ಹುಳಿಯಾರು: ಹುಳಿಯಾರು ಹೋಬಳಿಯ ಬೋರನಕಣಿವೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡಸುತ್ತಿದ್ದ ಹಸಿರು ಶಾಲಾ ಕಾರ್ಯಕ್ರಮ ಶನಿವಾರ ಸಂಪನ್ನಗೊAಡಿತು. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ನಡೆದ ಚಟುವಟಿಕೆಯಾಧಾರಿತ ಕಾರ್ಯಕ್ರಮ ಮಕ್ಕಳಲ್ಲಿ ಪರಿಸರ ಪ್ರಜ್ಞೆಮೂಡಿಸುವಲ್ಲಿ ಯಶ ಕಂಡಿದೆ.
ಮಾಸ್ ಟ್ರಸ್ಟ್ ಅಧ್ಯಕ್ಷೆ ಎನ್,ಇಂದಿರಮ್ಮ ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ಯಾವ ಶಾಲೆಯಲ್ಲೂ ನಡೆದಿರಲು ಸಾಧ್ಯವಿಲ್ಲ. ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳ ಸ್ವಪ್ರೇರಣೆಯಿಂದ ಈ ಕಾರ್ಯಕ್ರಮ ನಡೆಸಲಾಯಿತು. ಪಠ್ಯಾದಾರಿತ ಮತ್ತು ಜೀವನ್ಮಖಿ ಆಶಯ ಹೊಂದಿದ್ದ ಕಾರ್ಯಕ್ರಮ ಮಕ್ಕಳಲ್ಲಿ ಪಠ್ಯ ವಿಷಯ ಆಸಕ್ತಿ ಬೆಳೆಸುವುದಕ್ಕಿಂತ ಪರಿಸರ ಪ್ರೀತಿಯನ್ನು ಹೆಚ್ಚು ಬೆಳೆಸಿದೆ ಎಂದು ಹೇಳಿದರು.
ವಿಶ್ರಾಂತ ಪ್ರಾಂಶುಪಾಲರಾದ ಯು.ಪಿ. ಉಮಾದೇವಿ ಮಾತನಾಡಿ ಪರಿಸರ ಪ್ರೀತಿಯನ್ನು ಬೆಳಸಿಕೊಂಡಿರುವ ನೀವು ತರಗತಿಯಲ್ಲಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ನಮಗೆ ಖುಷಿ ತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮಾಸ್ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣಪ್ಪ ಮಾತನಾಡಿ ನಾವೆಲ್ಲರೂ ಪಕ್ಷಿ ತಜ್ಞ ಸಲಿಂ ಆಲಿ ಯವರ ಹೇಳಿಕೆ ಮನುಷ್ಯನಿಲ್ಲದೆ ಪ್ರಾಣಿ ಪಕ್ಷಿಗಳ ಬದುಕಬಲ್ಲವು, ಆದರೆ ಸಸ್ಯಗಳು ಮತ್ತು ಪ್ರಾಣಿಗಳು ಇಲ್ಲದೆ ಮನುಷ್ಯ ಬದುಕಲಾರ ಎಂಬ ಮಾತನ್ನು ನೆನಪಿಟ್ಟುಕೊಂಡು ನಮ್ಮ ಜೀವನವನ್ನು ರೂಢಿಸಿ ಕೊಳ್ಳಬೇಕೆಂದರು.
ಸೀಕೋ ಸಂಸ್ಥೆ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಬಿ.ಕೆ.ಹರೀಶ್‌ಕುಮಾರ್ ಮಾತನಾಡಿ, ಹಸಿರು ಶಾಲಾ ಕಾರ್ಯಕ್ರಮ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳಸಿದೆ ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಪ್ರಾಸ್ತಾವಿಕ ಮಾತನಾಡಿದ ಮುಖ್ಯ ಶಿಕ್ಷಕ ಟಿ.ಎನ್.ರಮೇಶ್ ಸಂಪನ್ಮೂಲ ವ್ಯಕ್ತಿಗಳು ತಮ್ಮ ತನು,ಮನ,ಧನ ಎಲ್ಲವನ್ನು ಅರ್ಪಿಸಿದ್ದಾರೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಇನ್ಫಿನಿಟಿ ಟ್ರಸ್ಟಿನ ಅಧಿಕಾರಿ ಹರಿ ನಿಧಿ ಭಾಗವಹಿಸಿದ್ದರು. ಪೂರ್ಣಮ್ಮ, ಬಸವರಾಜು, ವಸಂತ್‌ಕುಮಾರ್, ಮನುಕುಮಾರ್, ರೇಖಾ, ಅನಿತ, ಓಂಕಾರ್ ಭಾಗವಹಿಸಿದ್ದರು. ವಿಜೇತರಾದ ಎಂ.ವಿಸ್ಮಯ ಮತ್ತು ಸೌಮ್ಯ ರವರಿಗೆ ಪ್ರಶಸ್ತಿ ಫಲಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದ ವಿದ್ಯಾರ್ಥಿಗಳಿಗೆ ಮತ್ತು ಕೈತೋಟ ಬೆಳಸಿದ ವಿದ್ಯಾರ್ಥಿಗಳೆಲ್ಲರಿಗೂ ಪ್ರಶಸ್ತಿ ಪತ್ರ ಮತ್ತು ಭಾರತ್ ಇನ್ಫಿನಿಟಿ ಅವರಿಂದ ಮಕ್ಕಳಿಗೆ ಪರೀಕ್ಷೆ ಬರೆಯುವ ಪ್ಯಾಡ್ ಗಳನ್ನು ನೀಡಲಾಯಿತು.

(Visited 1 times, 1 visits today)