ಚಿಕ್ಕನಾಯಕನಹಳ್ಳಿ: ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿಗೆ ಪಟ್ಟಣದ ಪುರಸಭಾ ಮುಖ್ಯಾಧಿಕಾರಿ ತಿಂಗ ಳುಗಟ್ಟಲೆ ವಿಳಂಬ ಮಾಡಿ ಕಾಟಾಚಾರದ ಸಮಜಾಯಿಶಿ ನೀಡಿದ ಕುರಿತು ಪುರಸಭಾ ಸದಸ್ಯ ರೇಣುಕಪ್ರಸಾದ್ ಸಂವಿಧಾನ ಉಳಿಸಿ ಎಂದು ಕಪ್ಪು ಪಟ್ಟಿಧರಿಸಿ ಒಂಟಿಯಾಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ೧೨ ನೇ ವಾರ್ಡ್ನ ಸದಸ್ಯ ಸಿ.ಜೆ. ರೇಣುಕಪ್ರಸಾದ್ ತೋಳಿಗೆ ಕಪ್ಪುಪಟ್ಟಿ ಧರಿಸಿ “ಮುಖ್ಯಾಧಿಕಾರಿಗಳೇ ಸಂವಿಧಾನ ಉಳಿಸಿ. ಮಹಿತಿಹಕ್ಕು ಕಾಯ್ದೆ_೨೦೦೫ ಚಿಕ್ಕನಾಯಕನಹಳ್ಳಿ ಪುರಸಭಾ ವ್ಯಾಪ್ತಿಗೆ ಅನ್ವ ಯವಾಗುವುದಿಲ್ಲವೆ” ಎಂಬ ಬರಹದ ಕರಪತ್ರ ವನ್ನಿಡಿದು ದಿಡೀರ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಾನು ಹಾಲಿ ಪುರಸಭಾ ಸದಸ್ಯನಾಗಿದ್ದು ಈ ಹಿಂದೆ ಪುರಸಭೆಯು ಸುಮಾರು ೧೮ ತಿಂಗಳುಗಳ ಆಡಳಿತ ಉಪವಿಭಾಗಾಧಿಕಾರಿಗಳಡಿ ನಡೆದಿದ್ದು, ಸದರಿ ಅವಧಿಯ ಜಮಾ_ಖರ್ಚಿನ ವಿವರವನ್ನು ನೀಡಿ ಎಂದು ಕಳೆದ ವರ್ಷದ ನವೆಂಬರ್‌ನಲ್ಲಿ ಮಾಹಿತಿ ಹಕ್ಕಿನಡಿ ಕೇಳಿದ್ದೆ. ಆದರೆ ನಿಯಮದ ಪ್ರಕಾರ ೩೦ದಿನದೊಳಗೆ ನೀಡಿಬೇಕಿದ್ದರೂ ಉತ್ತರ ನೀಡದೆ ನಿರ್ಲ್ಯಕ್ಷಿದರು. ಈ ನಡುವೆ ಹೊಸದಾಗಿ ಬಂದ ಇಲ್ಲಿನ ಮಾಹಿತಿ ಅಧಿಕಾರಿ ತುಳಸಿಕುಮಾರಿಯವರು ನಾನು ಕೇಳಿದ ಮಾಹಿತಿಯನ್ನು ಕಲೆಹಾಕಿ ವರದಿ ಸಿದ್ದಪಡಿಸಿದ್ದರೂ ಮುಖ್ಯಾಧಿಕಾರಿ ಮಂಜಮ್ಮನವರು ಅದನ್ನು ನೀಡುವಲ್ಲಿ ನಿರಾಕರಿಸುತ್ತಿದ್ದಾರೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯಾದ ನಂತರ ನಡೆದ ಸಭೆಯಲ್ಲೂ ಎಲ್ಲಾ ಸದಸ್ಯರು ಸದರಿ ಮಾಹಿತಿಯನ್ನು ನೀಡಿ ಎಂದು ಕೇಳಿದರು ಮಂಜಮ್ಮನವರು ನೀಡಿಲ್ಲ. ಈ ನಡುವೆ ಮತ್ತೆ ಮಾಹಿತಿ ನೀಡು ವಂತೆ ಮೇಲ್ಮನವಿ ಸಲ್ಲಿಸಿದರು ನೀಡದೆ ಸತಾಯಿ ಸುತ್ತಿದ್ದರು. ಈ ಬಗ್ಗೆ ಈಚೆಗೆ ಪತ್ರಿಕೆಗಳಲ್ಲಿ ಬಂದ ವರದಿಯಿಂದ ಎಚ್ಚೆತ್ತ ಮುಖ್ಯಾಧಿಕಾರಿಗಳು ನನಗೆ ಭಾಲಿಷವಾದ ಉತ್ತರವನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ. ಈ ಪತ್ರದಲ್ಲಿ ಮಾಹಿತಿ ಹಕ್ಕು ಅಧಿನಿಯಮ ೨೦೦೫ರಲ್ಲಿ ನೀವು ಕೋರಿರುವ ಮಾಹಿತಿಯು ತುಂಬಾ ಅಗಾಧವಾಗಿದ್ದು, ಮಾನವ ಸಂಪನ್ಮೂಲಕ ಕೊರತೆಯಿಂದಾಗಿ ಕಛೇರಿ ವೇಳೆಯಲ್ಲಿ ಸದರಿ ಮಾಹಿತಿಯನ್ನು ವೀಕ್ಷಿಸಲು ಈ ಮೂಲಕ ಕೋರುತ್ತೇನೆ ಎಂದು ಸಹಿಮಾಡಿ ಪತ್ರವನ್ನು ನೀಡಿದ್ದಾರೆ. ಇದೊಂದು ಅರ್ಥವಾಗದ ಉತ್ತರವಾಗಿದೆ. ಬಾಲಿಷ ಹಾಗೂ ಪಲಾಯನವಾದ ಮತ್ತು ಮಾಹಿತಿ ನೀಡಲಾಗುವುದಿಲ್ಲವೆಂಬ ಪರೋಕ್ಷ ಹೇಳಿಕೆಯಾಗಿದೆ. ಈ ವಿದ್ಯಮಾನ ಕಾರ್ಯಾಂಗದ ನಡೆಯನ್ನು ಸಂಶಯ ಹಾಗೂ ಅನುಮಾನಾಸ್ಪದ ದೃಷ್ಠಿಯಲ್ಲಿ ನೊಡುವಂತಾಗಿದೆ. ಸಂವಿಧಾನದಡಿ ಜನಸಾಮಾನ್ಯರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸಿಗಬೇಕಾದ ನ್ಯಾಯಯುತ ಹಕ್ಕುಬಾದ್ಯತೆಗಳು ಅಧಿಕಾರಿಶಾಹಿಯ ಕಪಿಮುಷ್ಠಿಯಲ್ಲಿ ಸಿಲುಕಿಸುವ ಹುನ್ನಾರವೆನಿಸಿದೆ. ಇದಕ್ಕಾಗಿ ನಾನು ದಿಡೀರ್ ಪ್ರತಿಭಟನೆ ನಡೆಸಿದ್ದೇನೆ, ಇದು ಎಕಾಂಗಿ ಹೋರಾ ಟವಾದರೂ ನನಗೆ ಅನೇಕ ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರು ಬೆಂಬಲ ನೀಡಿದ್ದಾರೆ. ಪುರಸಭೆಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ಈ ವಿದ್ಯಮಾನ ಪುಷ್ಠಿ ನೀಡುತ್ತದೆ. ಈ ಅವಧಿಯಲ್ಲಿ ನಡೆದ ಎಲ್ಲಾ ವ್ಯವಹಾರಗಳ ಬಗ್ಗೆ ನ್ಯಾಯಂಗ ತನಿಖೆಯಾಗಬೇಕು, ಸಾರ್ವ ಜನಿಕರ ತೆರಿಗೆಹಣ ವಿಲೇವಾರಿಯಾಗಿರುವ ಬಗ್ಗೆ ನನಗೆ ಸ್ಪಷ್ಠ ಉತ್ತರ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆನ್ನುವುದೆ ನನ್ನ ನಿಲುವಾಗಿದ್ದು ಈ ಬಗ್ಗೆ ಮಾಹಿತಿ ಹಕ್ಕನ್ನು ಉಲ್ಲಂಘಿಸಿರುವ ಬಗ್ಗೆ ಮಾಹಿತಿ ಆಯೋಗಕ್ಕೆ, ಲೋಕಾಯುಕ್ತಕ್ಕೆ ಹಾಗೂ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅವರು ತಿಳಿಸಿದರು.

(Visited 1 times, 1 visits today)