ಹುಳಿಯಾರು: ಮೊಬಿಲಿಟಿ ಇಂಡಿಯಾ ಸಂಸ್ಥೆಯು ಸಿರಾ ಮತ್ತು ತುರುವೇಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ಶಾಲೆಗಳಲ್ಲಿ ವಿಕಲಚೇತನ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಶಾಲಾವಧಿಯ ನಂತರ ಕಾರ್ಯನಿರ್ವಹಿಸುತ್ತಿರುವ ೨೦ ಸಮುದಾಯ ಶಿಕ್ಷಣ ಕೇಂದ್ರದ ಬೋಧಕರಿಗೆ ವಿಜ್ಞಾನ ಸಂಬAಧಿತ ಕಲಿಕಾ ಮತ್ತು ಬೋಧನ ಉಪಕರಣಗಳ ತಯಾರಿ ಕುರಿತು ಒಂದು ದಿನದ ಕಾರ್ಯಗಾರವನ್ನು ಹುಳಿಯಾರಿನ ವಾಸವಿ ಭವನದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ವಿಜ್ಞಾನ ಶಿಕ್ಷಕರಾದ ಜಯಣ್ಣ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಹಲವಾರು ಪ್ರಯೋಗಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಅವುಗಳಲ್ಲಿ ಪ್ರಮುಖವಾಗಿ ವಿದ್ಯುತ್ ಮಂಡಲ, ವಿದ್ಯುತ್ ವಾಹಕ ಮತ್ತು ಅವಾಹಕ, ಗಾಳಿಗೆ ಸರ್ವತೋಮುಖ ಒತ್ತಡವಿದೆ, ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ, ಸೂರ್ಯಗ್ರಹಣ ಚಂದ್ರಗ್ರಹಣ ಉಂಟಾಗುವ ರೀತಿ, ಭೂಮಿಯ ಚಲನೆಯಿಂದ ಹಗಲು ರಾತ್ರಿ ಉಂಟಾಗುವಿಕೆ, ಸತ್ಯ ಪ್ರತಿಬಿಂಬ, ಶಾಖದ ವರ್ಗಾವಣೆ, ಬೆಳಕಿನ ಪ್ರತಿಫಲನ ಹಾಗೂ ನ್ಯೂಟಾನಿನ ಚಕ್ರ ಮುಂತಾದ ಪ್ರಯೋಗಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಜಣ್ಣ, ಸ್ವಯಂಸೇವಕರಾದ ಪ್ರೇಮಾ, ಲಲಿತಾ, ಕಾಳಮ್ಮ ಮತ್ತು ಸಮುದಾಯ ಶಿಕ್ಷಣ ಕೇಂದ್ರದ ಬೋಧಕರು ಹಾಜರಿದ್ದರು.
(Visited 1 times, 1 visits today)