ಚಿಕ್ಕನಾಯಕನಹಳ್ಳಿ: ಬೇಸಿಗೆ ಸಂದರ್ಭದಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಅನೈರ್ಮದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ನಿಯಂತ್ರಿಸಲು ಸಂಬAಧಿಸಿದ ಇಲಾಖೆಗಳು ಸೂಕ್ತಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಿö್ಮನಾರಾಯಣ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗ ಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ಇಂದಿನ ಸಭೆಯಲ್ಲಿ ೨೨ಕ್ಕೂ ಮಿಗಿಲಾಗಿ ಸಾರ್ವಜನಿಕರಿಂದ ಅಹವಾಲು ಬಂದಿದ್ದು, ಕಂದಾಯ ಇಲಾ ಖೆಗೆ ಸಂಬAದಿಸಿದAತೆ ಹೆಚ್ಚು ಅರ್ಜಿಗಳು ಬಂದಿವೆ.ಸಮರ್ಪಕವಾದ ಅರ್ಜಿಗಳನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡಲಾಗುವುದು ಹಾಗೂ ನ್ಯಾಯಾಲಯದಲ್ಲಿ ಹಾಗೂ ಸಕಾರಣವಿ ಲ್ಲದ ಅರ್ಜಿಗಳನ್ನು ಕಾರಣ ನೀಡಿ ವಿಲೇವಾರಿ ಮಾಡಲಾಗುವುದೆಂದರು.
ಸಭೆಯಲ್ಲಿ ಸಾರ್ವಜನಿಕವಾಗಿ ಬಂದ ದೂರಿನಂತೆ ಪಟ್ಟಣದಲ್ಲಿ ನಾಯಿಗಳ ಕಾಟ ಹಾಗೂ ರಸ್ತೆಬದಿಯಲ್ಲಿ ತಿಂಡಿ, ತಿನಿಸು ತಯಾರಿಸಿ ಮಾರಾ ಟ ಮಾಡುವ ಪರವಾನಗಿಯಿಲ್ಲದ ಅಂಗಡಿಗಳು ವಿಪರೀತವಾಗಿ ಹೆಚ್ಚಿದ್ದು, ಸದರಿ ಆಹಾರ ಪದಾರ್ಥಗಳು ತಿನ್ನಲು ಯೋಗ್ಯವೇ ಎಂಬ ಪರಿಶೀಲನೆಯಾಗಿಲ್ಲವೆಂಬ ದೂರಿಗೆ ಸಭೆಯಲ್ಲಿದ್ದ ಪುರಸಭಾ ಮುಖ್ಯಾಧಿಕಾರಿಗಳನ್ನು ಕರೆದು ಈಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಇದುವರೆಗೂ ಯಾವುದೇ ಕ್ರಮವಹಿಸಿಲ್ಲ, ಇನ್ನೆ ರಡು ದಿನದೊಳಗೆ ಪೊಲೀಸ್ ನೆರವಿನಿಂದ ಆಹಾರ ಶುದ್ದತೆ ಮತ್ತು ನಿಶೇದಿತ ಪಾದಾ ರ್ಥಗಳ ಬಳಕೆಯ ಬಗ್ಗೆ ತಪಾಸಣೆ ಹಾಗೂ ಪರವಾನಗಿಗಳನ್ನು ಪರಿಶೀಲಿಸಿಸುವುದು ಮತ್ತು ಬೀದಿನಾಯಗಳ ನಿಯಂತ್ರಣಕ್ಕೆ ಪುಶುವೈದ್ಯರೆ ನೆರವಿನಿಂದ ಸಂತಾಣ ನಿಯಂತ್ರಣದ ಚುಚ್ಚುಮ ದ್ದು ನೀಡುವ ಕಾರ್ಯಾಚರಣೆಗೆ ಚಾಲನೆ ನೀಡ ಲಾಗುವುದೆಂದರು.
ಸಭೆಯಲ್ಲಿ ಲೋÃಕಾಯುಕ್ತ ಡಿಎಸ್‌ಪಿ ರಾಮಕೃಷ್ಣಯ್ಯ, ನಿರೀಕ್ಷಕರಾದ ಕೆ. ಸುರೇಶ್, ಶಿವರುದ್ರಯ್ಯ ಮೇಟಿ, ರಾಜು ಟಿ ಹಾಗೂ ಸಿಬ್ಬಂದಿಗಳಿದ್ದರು. ಸಭೆಗೆ ತಾಲ್ಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)