ಕೊರಟಗೆರೆ: ಮಹಿಳೆಯರ ಸಂಪೂರ್ಣ ಸಬಲೀಕರಣವಾಗಿ ಆಕೆ ಎಲ್ಲಾ ಸಮಯದಲ್ಲೂ ಸುರಕ್ಷಿತಳಾದಾಗ ಮಾತ್ರ ವಿಶ್ವಮಹಿಳಾ ದಿನಾಚರಣೆಗೆ ಪರಿ ಪೂರ್ಣ ಅರ್ಥ ಬರುತ್ತದೆ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅಂಬಿಕಾ ತಿಳಿಸಿದರು ಅವರು ತಾಲೂಕಿನ ಎಲೆರಾಂಪುರ ಗ್ರಾಮದ ಶ್ರೀ ರೇಣುಕೇಶ್ವರ ಸಮುದಾಯದಲ್ಲಿ ನಡೆದ “ಎಲ್ & ಟಿ ಫೈನಾನ್ಸ್, ಆಕ್ಸಸ್‌ಲೈವ್‌ಲಿಹುಡ್ಸ್” ರವರ ಸಹಯೋಗದಲ್ಲಿ ನಡೆದ ಅಂತರ ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಶ ಅಭಿವೃದ್ದಿ ಹೊಂದಬೇಕಾದರೆ ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸಮಾನ ಅವಕಾಶ ನೀಡಬೇಕು, ಮಹಿಳೆಯರು ತಾಯಂದಿರಾಗಿ ಮಕ್ಕಳಿಗೆ ಗುಣಮಟ್ಟದ ನೈತಿಕ ಶಿಕ್ಷಣ ನೀಡಬೇಕು, ವಿಶೇಷವಾಗಿ ಪ್ರತಿ ಕುಟುಂಬದಲ್ಲಿ ತಾಯಂದಿರು ಹೆಣ್ಣು ಮಕ್ಕಳ ಬಾಲ್ಯ ಮತ್ತು ಪ್ರೌಡಾ ಬೆಳವಣಿಗೆಯಲ್ಲಿ ಸಂಪೂರ್ಣ ಗಮನ ಹರಿಸಬೇಕು, ಈ ಸಮಯದಲ್ಲಿ ಕೆಲವು ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುತ್ತಿವೆ, ಇಂತಹ ಸಂದರ್ಭದಲ್ಲಿ ಮಕ್ಕಳ ಮನಸ್ಥಿತಿ ಕುಗ್ಗಿರುತ್ತದೆ ತಾಯಂದಿರು ಇದರ ಬಗ್ಗೆ ಸೂಕ್ಷö್ಮವಾಗಿ ಅರಿತು ಮಕ್ಕಳ ಜೊತೆ ಇರಬೇಕು, ಪ್ರೌಡಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಕಾಮುಕರ ಮತ್ತು ಮೋಸಗಾರರ ಬ¯ಗೆೆ ಬಿದ್ದು ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಮಕ್ಕಳ ಸಂಪೂರ್ಣ ನಿಗಾವನ್ನು ತಾಯಂದಿರು ಮಾಡಬೇಕು, ಮಕ್ಕಳಿಗೆ ವಿದ್ಯೆ, ಸಾಧನೆ, ಸಮಾಜದ ಬಗ್ಗೆ ಅರಿವು ಮೂಡಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಗೊರವನಹಳ್ಳಿಯ ಪ್ರಸಿದ್ದ ಗಾಯಕಿ ಲಕ್ಷಿö್ಮÃಪ್ರಸಾದ್ ಮಾತನಾಡಿ ಪ್ರಕೃತಿ ನಂತರ ಜೀವವನ್ನು ಸೃಷ್ಟಿ ಮಾಡುವ ಶಕ್ತಿಯನ್ನು ದೇವರು ಮಹಿಳೆಯರಿಗೆ ನೀಡಿದ್ದಾರೆ, ಮಹಿಳೆಯನ್ನು ಆದಿಶಕ್ತಿ, ದೈವತ್ವದ ಪ್ರತಿ ರೂಪವಾಗಿ ನೋಡುವ ಸಂಪ್ರದಾಯ ಇರುವ ನಾವು ಸ್ತಿçÃಯರನ್ನು ಗೌರವಿಸುವ ಸಂಪ್ರದಾಯ ತಪ್ಪುತ್ತಿದೆ ಎಂದ ಅವರು ಗೊರವನಹಳ್ಳಿ ಕ್ಷೇತ್ರ ಪ್ರಸಿದ್ದವಾಗಬೇಕಾದರೆ ಮಾತೆ ಕಮಲಮ್ಮನವರ ತ್ಯಾಗ ಪರಿಶ್ರಮ ಕಾರಣವಾಗಿದ್ದು ಇಂದು ಗೊರವನಹಳ್ಳಿ ಕ್ಷೇತ್ರ ದೇಶದಾದ್ಯಂತ ಪ್ರಸಿದ್ದವಾಗಿದೆ ಎಂದರು.
ಆಯುಷ್ ವೈದ್ಯಾಧಿಕಾರಿ ಡಾ. ಭವ್ಯ ಮಾತನಾಡಿ ತಾಯಂದಿರು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಾತ್ವಿಕ ಆಹಾರಗಳನ್ನು ನೀಡಬೇಕು, ಮಳಿಕೆ ಕಟ್ಟಿದ ಕಾಳು, ಹಣ್ಣು, ತರಕಾರಿ, ಸೊಪ್ಪು, ಸೇರಿದಂತೆ ಇತರ ಪೌಷ್ಟಿಕ ಆಹಾರ ನೀಡಬೇಕು ಆದರೆ ಹೆಣ್ಣು ಮಕ್ಕಳಿಗೆ ಜಮ್ಸ್ ಆಹಾರಗಳನ್ನು ನೀಡುತ್ತಿರುವುದರಿಂದ ಅವರ ಶರೀರದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸವಾಗಿ ಕಷ್ಟ ಪಡುವ ಸ್ಥಿತಿ ಉಂಟಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅದ್ಯಕ್ಷೆ ಗೀತ, ಎಲ್ & ಟಿ ಯ ವ್ಯವಸ್ಥಾಪಕ ಮಲ್ಲೇಶ್, ಮಮತ, ವಸಂತ, ದಾಕ್ಷಾಯಿಣಿ, ರಾಜಶೇಖರಯ್ಯ, ಪುಟ್ಟಮ್ಮ, ಉಮೇಶ್‌ಚಂದ್ರ, ರಾಧಾಮಣಿ, ಶಿವಕುಮಾರ್, ರಷ್ಮಿ, ನಾಗರಾಜು, ಪರುಶುರಾಮ್ ಸೇರಿದಂತೆ ಹಲವರು ಉಪಸ್ಥಿತರು ಹಾಜರಿದ್ದರು.
(Visited 1 times, 1 visits today)