ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪುಣ್ಯಕ್ಷೇತ್ರಗಳಲ್ಲೊಂದಾದ ತಮ್ಮಡಿಹಳ್ಳಿ ಶ್ರೀ ಪರ್ವತ ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಅರಣ್ಯ ಹಾಗೂ ಪೈಪ್‌ಲೈನ್‌ಗಳಿಗೆ ಹಾನಿಯಾದ ಘೆಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಕುಪ್ಪೂರು-ತಮ್ಮಡಿಹಳ್ಳಯಲ್ಲಿನ ಶ್ರೀಪರ್ವತಮಲ್ಲಿಕಾರ್ಜುನ ಬೆಟ್ಟದ ಸುತ್ತಲಿನ ಕುರುಚಲು ಅರಣ್ಯ ಪ್ರದೇಶಕ್ಕೆ ಮಂಗಳವಾರ ಮದ್ಯಾಹ್ನ 1 ಗಂಟೆಯ ಸಮಯದಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡು ಕ್ಷಣಾರ್ಧದಲ್ಲಿ ಬೆಟ್ಟದ ಸುತ್ತಲೂ ವ್ಯಾಪಿಸಿದೆ. ಬೆಟ್ಟವು ಸುಮಾರು 100 ಎಕರೆ ವ್ಯಾಪ್ತಿಯ ವಿಸ್ತೀಣದವಿದ್ದು, ಜಾಲಿಗಿರಿ ಮರಗಳ ಬೀಡಾಗಿದೆ, ಇದರ ಜೊತೆಗೆ ಮುತ್ತುಗ ಮತ್ತಿತರ ಕಾಡುಮರಗಳಿಂದ ಬೆಟ್ಟ ಆವೃತಗೊಂಡಿದ್ದು ಯತೇಚ್ಚವಾಗಿ ದರ್ಬೆ ಹುಲ್ಲಿನ ಬಿಡಾಗಿದೆ. ಬೆಂಕಿಯ ಕೆನ್ನಾಲಿಗೆಯು ಒಣಗಿದ ದರ್ಬೆಹುಲ್ಲಿಗೆ ವ್ಯಾಪಿಸಿದ ಕಾರಣ ವೇಗವಾಗಿ ಎಲ್ಲಡೆ ವಿಸ್ತರಣೆಗೊಂಡಿದೆ. ಬೆಂಕಿ ಕಾಣಸಿಕೊಂಡ ತಕ್ಷಣ ಸ್ಥಳೀಯರು ಹಾಗೂ ಬೆಟ್ಟದ ಕೆಳಭಾಗದಲ್ಲಿನ ವಿರಕ್ತಮಠದ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸಿದರೂ ಸಫಲವಾಗದ ಕಾರಣ ತಕ್ಷಣ ಆಗ್ನಿಶಾಮಕ ವಾಹನ್ಕಕೆ ಕರೆಮಾಡಿ ಸ್ವಲ್ಪ ಸಮಯದಲ್ಲಿಯೇ ವಾಹನ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಸಿಬ್ಬಂದಿ ಹರಸಾಹಸದಿಂದ ಬೆಂಕಿಯನ್ನು ನಂದಿಸಲು ಯಶಸ್ವಿಯಾದರು. ಈ ಅವಘಟದಲ್ಲಿ ಬೆಟ್ಟದ ಸುತ್ತಲಿನ ಸುಮಾರು 50 ಎಕರೆ ವ್ಯಾಪ್ತಿಯ ಕುರುಚಲು ಅರಣ್ಯ ನಾಶವಾಗಿದೆ, ಕೆಳಗಿನ ಮಠದಿಂದ ಬೆಟ್ಟದ ದೇವಾಲಯಕ್ಕೆ ನೀರಿನ ಸೌಲಭ್ಯಕ್ಕೆ ಮಾಡಲಾಗಿದ್ದ ಪೈಪ್‌ಲೈನ್ ಸಂಪೂರ್ಣವಾಗಿ ಸುಟ್ಟಿದೆ ಹಾಗೂ ವಿದ್ಯುತ್ ತಂತಿಗೂ ಹಾನಿಯಾಗಿದೆ.
ಬೆಟ್ಟದ ಕೆಳಗೆ ಇದ್ದ ಮಠಕ್ಕೆ ಸೇರಿದ ಸುಮಾರು 50ಸಾವಿರಕ್ಕೂ ಮಿಗಿಲಾದ ತೆಂಗಿನಕಾಯಿಯ ಒಣಮಟ್ಟೆ ಸಂಪೂರ್ಣವಾಗಿ ಸುಟ್ಟುಹೋಗಿದೆ.

(Visited 1 times, 1 visits today)