ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಬುಧವಾರ ಬಹಿರಂಗ ಹರಾಜು ಇಸ್ತಿಹಾರ್ ಏರ್ಪಡಿಸಿದ್ದರು. ಇದರಲ್ಲಿ ಪಂಚಾಯ್ತಿಯ ಅನುಪಯುಕ್ತ ಸಾಮಗ್ರಿಗಳ ಹರಾಜು ಮಾಡಿದ್ದರು. ಆದರೆ ಕೊಳವೆಬಾವಿಗಳ ಪಂಪ್ ಮತ್ತು ಮೋಟರ್ ಇಡುವುದಾಗಿ ಹೇಳಿ ಇಡದೆ ಯಾಮಾರಿಸಿದರು ಎಂದು ಹರಾಜಿಗೆ ಬಂದಿದ್ದ ಗುಜರಿ ವ್ಯಾಪಾರಿಗಳು ಆರೋಪಿಸಿದರು.
ಹರಾಜು ಪ್ರಕಟಣೆ ನೋಡಿದ ತಕ್ಷಣ ಪಪಂ ಮುಖ್ಯಾಧಿಕಾರಿ ನಾಗಭೂಷಣ್ ಅವರಿಗೆ ದೂರವಾಣಿ ಕರೆ ಮಾಡಿ ಹರಾಜಿಗೆ ಏನೇನು ಐಟಂ ಇಡುತ್ತಿದ್ದೀರಿ ಎಂದು ಕೇಳಿದಾಗ ನಿರುಪಯುಕ್ತ ಪಂಪ್ ಮೋಟರ್ ಸೇರಿದಂತೆ ವಿವಿಧ ಕಬ್ಬಿಣದ ಗುಜರಿ ಐಟಂಗಳಿವೆ ಎಂದಿದ್ದರು. ಹಾಗಾಗಿ ಹರಾಜಿನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿAದ ಬಂದಿದ್ದೇನೆ. ಇಲ್ಲಿ ನೋಡಿದರೆ ಟ್ಯೂಬ್ ಲೈಟ್‌ನ ಫ್ರೇಮ್‌ಗಳೇ ಅಧಿಕವಾಗಿದ್ದು ೫ ಸಾವಿರ ರೂ.ಗಳಿಗೂ ಬೆಲೆ ಬಾಳದ ಸಾಮಗ್ರಿಗಳಿವೆ ಎಂದು ಗುಜರಿ ವ್ಯಾಪಾರಿ ಪಾಷಾ ಆರೋಪಿಸಿದರು. ಅಲ್ಲದೆ ನಿಮ್ಮನ್ನು ಬಾ ಎಂದು ಕರೆದಿದ್ದೇವೆಯೇ ಎಂದು ಅವಮಾನಿಸಿದ್ದಾರೆ ಎಂದರು.
ಹುಳಿಯಾರಿನ ಗುಜರಿ ವ್ಯಾಪಾರಿ ನಾಗಣ್ಣ ಅವರು ಮಾತನಾಡಿ ಈ ಹಿಂದೆ ಗೋಡನ್‌ನಿಂದ ಗುಜರಿ ಐಟಂ ಹೊರತೆಗೆದಾದ ೧೦ ಸಣ್ಣ ಮೋಟರ್, ೫ ದೊಡ್ಡ ಮೋಟರ್, ನಾಲ್ಕೆöÊದು ಪಂಪ್‌ಗಳು ಇದ್ದವು. ಇವುಗಳನ್ನೂ ಹರಾಜಿನಲ್ಲಿಡುವಿರಾ ಎಂದು ಕೇಳಿದಾಗ ಹೌದು ಎಂದಿದ್ದರು. ಆದರೆ ಈಗ ಹರಾಜಿಗೆ ಬಂದು ನೋಡಿದರೆ ಮೋಟರ್‌ಗಳೇ ಇಲ್ಲದಾಗಿದೆ. ಎರಡ್ಮೂರು ಸಾವಿರ ರೂ. ಬೆಲೆ ಬಾಳದ ಐಟಂ ಕೂಗಲು ೧೦ ಸಾವಿರ ಠೇವಣಿ ಮಾಡಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಮುಖ್ಯಾಧಿಕಾರಿಗಳು ಪ್ರತಿಕ್ರಿಯಿಸಿ ಮೋಟರ್‌ಗಳು ಉಪಯುಕ್ತವೋ, ಅನುಪಯುಕ್ತವೋ ಎಂಬುದನ್ನು ಎಂಜಿನಿಯರ್ ಅವರಿಂದ ವರದಿ ಪಡೆದು ಹರಾಜಿಗೆ ಇಡಲಾಗುವುದು. ಈಗ ಇಲ್ಲಿರುವ ಸಾಮಗ್ರಿಗಳನ್ನು ಮಾತ್ರ ಹರಾಜು ಹಾಕಲಾಗುವುದು ಎಂದೇಳಿ ಹರಾಜು ಪ್ರಕ್ರಿಯೆ ಆರಂಭಿಸಿದರು.
(Visited 1 times, 1 visits today)