ಕೊರಟಗೆರೆ: ತಾಲೂಕಿನ ಚಿನ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೆದ್ಮೇನಹಳ್ಳಿ ಸುಕದಹಳ್ಳಿ ಗ್ರಾಮಗಳ ನಡುವೆ ಇರುವ ಇತಿಹಾಸ ಪ್ರಸಿದ್ಧ ಈ ಹೊಳೆ ನಂಜುAಡೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಅದ್ದೂರಿಯಾಗಿ ನಡೆದ ಜಾತ್ರಾ ಮಹೋತ್ಸವ ಪ್ರತಿ ವರ್ಷವೂ ಶಿವರಾತ್ರಿ ಹಬ್ಬದಂದು ನಡೆಯುತ್ತದೆ ಈ ಜಾತ್ರೆಯಲ್ಲಿ ಸಾವಿರಾರು ಭಕ್ತಾದಿಗಳು ಶ್ರೀ ಹೊಳೆ ನಂಜುAಡೇಶ್ವರ ಸ್ವಾಮಿಯ ವಿಶೇಷ ಹೂಗಳಿಂದ ಅಲಂಕಾರ ಗೊಂಡಿರುವ ಶ್ರೀ ನಂಜುAಡೇಶ್ವರ ಸ್ವಾಮಿಯನ್ನ ಕಣ್ತುಂಬಿ ಕೊಳ್ಳುತ್ತಾ ದರ್ಶನ ಪಡೆದು ಪುನೀತರಾಗುತ್ತಾರೆ.ಇನ್ನು ಚಿನ್ನಹಳ್ಳಿ ಗ್ರಾಮದ ಜಗದೀಶ್ ಕುಟುಂಬದ ವತಿಯಿಂದ ಪ್ರತಿ ವರ್ಷವೂ ಬರುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಬೆಳಗ್ಗಿನಿಂದ ಸಂಜೆವರೆಗೂ ನೆರವೇರಿಸುತ್ತಾ ಬಂದಿದ್ದಾರೆ.ಕೇAದ್ರ ಸಚಿವ ವಿ. ಸೋಮಣ್ಣನವರು ಈ ಹೊಳೆ ನಂಜುAಡೇಶ್ವರ ಸ್ವಾಮಿಯ ಪರಮ ಭಕ್ತರು ಪ್ರತಿ ವರ್ಷವೂ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆಯುತ್ತಾರೆ ಇಂದು ಕೂಡ ಕೇಂದ್ರ ಸಚಿವ ವಿ. ಸೋಮಣ್ಣನವರ ಧರ್ಮಪತ್ನಿ ಶೈಲಜಾಸೋಮಣ್ಣ ಸನ್ನಿಧಾನಕ್ಕೆ ಭೇಟಿ ನೀಡಿ ಶ್ರೀ ನಂಜುAಡೇಶ್ವರನ ದರ್ಶನ ಪಡೆದು ಭಕ್ತಾದಿಗಳಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳನ್ನ ಕೊರಿದರು ಹಾಗೆಯೇ ಅನೇಕ ರಾಜಕೀಯ ವ್ಯಕ್ತಿಗಳು ಗಣ್ಯರು ಮುಖಂಡರು ಸೇರಿದಂತೆ ಕಡುಬಡವನಿಂದ ಸಿರಿವಂತನವರೆಗೆ ಈ ಸ್ವಾಮಿಗೆ ಭಕ್ತಾದಿಗಳಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ತಿಳಿಸಿದರು.
ನಂತರ ಅವರು ಮಾತನಾಡಿ, ಶ್ರೀ ಹೊಳೆ ನಂಜುAಡೇಶ್ವರ ಸ್ವಾಮಿಯು ಇತಿಹಾಸ ಪ್ರಸಿದ್ಧಿಯನ್ನು ಹೊಂದಿದ್ದು ಇಲ್ಲಿ ಬರುವ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಸ್ವಾಮಿಯಲ್ಲಿ ಕೇಳಿಕೊಳ್ಳುತ್ತಾರೆ ಅವರ ಇಷ್ಟಾರ್ಥಗಳು ನೆರವೇರಿದಂತೆ ಸ್ವಾಮಿಯ ಸನ್ನಿಧಾನಕ್ಕೆ ಬಂದು ಅರಕೆಗಳನ್ನ ತೀರಿಸುತ್ತಾರೆ ಶ್ರೀ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿ ಸೋಮವಾರ ನಿರಂತರ ಪ್ರಸಾದ ವ್ಯವಸ್ಥೆಯನ್ನು ಮಾಡುವ ಸಂಕಲ್ಪವನ್ನು ಹೊಂದಿದ್ದೇವೆ ಹಾಗೆಯೇ ಭಕ್ತಾದಿಗಳ ಸಹಕಾರದಿಂದ ದೇವಸ್ಥಾನದ ಆಡಳಿತ ಮಂಡಳಿಯಿAದ ದೇವಸ್ಥಾನವು ಬಹಳ ಸಮೃದ್ಧಿಯಿಂದ ನಿರ್ಮಾಣವಾಗಿದೆ ಇನ್ನು ಅನೇಕ ಕೆಲಸಗಳು ಆಗಬೇಕು ಇವೆಲ್ಲವೂ ಭಕ್ತಾದಿಗಳ ಸಹಕಾರದಿಂದ ಮುಂದೆ ನಡೆಯುತ್ತದೆ ಎಂದು ಭಾವಿಸುತ್ತಾ ಎಲ್ಲಾ ಭಕ್ತಾದಿಗಳಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದರು.ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಮಾತನಾಡಿ, ಶ್ರೀ ಹೊಳೆ ನಂಜುAಡೇಶ್ವರ ಸ್ವಾಮಿಯ ಸನ್ನಿಧಾನವು ಬಹಳ ಹಳೆಯ ಹಾಗೂ ಮಣ್ಣಿನಿಂದ ಕೂಡಿತ್ತು ಅದನ್ನು ತೆರವುಗೊಳಿಸಿ ಭಕ್ತಾದಿಗಳ ಸಹಕಾರದಿಂದ ಇಂದು ದೊಡ್ಡದಾದ ಬಹಳ ಸುಂದರವಾದ ಕಲ್ಲಿನ ಮಂಟಪದ ದೇವಸ್ಥಾನ ನಿರ್ಮಾಣವಾಗಿದೆ ಎಂದರು. ಇದೆ ಸಂದರ್ಭದಲ್ಲಿ ಶ್ರೀ ಹೊಳೆ ನಂಜುAಡೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಪ್ರದನಚಕರು ಸೇರಿದಂತೆ ಸಹಸ್ರಾರು ಭಕ್ತಾದಿಗಳು ಹಾಜರಿದ್ದರು.

(Visited 1 times, 1 visits today)