ಪಾವಗಡ: ತಾಲೂಕಿನ ಬ್ಯಾಡನೂರು ವಡ್ಡರಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಉಪನಿರ್ದೇಶಕರಾದ ಚೇತನ್ ಕುಮಾರ್ ರವರು ಮಾತನಾಡಿ, ಗೊಲ್ಲರ ಹಟ್ಟಿಯಲ್ಲಿ ಆಚರಿಸುವ ಅನಿಷ್ಟ ಪದ್ಧತಿಗಳು ಬಾಲ್ಯವಿವಾಹ ಹದಿ ಹರೆಯದ ಗರ್ಬಿಣಿ ಮತ್ತು ಇಲಾಖಾ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು
ನಂತರ ಜಿಲ್ಲಾ ನಿರೂಪಣಾಧಿಕಾರಿಗಳಾದ ದಿನೇಶ್ ರವರು ಮಾತನಾಡಿ ಮಗುವಿನ ಆರೈಕೆ, ಪೋಷಣ್ ಅಭಿಯಾನ ಯೋಜನೆ ಬಾಣಂತಿ ಆರೈಕೆ ಬಗ್ಗೆ ಅರಿವು ಮೂಡಿಸಿದರು.
ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇಲಾಖಾ ಯೋಜನೆಗಳ ಬಗ್ಗೆ ಪಾತ್ರಾಭಿ ನಯದ ಮೂಲಕ ವ್ಯಕ್ತ ಪಡಿಸಿದರು ಕರಡಿ ಕುಣಿತ ಕೋಲಾಟ ಸೋಬಾನೆ ಪದ ಪುಟ್ಟ ಮಕ್ಕಳ ನೃತ್ಯ ಮುಂತಾದ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ ಸುನಿತಾ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾಗರಾಜ್, ರಾಜಾನಾಯ್ಕ, ಶಶಿಧರ,ಮೇಲ್ವಿಚಾರ
ಕಿಯರು, ಸಮುದಾಯದ ಮುಖಂಡರು, ಮಹಿಳಾ ಸಾಂತ್ವನ ಅಂಗನವಾಡಿ ಕಾರ್ಯಕರ್ತೆ ಯರು ಸಹಾಯಕಿಯರು ಹಾಜರಿದ್ದರು.

(Visited 1 times, 1 visits today)