ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿಯ ಪದವಿ ಕಾಲೇಜಿನ ಆವರಣದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
1999-2000 ಸಾಲಿನ ಏಳನೇ ತರಗತಿ ವ್ಯಾಸಂಗ ಮಾಡಿದ ಕತ್ತಿಮರ ಶಾಲೆಯ ವಿದ್ಯಾರ್ಥಿಗಳು. 2002-03 ನೇಸಾಲಿನ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡಿದ ಜಯಪ್ರಕಾಶ ಪ್ರೌಢ ಶಾಲೆಯ ವಿದ್ಯಾರ್ಥಿಗಳು, 2004-05 ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒಂದೆಡೆ ಸೇರಿ ಕಾರ್ಯಕ್ರಮವನ್ನು ನಡೆಸಿದರು.
25 ವರ್ಷಗಳ ನಂತರ ಒಂದಾದ ಗೆಳೆಯ ಗೆಳತಿಯರು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ವಂದಿಸುವ ಹಾಗೂ ತಮ್ಮ ಬಾಲ್ಯದ ನೆನಪುಗಳನ್ನು ಮರುಕಳಿಸುವ ಅಂಗವಾಗಿ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗಾಯತ್ರಮ್ಮ, ಪದ್ಮಮ್ಮ, ಶಾರದಮ್ಮ, ರಾಮೇಗೌಡರು, ಶಂಕರಲಿAಗಪ್ಪ, ಸುರೇಶ್, ಶಾಂತಕುಮಾರ್, ತಮ್ಮಣ್ಣ, ನವೀನ್, ಕವಿತಾ, ಸಿದ್ದಗಂಗಮ,್ಮ ನೀಲಮ್ಮ, ಲಕ್ಷ್ಮಯ್ಯ, ಪಾಂಡಣ್ಣ, ರಂಗಸ್ವಾಮಿ, ಸೇರಿದಂತೆ ನಿವೃತ್ತ ಶಿಕ್ಷಕರಿಗೆ ಗೌರವಿಸಲಾಯಿತು.
ಹಿರಿಯ ವಿದ್ಯಾರ್ಥಿ ರಮೇಶ್.ಜಿ.ಎಸ್ ಮಾತನಾಡಿ ತನ್ನ ಬಾಲ್ಯದ ಶಾಲೆಗಳಲ್ಲಿ ಪ್ರೀತಿಯಿಂದ ಮುದ್ದು ಮಾಡಿ ವಿದ್ಯೆ ಕಲಿಸಿದ ಗುರುಗಳನ್ನು ಹಾಗೂ ಶಾಲಾ ದಿನಗಳಲ್ಲಿ ಸ್ನೇಹಿತರೊಡನೆ ಕಳೆದ ದಿನಗಳನ್ನು ನೆನೆಸಿಕೊಳ್ಳುತ್ತಾ ಇಪ್ಪತೈದು ವರ್ಷಗಳ ನಂತರ ಶಾಲಾ ಮಕ್ಕಳಂತೆ ಗುರುಗಳ ಮುಂದೆ ನಿಲ್ಲಲು ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಯಿತು ಎಂದರು.
ಗುರುವAದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಶಾಂತ್‌ಕುಮಾರ್ ಇಂದಿನ ಶಿಕ್ಷಣ ವ್ಯವಸ್ಥೆಗೂ ಕಳೆದ 20 ವರ್ಷಗಳ ಶಿಕ್ಷಣದ ವ್ಯವಸ್ಥೆಗೂ ಬಹಳ ಬದಲಾವಣೆಗಳು ಆಗಿದ್ದು ಯಾವ ಕಾಲದ ಶಿಕ್ಷಣವಾದರೂ ಸಹ ವಿದ್ಯಾರ್ಥಿಗಳು ಶಿಕ್ಷಕರಿಗೆ, ತಂದೆ ತಾಯಿಗೆ, ದೇಶಕ್ಕೆ ಗೌರವ ಕೊಡುವುದನ್ನು ಕಲಿತಾಗ ವಿದ್ಯೆಗೆ ನಿಜವಾದ ಬೆಲೆ ಹಾಗೂ ಮೌಲ್ಯ ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪವನ್, ಉದಯ್, ದೇವರಾಜು, ಮಂಜುನಾಥ್, ಓಂಕಾರಮೂರ್ತಿ, ನಂದಿನಿ, ಇಂದುಮತಿ, ರಾಣಿ, ಸವಿತಾ, ಮುಂತಾದವರು ಭಾಗವಹಿಸಿದ್ದರು. ನೊಣವಿನಕೆರೆ ಹೋಬಳಿಯ ಪದವಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

(Visited 1 times, 1 visits today)