ತುರುವೇಕೆರೆ: ಇತಿಹಾಸ ಪ್ರಸಿದ್ದ ಪಟ್ಟಣದ ಶ್ರೀ ಬೇಟೆರಾಯ ಸ್ವಾಮಿಯ ರ
ಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧುವಾರ ಮದ್ಯಾಹ್ನ ಬಹಳ ವಿಜೃಂಬಣೆಯಿAದ ನೆರವೇರಿತು.
ಬುಧುವಾರ ಬ್ರಹ್ಮ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಬೇಟೆರಾಯಸ್ವಾಮಿ ಮೂಲ ದೇವರಿಗೆ ಪಂಚಾಮೃತ, ಕ್ಷೀರಾಭಿಷೇಕ ಸೇರಿದಂತೆ ದೇವಾಲಯದಲ್ಲಿ ಅನೇಕ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ದೇವಾಲಯಕ್ಕೆ ತೆರಳಿ ವಿಶೇ಼ಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಬೇಟರಾಯಸ್ವಾಮಿಯನ್ನು ರಥದಲ್ಲಿ ಕುಳ್ಳರಿಸಿ ಎಡೆ ನೇವೇದ್ಯ ನಂತರ ರಥಕ್ಕೆ ಪೂಜೆ ಸಲ್ಲಿಸಿದರು. ಅಕಾಶದಲ್ಲಿ ಗರುಡ ದರ್ಶನ ನೀಡುತ್ತಿದ್ದಂತೆ ನೆರದಿದ್ದ ಆಪಾರ ಭಕ್ತರು ಗೋವಿಂದಾ ಗೋವಿಂದ ಸುಬ್ಬಾ ಸುಬ್ಬಾ ಗೋವಿಂದ ಬೇಟರಾಯಸ್ವಾಮಿ ಗೋವಿಂದ ನಾಮ ಸ್ಮರಣೆ ಮುಗಿಲು ಮಟ್ಟಿತ್ತು. ತಹಸೀಲ್ದಾರ್ ಕುಂ.ಇ.ಅಹಮದ್ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಲೆ ಭಕ್ತರು ಜೈಘೋಷ ಕೂಗುತ್ತಾ ರಥವನ್ನು ಬಹಳ ಉತ್ಸಾಹದಿಂದ ಎಳೆದರು. ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಕ್ತಿ ಭಾವದಿಂದ ರಥಕ್ಕೆ ಬಾಳೆಹಣ್ಣು, ದವನವನ್ನು ಎಸೆದರೆ. ಬಂದAತ ಭಕ್ತಾಧಿಗಳಿಗೆ ಪಾನಕ, ಪಲಹಾರ, ಮಜ್ಜಿಗೆ, ಹಾಗೂ ಬೂಂದಿ-ಪಾಯಸ, ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಬಿರು ಬಿಸಿಲಿನ ಜಳವನ್ನು ಲೆಕ್ಕಿಸದೆ ಭಕ್ತಾಧಿಗಳು ಬಹಳ ಉತ್ಸಾಹದಿಂದ ರಥೋತ್ಸವದಲ್ಲಿ ಪಾಲ್ಗೋಂಡಿದ್ದರು. ಪಟ್ಟಣದ ವಿವಿದ ಮಹಿಳಾ ಸಮಾಜಗಳ ವತಿಯಿಂದ ಕೋಲಾಟ, ಭಜನೆ ಕಾರ್ಯಕ್ರಮಗಳು ಜರುಗಿದವು.
ರಥೋತ್ಸವದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಮಿಟಿ ಸದಸ್ಯರು ಸೇರಿದಂತೆ, ವಿವಿದ ಸಂಘ ಸಂಸ್ಥೆಗಳೊಡಗೂಡಿ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. ಬಂದAತ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದು ಯಾವುದಕ್ಕೂ ಧಕ್ಕೆ ಬಾರದ ರೀತಿಯಲ್ಲಿ ಅಧಿಕಾರಿಗಳು ನಿಗಾ ವಹಿಸಿದ್ದು ಭಕ್ತರೊಡಗೂಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

(Visited 1 times, 1 visits today)