ತುಮಕೂರು: ಕರ್ನಾಟಕ ರಾಜ್ಯ ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಹಾಗು ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 83ನೇ ಹುಟ್ಟು ಹಬ್ಬವನ್ನು ಎಸ್.ಎಸ್.ಪುರಂನ ಉಮಾಮಹಾ ಗಣಪತಿ ದೇವಾಲಯದ ಬಳಿ ಅನಾಥ ಮಕ್ಕಳಿಗೆ ಉಪಹಾರ ನೀಡುವ ಮೂಲಕ ಆಚರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 83ನೇ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್,ಬಿ.ಎಸ್.ಯಡಿಯೂರಪ್ಪ ಓರ್ವ ಹುಟ್ಟು ಹೋರಾಟಗಾರರು,ಸೈಕಲ್‌ಮೇಲೆ ಶಿಕಾರಿಪುರದಿಂದ ವಿಧಾನಸೌಧದವರೆಗೆ ಯಾತ್ರೆ ಕೈಗೊಂಡು, ಬಿಜೆಪಿ ಪಕ್ಷವನ್ನು ಹಂತ ಹಂತವಾಗಿ ಅಧಿಕಾರಕ್ಕೆ ತಂದವರು.
ಹಿಡಿದ ಕೆಲಸವನ್ನು ಎಂದಿಗೂ ಕೈಬಿಡದೆ ನಡೆಸುತ್ತಿದ್ದ ಅವರ ಜೀವನ ಇತರೆ ರಾಜಕಾರಣಿಗಳಿಗೆ ಮಾದರಿ.83ನೇ ವಯಸ್ಸಿನಲ್ಲಿಯೂ ಪಕ್ಷವನ್ನು ಮುನ್ನೆಡೆಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಗವಂತ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಸಂಚಾಲಕ ಸದಾಶಿವಯ್ಯ ಮಾತನಾಡಿ,ಕರ್ನಾಟಕ ರಾಜ್ಯದ ಅಭಿವೃದ್ದಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ಅಪಾರವಾಗಿದೆ.1972 ಶಿಕಾರಿಪುರದಲ್ಲಿ ಜನಸಂಘದ ಜಿಲ್ಲಾಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ ದುಮುಕಿದ ಅವರು,ಬಗರ್ ಹುಕ್ಕಂ ಸಾಗುವಳಿದಾರರ ವೇದಿಕೆ ಅಧ್ಯಕ್ಷರಾಗಿ ಹಲವಾರು ಹೋರಾಟಗಳನ್ನು ನಡೆಸಿ,ಜನಾನುರಾಗಿಗಳಾದರೆ, ಹತ್ತಾರು ವರ್ಷಗಳಿಂದಲೂ ದಕ್ಷಿಣ ಭಾರತದಲ್ಲಿ ರಾಜಕೀಯ ಅಸ್ಥಿತ್ವ ಕಂಡುಕೊಳ್ಳಲು ಬಿಜೆಪಿ ಕನಸನ್ನು 2008ರಲ್ಲಿ ಮುಖ್ಯಮಂತ್ರಿಯಾಗುವ ಮೂಲಕ ನನಸು ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ.ಒಂದು ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುತ್ತದೆ ಎಂಬ ಮಾತುಗಳು ಕೇಳಿ ಬರುತಿದ್ದವು. ಬಿಜೆಪಿ ಕಾರ್ಯಕರ್ತರ ವೇದಿಕೆ ಹಾಗೂ ಬಿ.ಎಸ್.ವೈ ಅಭಿಮಾನಿ ಬಳಗದಿಂದ ಬಿ.ಎಸ್.ವೈ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
(Visited 1 times, 1 visits today)