ಹುಳಿಯಾರು: ಹುಳಿಯಾರು ಹೋಬಳಿ ಕಂಪನಹಳ್ಳಿ ಬಳಿಯ ತೆಂಗಿನ ತೋಟವೊಂದರಲ್ಲಿ ನೀರಾ ಇಳಿಸುತ್ತಿದ್ದ ರೈತನ ಮೇಲೆ ಅಬಕಾರಿ ಅಧಿಕಾರಿಗಳು ಶುಕ್ರವಾರ ದಿಡೀರ್ ದಾಳಿ ಮಾಡಿದ್ದರು. ನೀರಾ ಇಳಿಸುತ್ತಿದ್ದ ರೈತ ಈರಣ್ಣ ಅವರನ್ನು ಬಂಧಿಸಿ ನೀರಾ ಇಳಿಸಲು ಬಳಸುತ್ತಿದ್ದ ಪರಿಕರಗಳನ್ನು ವಶ ಪಡಿಸಿಕೊಂಡರು. ವಿಚಾರ ತಿಳಿದ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಘಟನಾ ಸ್ಥಳಕ್ಕೆ ದೌಡಾಯಿಸಿ ಅಬಕಾರಿ ಜೀಪಿಗೆ ಅಡ್ಡ ಕುಳಿತು ಈರಣ್ಣ ಅವನ್ನು ಬಿಡಿಸಿಕೊಂಡ ಪ್ರಕರಣ ನಡೆದಿದೆ. ರೈತ ಹೋರಾಟಗಾರ ಪ್ರೊ.ಎಂ.ಡಿ.ನAಜುAಡಸ್ವಾಮಿ ಅವರ ನೀರಾ ಚಳುವಳಿಯಿಂದ ಪ್ರಭಾವಿತರಾಗಿ ಹುಳಿಯಾರಿನ ಈರಣ್ಣ ಕಳೆದ ಮೂರು ದಶಕಗಳಿಂದಲೂ ಈ ಭಾಗದಲ್ಲಿ ನೀರಾ ಇಳಿಸುವ ಮೂಲಕ ನೀರಾ ಈರಣ್ಣನೆಂದೆ ಪ್ರಖ್ಯಾತರಾಗಿದ್ದಾರೆ.
ಎಂದಿನAತೆ ಶುಕ್ರವಾರವೂ ಸಹ ನೀರಾ ಇಳಿಸುವಾಗ ಏಕಾಏಕಿ ಅಬಕಾರಿ ಇನ್ಸ್ಪೆಕ್ಟರ್ ಎ.ಕೆ.ನವೀನ್ ಅವರು ತಮ್ಮ ಹತ್ತನ್ನೆರಡು ಮಂದಿ ಪಡೆಯ ಜೊತೆ ದಾಳಿ ಮಾಡಿ ಈರಣ್ಣ ಅವನ್ನು ಬಂಧಿಸಿ ಅಲ್ಲಿದ್ದ ನೀರಾ, ನೀರಾ ಇಳಿಸಲು ಬಳಸುತ್ತಿದ್ದ ಪರಿಕರಗಳನ್ನು ವಶ ಪಡಿಸಿಕೊಂಡರು. ವಿಚಾರ ತಿಳಿದ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಹಾಗೂ ತಾಲೂಕು ಕಾರ್ಯಧ್ಯಕ್ಷ ಕರಿಯಪ್ಪ ಅವರು ಸ್ಥಳಕ್ಕೆ ದೌಡಾಯಿಸಿ ಅಬಕಾರಿ ಅಧಿಕಾರಿಳನ್ನು ತರಾಟೆಗೆ ತೆಗೆದುಕೊಂಡರು. ಹಳ್ಳಿಹಳ್ಳಿಯಲ್ಲಿ ಮದ್ಯವನ್ನು ಟೀ ಮಾರಿದಂತೆ ಮಾರುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದೆ ರೈತನೊಬ್ಬ ನೀರಾ ಕಟ್ಟಿರುವುದಕ್ಕೆ ಬಂಧಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ ಈರಣ್ಣನನ್ನು ಬಿಡುಗಡೆ ಮಾಡುವವರೆವಿಗೂ ವಾಹನ ಮುಂದೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ ನಿಯಮವನ್ನು ಗಾಳಿಗೆ ತೂರಿ ಮನಸ್ಸೋ ಇಚ್ಚೆ ಇಳಿಸುತ್ತಿರುವುದರಿಂದ ದಾಳಿ ಮಾಡಲಾಗಿದೆ. ಅನುಮತಿ ಪಡೆದು ನಿಯಮದ ಪ್ರಕಾರ ನೀರಾ ಇಳಿಸಿದರೆ ನಮ್ಮ ತಕರಾರಿಲ್ಲ ಎಂದು ಸಮಜಾಯಿಸಿ ನೀಡಿದರಲ್ಲದೆ ಮತ್ತೆ ನೀರಾ ಇಳಿಸುವುದಿಲ್ಲವೆಂದು ಬರೆದುಕೊಟ್ಟರೆ ಈರಣ್ಣನನ್ನು ಬಿಡುವುದಾಗಿ ತಿಳಿಸಿದರು.
(Visited 1 times, 1 visits today)