ಚಿಕ್ಕನಾಯಕನಹಳ್ಳಿ: ಪುರಸಭಾ ಸದಸ್ಯ ರೇಣುಕ ಪ್ರಸಾದ್‌ರಿಂದ ನನಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ಮಂಜಮ್ಮ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಸಂವಿಧಾನ ಉಳಿಸಿ ಹಾಗೂ ಮಾಹಿತಿ ಹಕ್ಕಿನ ನಿಯಮ ಇಲ್ಲಿನ ಪುರಸಭೆಗೆ ಅನ್ವಯವಾ ಗುವುದಿಲ್ಲವೆ ಎಂಬ ಪ್ರಶ್ನೆಯೊಂದಿಗೆ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿರುವ ಸದಸ್ಯ ರೇಣುಕ ಪ್ರಸಾದ್‌ರಿಗೆ ಏಕೆ ಅವರು ಕೇಳಿದ ಮಾಹಿತಿ ನೀಡುತ್ತಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಮುಖ್ಯಾ ಧಿಕಾರಿ ಮಂಜಮ್ಮನವರು ಸಮರ್ಪಕವಾದ ಉತ್ತರ ನೀಡಲು ತಡಬಡಾಯಿಸಿದರು. ನಾನೀಗ ಮಾಹಿತಿ ನೀಡಿದ್ದೇನೆ ಎಂದರು. ಆದರೆ ಸದರಿ ಮಾಹಿತಿಯು ಅವಧಿ ಮೀರಿದ ನಂತರ ನೀಡಿದ ಮಾಹಿತಿಯಾಗಿದೆ ಹಾಗೂ ಅವರು ಕೇಳಿದ ಮಾಹಿತಿ ಅಗಾಧವಾಗಿದೆ ಎಂದು ಉತ್ತರಿಸಿದ್ದೀರಿ ಹಾಗೂ ಸಿಬ್ಬಂದಿಯ ಕೊರತೆ ಹಾಗೂ ಕಛೇರಿಯಲ್ಲಿಯೇ ವೀಕ್ಷೀಸಿ ಎಂಬ ಉತ್ತರ ಎಷ್ಟು ಸಮರ್ಪಕ ಎಂಬ ಪ್ರಶ್ನೆಗಳ ಸುರಿಮಳೆಗೆ ವಿಚಲಿತರಾದ ಮುಖ್ಯಾಧಿಕಾರಿ ರೇಣುಕಪ್ರಸಾದ್‌ರ ಮೇಲೆಯೇ ಆರೋಪಗಳ ಮಳೆಸುರಿಸಿದರು. ಅವರು ನನ್ನನ್ನು ಅವಾಚ್ಗಶಬ್ದ ಗಳಿಂದ ನಿಂದಿಸುತ್ತಾರೆ, ಇದರಿಂದ ನನಗೆ ಕೆಲಸವೇ ಮಾಡಲು ಆಗುತ್ತಿಲ್ಲ ಹಾಗೂ ಮಾನಸಿಕವಾಗಿ ನೊಂದಿದ್ದೇನೆ ಎಂದರು. ಈ ಬಗ್ಗೆ ದೂರು ನೀಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದರು. ಆದರೆ ಇಷ್ಠಾದರೂ ಸದರಿ ಮಾಹಿತಿಯನ್ನು ನೀಡುವ ಬಗ್ಗೆ ಚಕಾರವೆತ್ತಲಿಲ್ಲ.
(Visited 1 times, 1 visits today)