ಬರಗೂರು :
ಸಾಲದ ಬಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬರಗೂರು ಸಮೀಪದ ರಂಗಾಪುರ ಗ್ರಾಮದಲ್ಲಿ ಬುಧವಾರ ಮುಂಜಾನೆ ಜರುಗಿದೆ.
ರಂಗಪುರ ಗ್ರಾಮದ ಸರ್ವೆ ನಂಬರ್ 14/2ಎ ನಲ್ಲಿ ಮೂರು ಎಕರೆ 29 ಗುಂಟೆ ಜಮೀನು ಹೊಂದಿರುವ ರೈತ ಗೋಪಾಲ ಕೃಷ್ಣ (47) ಎಂದು ಗುರ್ತಿಸಿದ್ದು ಇವರು ನಾಲಕ್ಕೂ ಬೋರ್‍ವೇಲ್ ಕೊರೆಸಿದ್ದು ಅಂತರ್ಜಲ ಕುಸಿತದಿಂದ ನೀರು ಬಾರದೆ ತಾವು ಬೇಳೆದ ದಾಳಿಂಬೆ, ರೇಷ್ಮೆ ಕೈಕೋಟ್ಟಿದ್ದು ತನ್ನ ಜಮಿನಿನ ಅಬಿವೃದ್ದಿಗಾಗಿ ಮಾಡಿದ್ದ ಸಾಲ ಬೆನ್ನಿಗೆ ಬಿದ್ದ ಕಾರಣ ಸಾಲದ ಬಾದೆ ತಾಳಲಾರದೆ ಮರಕ್ಕೆ ನೇಣು ಬೀಗಿದು ಕೋಂಡು ಆತ್ಮಹತ್ಯೆಗೆ ಶರಣಗಿದ್ದಾರೆ ಎನ್ನಲಾಗಿದೆ. ಪಿಎಲ್‍ಡಿ ಬ್ಯಾಂಕ್‍ನಲ್ಲಿ 2.20.00, ಕೆನರ ಬ್ಯಾಂಕ್‍ನಲ್ಲಿ 40.000, ಬರಗೂರು ವಿಎಸ್‍ಎಸ್‍ಎನ್‍ನಲ್ಲಿ 25.000, ಬರಗೂರು ಧರ್ಮಸ್ಥಳ ಸಂಘದಲ್ಲಿ 80.000, ಖಾಸಗಿ ಹಣ ಸಂಸ್ಥೆಯಲ್ಲಿ 1.55.000 ಸಾಲಪಡೆದಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣವನ್ನು ಪಟ್ಟನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಭೇಟಿ :
ಶಾಸಕ ಬಿ,ಸತ್ಯನಾರಾಯಣ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್ ರಾಮಕೃಷ್ಣ,ತಾಪಂ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ರೈತ ಸಂಘದ ನಾದೂರು ಕೆಂಚಪ್ಪ, ಭೇಟಿ ನೀಡಿ ಮೃತ ಕುಟುಂಬಕ್ಕೆ ಸಂತ್ವನ ಹೇಳಿದರು.