ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನ ಅಂಗೀಕಾರದ ೭೫ ವರ್ಷದ ಸಂದರ್ಭದಲ್ಲಿ ಕಲ್ಪತರು ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಏಪ್ರಿಲ್ ೧೪ರಂದು ಅಂಬೇಡ್ಕರ್ ಜನ್ಮದಿನದಂದು ನಗರ ದಲ್ಲಿ ಸÀಂವಿಧಾನ ಶಿಲ್ಪಿಯನ್ನು ಸಂಭ್ರಮಿಸುವ ಭೀಮೋತ್ಸವ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಸಂಬAಧ ಕಲ್ಪತರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆಯಲ್ಲಿ ವಿವಿಧ ದಲಿತಪರ, ಕನ್ನಡಪರ ಹಾಗೂ ಹಲವು ಸಾಮಾಜಿಕ ಸಂಘಟನೆಗಳ ಮುಖಂಡರು ಗುರು ವಾರ ನಗರದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು.
ವೇದಿಕೆ ಅಧ್ಯಕ್ಷ ಸೋಮಶೇಖರ್ ಮಾತನಾಡಿದ, ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತೀಯರ ಘನತೆಯ ಜೀವನಕ್ಕೆ ಕಾರಣರಾಗಿದ್ದಾರೆ. ಅವರನ್ನು ದೇಶದ ಪ್ರತಿಯೊಬ್ಬ ಪ್ರಜೆ ಯೂ ಗೌರವದಿಂದ ಸ್ಮರಿಸುತ್ತಾರೆ. ಸಂವಿಧಾನ ಅಂಗೀಕಾರಗೊAಡ ೭೫ ವರ್ಷ ತುಂಬಿದ ಈ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ ೧೪ರಂದು ಅವರ ಕೊಡುಗೆ ಸ್ಮರಿಸಿ ಸಂಭ್ರಮಿಸುವ ಕಾರ್ಯಕ್ರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಬಿಜಿಎಸ್ ವೃತ್ತದಿಂದ ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಏರ್ಪಡಿಸಲಾಗಿದೆ. ಹೆಸರಾಂತ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದ ರ್ಶನದೊಂದಿಗೆ ವೈಭವದ ಮೆರವಣಿಗೆ ಹಮ್ಮಿ ಕೊಳ್ಳಲಾಗಿದೆ ಎಂದು ಸೋಮಶೇಖರ್ ಹೇಳಿದರು.
ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ದೇಶದ ಸರ್ವಜನರು ಸಮಾನತೆ, ಮೂಲಭೂತ ಹಕ್ಕುಗಳ ಪಡೆಯಲು ಅಂಬೇಡ್ಕರ್ ಅವರ ಸಂವಿಧಾನದಿAದ ಸಾಧ್ಯವಾಗಿದೆ. ನಾನೇ ನಾದರೂ ರಾಜಕಾರಣದಲ್ಲಿ ಸ್ಥಾನಮಾನ ಪಡೆ ದಿದ್ದೇನೆಂದರೆ ಅದಕ್ಕೆ ಅಂಬೇಡ್ಕರ್ ಅವರ ಶ್ರೇಷ್ಠ ಸಂವಿಧಾನವೇ ಕಾರಣ. ಇಂತಹ ಮಹನೀಯರನ್ನು ದೇಶದ ಪ್ರತಿಯೊಬ್ಬರೂ ಗೌರವಿಸಿ ಆರಾಧಿಸಿಬೇಕು ಎಂದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶಕ್ತಿ ತುಂಬಿದ್ದಾರೆ. ದೇಶದ ಎಲ್ಲಾ ನಾಗರೀಕರಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವ್ಯಕ್ತಿ ಸ್ವಾತಂತ್ರö್ಯ, ಸ್ಥಾನಮಾನ ಘನತೆ ತಂದುಕೊಟ್ಟವರು ಅಂಬೇಡ್ಕರ್. ಅವರಿಂ ದಾಗಿ ಇಂದು ಎಷ್ಟೋ ನಿರ್ಲಕ್ಷಿತ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ವಾಗಿದೆ ಎಂದು ತಿಳಿಸಿದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್.ರಾಮಯ್ಯ, ಎಲ್ಲಾ ಸಮುದಾಯಗಳು ಒಳಗೊಂಡು ಭೀಮೋತ್ಸವ ಆಚರಿಸುತ್ತಿರುವುದು ಸಂವಿಧಾನ ಶಿಲ್ಪಿಗೆ ಸಲ್ಲುತ್ತಿರುವ ಗೌರವ. ಸಂವಿಧಾನದ ಮಹತ್ವ, ಅಂಬೇಡ್ಕರ್ ಅವರ ಕೊಡುಗೆಯನ್ನು ಈ ಮೂಲಕ ಜನರಿಗೆ ತಿಳಿಸುವ ಕೆಲಸ ಆಗಬೇಕು. ವಿಶೇಷವಾಗಿ ವಿದ್ಯಾರ್ಥಿ, ಯುವಜನರು ಸಂವಿಧಾನ ಓದಿ ತಿಳಿದು ಅನು ಸರಿಸಬೇಕು ಎಂದರು.
ಕಾಡುಗೊಲ್ಲರ ಪರಿಷತ್ತಿನ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ ಮಾತನಾಡಿ, ಭಾರತದಲ್ಲಿ ಸಂವಿಧಾನವೇ ಸರ್ವೋಚ್ಛವಾದದ್ದು, ನಮ್ಮ ಸಂವಿಧಾನದ ಮೂಲ ತತ್ವಗಳು, ಆಶಯಗಳನ್ನು ದೇಶದ ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಸಂಘಸAಸ್ಥೆಗಳು ಅಂತಹ ಪ್ರಚಾರ ಕಾರ್ಯಗಳಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು.
ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಂಕರ್, ಭಗತ್ ಕ್ರಾಂತಿ ಸೇನೆಯ ಚೇತನ್, ಕರ್ನಾಟಕ ಮಾದಿಗರ ಸಂಘದ ಹೆಚ್.ಆರ್.ರಾಮಮೂರ್ತಿ, ಟಿ.ಸಿ.ರಾಮಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ಕೊಟ್ಟ ಶಂಕರ್, ಹೊಸಕೋಟೆ ನಟರಾಜ್, ಕನ್ನಡ ಪ್ರಕಾಶ್, ಜೆಸಿಬಿ ವೆಂಕಟೇಶ್, ಮಿಸೆ ಸತೀಶ್, ರಾಮಚಂದ್ರರಾವ್, ಶಬ್ಬೀರ್‌ಅಹ್ಮದ್, ಭಾಗ್ಯಮ್ಮ, ಚಕ್ರವರ್ತಿ ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.
(Visited 1 times, 1 visits today)