ಗುಬ್ಬಿ: ಹನಿಟ್ರ‍್ಯಾಪ್‌ಗೆ ಸಿಲುಕಿ ಲಲನೆಗೆ ಲಕ್ಷಾಂತರ ರೂಗಳ ದಂಡ ತೆತ್ತ ಗುಬ್ಬಿ ಪಟ್ಟಣ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಜಿ.ಎನ್ ಅಣ್ಣಪ್ಪಸ್ವಾಮಿ ನಂತರದ ದಿನಗಳಲ್ಲಿ ಬರೋಬ್ಬರಿ ೨೦ ಲಕ್ಷ ರೂಗಳ ಹಣದ ಬೇಡಿಕೆಗೆ ಹೆದರಿ ಗುಬ್ಬಿ ಪೊಲೀಸರ ಮೊರೆಹೋಗಿ ದೂರು ದಾಖಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಪಟ್ಟಣ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಜೊತೆಗೆ ಹಾಲಿ ಸದಸ್ಯ ಜಿ.ಎನ್ ಅಣ್ಣಪ್ಪ ಸ್ವಾಮಿ ಲಲನೆಯರ ಪ್ರೇಮಪಾಶದ ಮೋಸದ ಬಲೆಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ.
ಫೇಸ್ ಬುಕ್ ನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಗೆ ಒಪ್ಪಿಗೆ ನೀಡಿ ನಂತರ ಹಾಯ್, ಬಾಯ್, ಗುಡ್ ಮಾರ್ನಿಂಗ್, ಅಂತೆಲ್ಲ ಬೆಳೆದ ಸಲುಗೆ ಮಿತಿ ಮೀರಿ ವಿಡಿಯೋ ಕಾಲಿಂಗ್ ಮಾಡಿ ಮಾತನಾಡುವ ಘಟ್ಟ ತಲುಪಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಹಲವು ಕಡ ಬಲವಂತವಾಗಿ ಕರೆಸಿಕೊಂಡು ಮದುವೆಯಾಗುವಂತೆ ಒತ್ತಾಯಿಸುತ್ತಿದಳು ಎನ್ನಲಾಗಿದೆ.
ನಾನು ನಿಮ್ಮನ್ನ ಪ್ರೀತಿಸುತ್ತಿದ್ದೇನೆ ಮದುವೆ ಮಾಡಿಕೊಳ್ಳಿ ಎಂದು ಒತ್ತಡ ಹೇರುತ್ತಿದ್ದು ಇದಕ್ಕೆ ಒಪ್ಪದಿದ್ದ ಕಾರಣ ಸ್ನೇಹಿತರೊಂದಿಗೆ ಸೇರಿ ಅವಳ ಜೊತೆಗಿನ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ಹಣದ ಬೇಡಿಕೆ ಇಟ್ಟಿದ್ದಾಳೆ ಎಂಬುದು ಮಾಜಿ ಅಧ್ಯಕ್ಷನ ಗಂಭೀರ ಆರೋಪವಾಗಿದೆ.
ಅದೇನೇ ಇರಲಿ ನಿಜಕ್ಕೂ ಇಲ್ಲಿ ನಡೆದಿರುವು ದಾದರು ಏನು. ಬಿಜೆಪಿ ಮುಖಂಡ ಮತ್ತು ಪ.ಪಂ ಮಾಜಿ ಅಧ್ಯಕ್ಷರೇ ಹೇಳುವ ಹಾಗೆ ಮೊದಲಿಗೆ ಗೆಳೆತನ ನಂತರ ಭೇಟಿ ನಂತರ ಮಹಿಳೆಗೆ ದಿಢೀರ್ ಪ್ರೇಮ, ಆಮೇಲೆ ಅಲ್ಲಲ್ಲಿ ಮೀಟಿಂಗ್ ಮಾಡಿಕೊಂಡು ಒಂದು ಕಡೆ ಸೇರೋದು ಈಗೆಲ್ಲಾ ನಡೆಯುತ್ತಿದ್ದ ಸಲುಗೆಗೆ ಎನ್ನನ್ನಬೇಕೋ ಗೊತ್ತಿಲ್ಲ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ಬೆದರಿಸಿ ನಾನು ಕರೆದ ಕೂಡಲೇ ಬರುವಂತೆ ತಾಕೀತು ಮಾಡಿ ಅಲ್ಲಲ್ಲಿ ಕರೆಸಿಕೊಂಡು ರೂಮ್ ಮಾಡಿಸಿ ಅವಳಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದಳು ಎಂದು ಉಲ್ಲೇಖಿಸಲಾಗಿದೆ.
ಇದೆಲ್ಲದರ ನಡುವೆ ದೊಡ್ಡಬಳ್ಳಾಪುರ ಎಂಬಲ್ಲಿಗೆ ತೆರಳಿ ಮಹಿಳೆ ಜೊತೆ ರೂಮ್ ನಲ್ಲಿ ಇದ್ದಾಗ ದಿಢೀರ್ ಪ್ರತ್ಯಕ್ಷವಾದ ಇಬ್ಬರು ಹುಡುಗರಿಗೂ ಆ ಮಹಿಳೆಗೂ ಏನು ಸಂಬAಧ ಅವರು ಅಲ್ಲಿಗೆ ಹೇಗೆ ಬಂದರು, ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದ ಅಧ್ಯಕ್ಷನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಯಾಕೆ, ನಿಜಕ್ಕೂ ಮಾಜಿ ಅಧ್ಯಕ್ಷ ಹನಿಟ್ರ‍್ಯಾಪ್ ಗೆ ಸಿಲುಕ್ಕಿದ್ದ ಇಲ್ಲ ಮಹಿಳೆಯ ಪ್ರೇಮಪಾಶಕ್ಕೆ ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ತಿಳಿಯಬೇಕಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸಂಬAಧ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಾಂತ್ವನ ಕೇಂದ್ರ ದಲ್ಲಿ ಇರಿಸಲಾಗಿದ್ದು, ಮಹಿಳೆಯರ ಜೊತೆ ಸೇರಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಗುಬ್ಬಿ ಪಟ್ಟಣದ ಭರತ್ ಮತ್ತು ಬಿಲ್ಲೇಪಾಳ್ಯದ ಬಸವರಾಜು ಎಂಬುವರ ಸೆರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
(Visited 1 times, 1 visits today)