ಹುಳಿಯಾರು: ದೇಶದಲ್ಲಿ ನಿರುದ್ಯೋಗವಿದೆ. ಕಂಪನಿಗಳಲ್ಲಿ ಕೆಲಸಗಾರರು ೧೦ ರಿಂದ ೧೨ ಗಂಟೆ ಕೆಲಸ ಮಾಡುವಂತಹ ನಿಯಮಗಳು ಬರುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸ್ವಉದ್ಯೋಗ ಮಾಡುವುದು ಅವಶ್ಯಕ. ಆದ್ದರಿಂದ ನೀವೆಲ್ಲರ ಉದ್ಯಮಿಗಳಾಗಿ ಹಣ ಸಂಪಾದಿಸಿ ಒಳ್ಳಯ ಜೀವನವನ್ನು ಪಡೆಯಿರಿ ಎಂದು ಮಾಸ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣಪ್ಪ ಸಲಹೆ ನೀಡಿದವರು.
ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ಕಳ್ಳಂಬೆಳ್ಳದ ನವ್ಯ ದಿಶಾ ಸಂಸ್ಥೆ ಹಾಗೂ ಚಿಕ್ಕನಾಯಕನಹಳ್ಳಿ ಸೃಜನಾ ಮಹಿಳಾ ಸಂಘಟನೆ ಆಯೋಜಿಸಿದ್ದ ಯುವ ಉದ್ಯಮಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಮಗೆ ಅನೇಕ ಕೌಶಲಗಳ ಬಗ್ಗೆ ತಿಳಿದಿದೆ, ಅನೇಕ ಉದ್ಯೋಗಗಳ ಬಗ್ಗೆ ಪರಿಚಯವಿದೆ, ಆದರೆ ಅದನ್ನು ಕಾರ್ಯಗತ ಮಾಡಲು ಮಹಿಳೆಯರಿಗೆ ಮನೆಯಲ್ಲಿ ಅನೇಕ ಅಡ್ಡಿ ಆತಂಕಗಳಿವೆ. ಅವುಗಳಿಂದ ಆಚೆ ತರುವುದು ಈ ತರಬೇತಿಯ ಮುಖ್ಯ ಉದ್ದೇಶ. ಮಹಿಳೆಯರನ್ನು ಸ್ವತಂತ್ರ ಉದ್ಯಮಿಗಳನ್ನಾಗಿ ಮಾಡಲು ಅಗತ್ಯ ಮಾರ್ಗದರ್ಶನವನ್ನು ತರಬೇತಿ ಪಡೆಯುವವರಿಗೆ ನೀಡಲಾಗುವುದು ಎಂದು ಹೇಳಿದವರು.
ಮುಖ್ಯ ತರಬೇತಿರಾದ ಕೆಂಪಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಸಿಎಂಎಸ್ ಗೌಡ ಮತ್ತು ಅಶ್ವಿನಿ ಹಾಗೂ ಸಮಗ್ರ ಕೃಷಿಕರಾದ ಶೈಲಶ್ರೀ ಮತ್ತು ಪದ್ಮ ಉಪಸ್ಥಿತರಿದ್ದರು. ಸಿಂಗಾಪುರದ ೨೫ ಜನ ಮಹಿಳೆಯರು ತರಬೇತಿಗೆ ದಾಖಲಾದರು.
(Visited 1 times, 1 visits today)