ಕೊರಟಗೆರೆ: ಕೊರಟಗೆರೆ ತಾಲ್ಲೂಕಿನಲ್ಲಿ ನೂತನವಾಗಿ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ತಾಲ್ಲೂಕಿನ ರೈತರಿಗೆ ಅನುಕೂಲವಾಗಲು ರಾಗಿ ಖರೀದಿ ಕೇಂದ್ರವನ್ನು ತಾಲ್ಲೂಕಿನಲ್ಲಿ ತೆರೆಯುವಂತೆ ಹಲವು ವರ್ಷಗಳ ಬೇಡಿಕೆಯನ್ನು ರೈತರು ಇಟ್ಟಿದ್ದರು, ಇದನ್ನು ಮನಗೊಂಡ ಗೃಹಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಕೆ.ಡಿ.ಬಿ. ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನಲ್ಲಿ ಶೀಘ್ರವಾಗಿ ರಾಗಿ ಖರೀದಿ ಕೇಂದ್ರವನ್ನು ತೆರೆಯುವಂತೆ ಅಧಿಕಾರಿಗಳಗೆ ಆದೇಶಿಸಿದರು, ಸಚಿವರ ಆದೇಶದ ಅನ್ವಯ ತಾಲ್ಲೂಕಿನ ಅಕ್ಕಿರಾಂಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಮಾರ್ಚ್ 6ರ ಬುಧವಾರದಂದು ತೆರೆಯಲಾಯಿತು. ರಾಗಿ ಖರೀದಿ ಕೇಂದ್ರ ಪ್ರಾರಂಭವಾದ ದಿನದಿಂದ ರೈತರು ದಾಖಲೆ ಸಂಖ್ಯೆಯಲ್ಲಿ ರಾಗಿಯನ್ನು ಎ.ಪಿ.ಎಂ.ಸಿ ಮಾರುಕಟ್ಟೆಗೆ ನೀಡುತ್ತಿದ್ದಾರೆ, ಪ್ರತಿ ಕ್ವಿಂಟಲ್‌ಗೆ ಸರ್ಕಾರವು 4290 ಸಾವಿರ ಹಣವನ್ನು ನಿಗಧಿಪಡಿಸಲಾಗಿದ್ದು ಒಬ್ಬ ರೈತ 20 ಕ್ವಿಂಟಲ್‌ವರೆಗೆ ರಾಗಿಯನ್ನು ನೀಡಬಹುದಾಗಿದೆ ಮಾರಾಟ ಮಾಡಿದ ಹಣವನ್ನು ಸರ್ಕಾರವು ರೈತರ ಖಾತೆಗೆ ನೇರ ಜಮಾವಣೆ ಮಾಡುತ್ತz.
ತಾಲ್ಲೂಕಿನ ರೈತರು ಮಧುಗಿರಿ ಅಥವಾ ತುಮಕೂರು ಎ.ಪಿ.ಎಂ.ಸಿ. ಗಳಿಗೆ ರಾಗಿ ಮಾರಾಟ ಮಾಡಲು ಹೋದ ಸಂದರ್ಭದಲ್ಲಿ 2,3 ದಿನಗಳ ಕಾಲ ಕಾದು ರಾಗಿ ಮಾರಾಟ ಮಾಡುತ್ತಿದ್ದ ಕಷ್ಟವು ತಪ್ಪಿದ್ದು ವಾಹನ ವೆಚ್ಚವು ಉಳಿಯುತ್ತದೆ. ಈ ನೂತನ ರಾಗಿ ಖರೀದಿ ಕೇಂದ್ರ ತೆರೆದಿದ್ದಕ್ಕಾಗಿ ತಾಲ್ಲೂಕಿನ ರೈತರು ಹರ್ಷ ವ್ಯಕ್ತ ಪಡಿಸಿದ್ದಾರೆ, ರಾಗಿ ಕೇಂದ್ರವನ್ನು ಗುರುವಾರ, ಶುಕ್ರವಾರ, ಶನಿವಾರದಂದು ತೆರೆಯಲಾಗುತ್ತದೆ ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕಾಗುತ್ತದೆ.
ಮಂಜುನಾಥ್ ತಹಶೀಲ್ದಾರ್ ಕೊರಟಗೆರೆ- ಗೃಹಸಚಿವ ಡಾ.ಜಿ.ಪರಮೇಶ್ವರರವರ ಆದೇಶದಂತೆ ತಾಲ್ಲೂಕಿನ ರೈತರಿಗೆ ಅನುಕೂಲವಾಗುವಂತೆ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದೆ, ಇಲ್ಲಿ ಯಾವುದೇ ಮದ್ಯವರ್ತಿಗಳ ತೊಂದರೆ ಇಲ್ಲದೆ ರೈತರು ನೇರವಾಗಿ ರಾಗಿಯನ್ನು ಮಾರಾಟ ಮಾಡಬಹುದಾಗಿದೆ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ರುದ್ರಪ್ಪ ಎ.ಪಿ.ಎಂ.ಸಿ. ವ್ಯವಸ್ಥಾಪಕ – ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಮಾಡುತ್ತಿದ್ದು ರೈತರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ನೊಂದಣಿ ಸಂಖ್ಯೆಯನ್ನು ತಂದು ನಮಗೆ ನೀಡಿದರೆ ಅವರಿಗೆ ರಾಗಿ ಮಾರಾಟ ಮಾಡಲು ಸಮಯವನ್ನು ನೀಡುತ್ತೇವೆ, ಇನ್ನೂ 8 ಲಕ್ಷ ನೊಂದಣಿ ಬಾಕಿ ಇದ್ದು ರೈತರು ಸಾವಾವಕಾಶವಾಗಿ ರಾಗಿ ಮಾರಾಟ ಮಾಡಬಹುದಾಗಿದೆ.
ಶಿವರಾಜು ರೈತ ಚಿನ್ನೇನಹಳ್ಳಿ ಕೋಳಾಲ ಹೋಬಳಿ – ಕೊರಟಗೆರೆ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆದಿರುವುದು ನಮಗೆ ಸಂತಸ ತಂದಿದೆ ಈ ಕೇಂದ್ರದಲ್ಲಿ ಸುಲಭವಾಗಿ ರಾಗಿಯನ್ನು ಖರೀದಿಗೆ ನೀಡಬಹುದಾಗಿದೆ, ಇದಕ್ಕಾಗಿ ಗೃಹಸಚಿವರಿಗೆ ಧನ್ಯವಾದ ತಿಳಿಸುತ್ತೇವೆ, ಯುಗಾದಿ ಹಬ್ಬ ಹತ್ತಿರವಿರುವುದರಿಂದ ನಮಗೆ ಬೇಗ ಸರ್ಕಾರವು ಹಣ ನೀಡಿದರೆ ಅನುಕೂಲವಾಗುತ್ತದೆ.
(Visited 1 times, 1 visits today)