ಹುಳಿಯಾರು: ರಾಜಕಾರಣಿಗಳೆಲ್ಲರೂ ನಾವು ರೈತರ ಮಕ್ಕಳು, ನಮ್ಮನ್ನು ಗೆಲ್ಲಿಸಿದರೆ ರೈತ ಪರ ಆಡಳಿತ ನಡೆಸುವುದಾಗಿ ಹೇಳುತ್ತಾರೆ. ಗೆದ್ದ ನಂತರ ಕಾರ್ಪರೇಟ್ ಕಂಪನಿಗಳ ಪರ ನಿಂತು ರೈತರನ್ನು ಕಡೆಗಣಿಸುತ್ತಾರೆ. ಹಾಗಾಗಿ ರೈತರು ಪಕ್ಷ, ಜಾತಿ ಬಿಟ್ಟು ರೈತ ಸಂಘದ ಮೂಲಕ ಸಂಘಟಿತರಾದಾಗ ಮಾತ್ರ ರೈತ ಪರವಾದ ಸರ್ಕಾರ ಮಾಡಲು ಸಾಧ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕರೆ ನೀಡಿದರು.
ಹುಳಿಯಾರಿನ ವಾಲ್ಮೀಕಿ ಸರ್ಕಲ್‌ನಲ್ಲಿ ಹೊಸ ಹಳ್ಳಿ ಚಂದ್ರಣ್ಣ ಬಣದ ರೈತ ಸಂಘಕ್ಕೆ ವಿವಿಧ ಹಳ್ಳಿಗಳ ರೈತರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಸರ್ಕಾರಿ ನೌಕರರು, ಜಾತಿಪರ ಸಂಘಟನೆಗಳು, ವೃತಿ ಪರ ಸಂಘಟನೆಗಳು ಸಂಘಟನೆಯ ಮಹತ್ವ ಅರಿತು ಸಂಘಟಿತರಾಗಿ ತಮ್ಮ ಪಾಲಿನ ಹಕ್ಕಿಗಾಗಿ ಹೋರಾಟ ರೂಪಿಸಿ ಸರ್ಕಾರಗಳ ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳುತ್ತಿವೆ. ಆದರೆ ಇಡೀ ದೇಶಕ್ಕೆ ಅನ್ನ ಕೊಡುವ, ಶೇ.೭೦ ತಕ್ಕೂ ಹೆಚ್ಚು ಉದ್ಯೋಗ ಸೃಷ್ಠಿಸುವ ರೈತರು ಮಾತ್ರ ಅಸಂಘಟಿತರಾಗಿ ದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರೈತನನ್ನು ಅವಲಂಬಿಸಿಸಿದ್ದರೂ ಸಹ ಆತನ ಪರ ಮಾತ್ರ ನಿಲ್ಲದೆ ನಿರ್ಲಕ್ಷಿö್ಯಸುತ್ತಿದ್ದಾರೆ. ಪರಿಣಾಮ ರಾಜ್ಯ ಮತ್ತು ರಾಷ್ಟçದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಯಾಗುತ್ತಿವೆ. ಈ ಅನ್ಯಾಯ ತಡೆಯಲು ರೈತರು ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಣ್ಣ, ಹುಳಿಯಾರು ಹೋಬಳಿ ಅಧ್ಯಕ್ಷ ಪುಟ್ಟಯ್ಯ ,ಬಸವರಾಜು, ಜಗಣ್ಣ, ರೇವಣ್ಣ, ಈರಣ್ಣ, ಮಲ್ಲೇಶಯ್ಯ, ಪೆದ್ದಾಬೋವಿ, ಕೃಷ್ಣ ಮೂರ್ತಿ, ಕುಮಾರಸ್ವಾಮಿ, ಪುಟ್ಟಯ್ಯ, ಶ್ರೀನಿ ವಾಸ್, ಚಂದ್ರಶೇಖರರಾವ್, ನಿಂಗಪ್ಪ, ತ್ಯಾಗ ರಾಜು, ನಾಗರಾಜು, ಜಯಣ್ಣ, ಮಂಜನಾಯ್ಕ ಮತ್ತಿತರರು ಇದ್ದರು.

(Visited 1 times, 1 visits today)