ತುಮಕೂರು: ನಗರದಜಿಲ್ಲಾ ಸಾರ್ವಜನಿಕಆಸ್ಪತ್ರೆಯಲ್ಲಿ ಹೊರಗುತ್ತಿಗೆಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಿ ಗ್ರೂಪ್ ನೌಕರರುತಮ್ಮ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಬುಧವಾರ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಅಸ್ಗರ್ ಬೇಗ್‌ಅವರಿಗೆ ಮನವಿ ಪತ್ರಸಲ್ಲಿಸಿದರು.
ಈ ನೌಕರರ ಹೋರಾಟದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಗುತ್ತಿಗೆ ಪದ್ದತಿಯನ್ನು ರದ್ದು ಮಾಡಿ ನಮ್ಮನ್ನು ನೇಮಕ ಮಾಡಿಕೊಂಡು ನೇರ ವೇತನ ಪಾವತಿ ಮಾಡುವ ವ್ಯವಸ್ಥೆಯಡಿ ತರಬೇಕು ಎಂದು ನೌಕರು ಮನವಿ ಮಾಡಿದರು.
ಗುತ್ತಿಗೆ ಏಜೆನ್ಸಿಯವರು ಸಕಾಲದಲ್ಲಿ ತಮಗೆ ವೇತನ ನೀಡುವುದಿಲ್ಲ, ಇದರಿಂದ ಸಂಸಾರ ನಿರ್ವಹಣೆಗೆ ಕಷ್ಟವಾಗುತ್ತಿದೆ. ಅಲ್ಲದೆ, ನಮಗೆ ಪಿ.ಎಫ್, ಇಎಸ್‌ಐ ನಂಬರ್ ಕೊಟ್ಟಿಲ್ಲ, ಪ್ರತಿ ತಿಂಗಳ ಹತ್ತನೇ ತಾರೀಖಿನೊಳಗೆ ವೇತನ ನೀಡುವಂತೆಕ್ರಮ ಕೈಗೊಳ್ಳಲು ಶಸ್ತçಚಿಕಿತ್ಸಕರಿಗೆ ಕೋರಿಕೆ ಸಲ್ಲಿಸಿದರು.
ಹೊರಗುತ್ತಿಗೆ ಪದ್ದತಿ ವಿಚಾರವಾಗಿ ಸರ್ಕಾರತೀರ್ಮಾನ ಮಾಡಬೇಕು, ಅಲ್ಲಿಯವರೆಗೂ ಇದೇ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಅನಿವಾರ್ಯ ಎಂದು ಹೇಳಿದ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಅಸ್ಗರ್ ಬೇಗ್, ನಿಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತಕ್ರಮ ಕೈಗೊಳ್ಳಲು ಮನವಿ ಮಾಡುತ್ತೇನೆಎಂದು ಹೇಳಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾ ವೇದಿಕೆ ರಾಜ್ಯಾಧ್ಯಕ್ಷ ಮೀಸೆ ಸತೀಶ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್, ಡಾ.ಅಂಬೇಡ್ಕರ್
ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ರಾಮಚಂದ್ರರಾವ್, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಶಬ್ಬೀರ್‌ಅಹ್ಮದ್, ಮುಖಂಡರಾದ ಭಾನುಪ್ರಕಾಶ್, ರೇಖಾ, ಮಲ್ಲೇಶಯ್ಯ ಭಾಗವಹಿಸಿದ್ದರು.
(Visited 1 times, 1 visits today)