ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಾದಿಹಳ್ಳಿ ಗ್ರಾಮಕ್ಕೆ ರೈತ ಸಂಘದ ಮನವಿಯ ಮೇರೆಗೆ ೭೬ವರ್ಷಗಳ ನಂತರ ಸರ್ಕಾರಿ ಬಸ್ ಸೌಲಭ್ಯ ದೊರೆತಿದೆ.
ಮಾದಿಹಳ್ಳಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸವಿರುವ ಗ್ರಾಮವಾಗಿದೆ ಇಲ್ಲಿ ಶರಣರ ಮಠವೂಸಹ ಇದ್ದು, ಗ್ರಾಮದ ಸುತ್ತಮುತ್ತ ಹಲವು ಸಣ್ಣಪುಟ್ಟ ಹಳ್ಳಿಗಳಿದ್ದು ಸ್ವಾತಂತ್ರö್ಯ ಬಂದಾಗಿನಿAದಲೂ ಈ ಭಾಗಕ್ಕೆ ಸಾರಿಗೆ ಸೌಲಭ್ಯವಿರಲಿದ ಕಾರಣ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನಡೆದುಕೊಂಡು ಹಾಗೂ ಬೈಕ್ ಹಾಗೂ ಇನ್ನಿತರ ವಾಹನಗಳಲ್ಲಿ ಪ್ರಯಾಣಿಸಬೇಕಿತ್ತು. ಹಲವಾರು ವರ್ಷಗಳಿಂದ ಸಾರಿಗೆ ಸೌಲಭ್ಯಕ್ಕಾಗಿ ಮಾಡಿದ ಮನವಿಗೆ ಸ್ಪಂದನೆ ದೊರೆತಿರಲಿಲ್ಲ. ರೈತಸಂಘ ಹಾಗೂ ಹಸಿರು ಸೇನೆಯಿಂದ ಈ ಭಾಗಕ್ಕೆ ಸಾರಿಗೆ ಸೌಲಭ್ಯ ನೀಡುವಂತೆ ತುಮಕೂರು ಸಾರಿಗೆ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ತಿಪಟೂರಿನಿಂದ ಹಾಗೂ ಚಿಕ್ಕನಾಯಕನಹಳ್ಳಿಯಂದ ಎರಡು ಬಸ್‌ಗಳನ್ನು ಈ ಮಾರ್ಗದಲ್ಲಿ ಬಿಡಲಾಗಿದೆ. ತಮ್ಮ ಮನವಿಗೆ ಸ್ಪಂಧಿಸಿ ಸಾರಿಗೆ ಸೌಲಭ್ಯಕಲ್ಪಿಸಿದ ಸಾರಿಗೆ ವಿಭಾಗಕ್ಕೆ ರೈತ ಸಂಘದ ಅಧ್ಯಕ್ಷ ಸಿ.ಬಿ.ಲಿಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯದುಕುಮಾರ್, ಉಪಾಧ್ಯಕ್ಷ ಕೆ.ರೇವಣ್ಣ, ವಿರುಪಾಕ್ಷಯ್ಯ, ಪುಟ್ಟಯ್ಯ, ನಟರಾಜು, ಬಸವರಾಜು, ಮಹಿಳಾ ಸಂಘದ ಅಧ್ಕ÷್ಷರಾದ ಪುಷ್ಪ, ಭಾಗ್ಯಮ್ಮ,ಲೀಲಾವತಿ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
(Visited 1 times, 1 visits today)