿಗಾಗಿ ಬಂದ ಕರ್ನಾಟಕದ ಇತರೆ ಭಾಗದ ವಲಸೆ ಸಮುದಾಯಗಳು, ಮಹಿಳೆಯರು,ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಶೋಷಣೆ ಮಾಡಲಾಗುತ್ತಿದೆ ಈ ಮುಂದುವರಿದ ದಮನ ಭಾರತದಲ್ಲಿ ಸ್ಲಂ ಜನರ ಮೇಲೆ ನಿರಂತರವಾಗಿ ನಡೆಯುತ್ತಿದೆ. ಇಂತಹ ಅಸಮಾನತೆಯ ಜಾತಿಯ ಆಧಾರಿತ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಲು ಸ್ಲಂ ಜನರ ಪರವಾಗಿ ನಾಗರೀಕ ಸಮಾಜ ನಿಲ್ಲದಿದ್ದರೇ ಅದು ಅಪರಾದವಾಗುತ್ತದೆ ಎಂದು ದು.ಸರಸ್ವತಿ ಪ್ರತಿಪಾಧಿಸಿದರು. ರಾಜ್ಯ ಸಂಘಟನಾ ಸಂಚಾಲಕರಾದ ಇಮ್ತಿಯಾಜ್ ಆರ್ ಮಾನ್ವಿ(ಗದಗ) ವಿಭಾಗೀಯ ಸಂಚಾಲಕರಾದ ಜನಾರ್ಧನ್ ಹಳ್ಳಿಬೆಂಚಿ(ರಾಯಚೂರು), ಜಿಲ್ಲಾ ಸಂಚಾಲಕರಾದ ಹುಬ್ಬಳ್ಳಿಯ ಶೋಭಾ ಕಮತಾರ್,ಕಲ್ಬುರ್ಗಿಯ ರೇಣುಕಾಸರಡಗಿ, ವಿಜಯನಗರ ಹೊಸಪೇಟೆಯ ವೆಂಕಮ್ಮ, ದಾವಣಗೆರೆಯ ರೇಣುಕಾಯಲ್ಲಮ್ಮ, ಬಳ್ಳಾರಿಯ ಶೇಖರ್‌ಬಾಬು, ತುಮಕೂರಿನ ಅರುಣ್, ಚಿತ್ರದುರ್ಗದ ಸುಧಾ, ಯಾದಗಿರಿ ಗೌರಮ್ಮ ಮಾಕ, ಬೆಂಗಳೂರು ಜಿಲ್ಲಾ ಸಮಿತಿಯ ಮಂಜುಬಾಯಿ,ಹನುಮAತುಕಟ್ಟಿಮನಿ, ತೇಜಸ್‌ಕುಮಾರ್, ಶಿವಕುಮಾರ್, ವಿಶಾಲಾಕ್ಷಿ, ರಾಮಕೃಷ್ಣ, ರೇಖಾ, ಮಹಾಲಕ್ಷಿö್ಮÃ, ತ್ರಿವೇಣಿ, ಮೇರಿ, ಜ್ಯೋತಿ, ಕಲಾವತಿ, ಮೀನಾ, ಪದ್ಮಾವತಿ, ವಿನಯ್, ಲಾವಣ್ಯ ನೇತೃತ್ವವಹಿಸಿದ್ದರು.

(Visited 1 times, 1 visits today)