ತುರುವೇಕೆರೆ: ದೇಶದಲ್ಲಿನ ದಿವ್ಯಾಂಗರನ್ನು ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷವಾಗಿ ಗುರುತಿಸಿ ಸವಲತ್ತು ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ರೈಲ್ವೇ ಸಚಿವ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯೊಡಿ ವಿಕಲಚೇತನರಿಗೆ ಉಚಿತ ಸಾದನ ಸಲಕರಣೆಗಳ ಸಮರ್ಪಣೆ ಹಾಗೂ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ವಿಕಲಚೇತನರಿಗೆ ಉಚಿತ ಸಲಕರಣೆ ನೀಡಿ ಮಾತನಾಡಿದ ಅವರು ರಾಷ್ಟçದಲ್ಲಿ ಸುಮಾರು ೮ ಕೋಟಿ ಕುಟುಂಬ ದಿವ್ಯಾಂಗರು ಇದ್ದು ಕೇಂದ್ರ ಸರ್ಕಾರ ಗುರುತಿಸಿ ಅವರಿಗೆ ಸರ್ಕಾರದ ಸವಲತ್ತು ನೀಡುತ್ತಿದೆ. ಜಿಲ್ಲೆಯಲ್ಲಿ ೧೫೦೦ ಕುಟುಂಬ ವಿಶೇಷ ಚೇತನರಿದ್ದು ಇಂದು ತಾಲೂಕಿನ ಸುಮಾರು ೩೨೧ ವಿಶೇಷ ಚೇತರಿಗೆ ಉಚಿತ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದರು.
ತುರುವೇಕೆರೆ ಕ್ಷೇತ್ರವನ್ನು ನನ್ನ ಕೊನೆಯ ಉಸಿರು ಇರುವ ತನಕ ಮರೆಯಲು ಸಾದ್ಯವಿಲ್ಲ ಲೋಕಸಭಾ ಚುನಾವನೇಯಲ್ಲಿ ಸುಮಾರು ೫೦ ಸಾವಿರ ಲೀಡ್ ಕೊಟ್ಟ ಈ ಜನತಗೆ ನಾನು ಋಣ ತಿರಿಸುವಂತಹ ಕೆಲಸ ಮಾಡುತ್ತಿದ್ದೇನೆ. ಹಲವು ರೈಲೆಗಳನ್ನು ನಿಲ್ಲಿಸುವಂತೆ ಮಾಡಿದ್ದು. ಮುಂಇದನ ದಿನಗಳಲ್ಲಿ ತಿಪಟೂರಿನಿಂದ ಬೆಂಗಳೂರು ವರೆಗೂ ಮೊಮೊ ರೈಲು ಪ್ರಾರಂಬಿಸಲಾಗುವುದು. ಬಾಣಸಂದ್ರ ಸಮೀಪ ಬಾಗದಲ್ಲಿನ ನಿಕ್ಕಲ್ ಕೊಬಾಲ್ಡ್ ಗಣಿಗಾರಿಯನ್ನು ಪ್ರಾರಂಬಿಸಲಾಗುತ್ತದೆ ಎಂದು ಈ ಬಾಗದ ರೈತರು ನೀಡಿದ್ದ ಮನವಿಯನ್ನು ಆಲಿಸಿ ಗಣಿಗಾರಿಗೆ ನಿಲ್ಲಿಸುವಂತೆ ಮಾಡಿ ದ್ದೇನೆ. ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು,
ಬಿ.ಎಲ್.ಸAತೋಷ್ ಸಲಹೆಯಿಂದ ನನಗೆ ಮಂತ್ರಿ ಲಾಟರಿ : ಪ್ರದಾನಿ ನರೇಂದ್ರ ಮೋದಿಜಿಯವರನ್ನು ವಿಷ್ ಮಾಡುವಂತೆ ಬಿ.ಎಲ್.ಸಂತೋಷ್ ಸೂಚಿಸಿದರು. ನಾನು ಎಂಪಿ ಹಾಗಿದ್ದಿ ಸಾಕು ಎಂದು ಸುಮ್ಮನಾಗಿದ್ದೆ ನಂತರ ಮೋದಿಜಿಗೆ ಶುಭಾಶಯ ತಿಳಿಸಿದ ಕೂಡಲೇ ನರೇಂದ್ರ ಮೋದಿಯವರು ತಬ್ಬಿಕೊಂಡು ನನಗೆ ಡಬಲ್ ವಿಷ್ ಮಾಡಿದರು. ನಂತರ ಇಬ್ಬರು ರಾಜ್ಯದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿದ್ದರು ನನಗೆ ಕೇಂದ್ರ ಸಚಿವರನ್ನಾಗಿ ಮಾಡಿದ್ದು ನಿಮ್ಮಗಳ ಆಶೀರ್ವಾದದಿಂದ ಎಂದರು.
ಎಕ್ಸ್ ಪ್ರಸ್ ಕೆನಾಲ್ ಹೋರಾಟಕ್ಕೆ ಬಂದರೆ ಗೂಟದ ಕಾರು ಕಿತ್ತಾಕುತ್ತಾರೆ: ಈ ಜಿಲ್ಲೆಯಿಂದ ಎಂ.ಪಿಯಾಗಿದ್ದರಾ ಹೇಮಾವತಿ ಎಕ್ಷ್ ಪ್ರಸ್ ಚಾನಲ್ ವಿರುದ್ದವಾಗಿ ಹೋರಾಟಕ್ಕೆ ಬರುಂತೆ ಈ ಭಾಗದ ಜನರು ಜನಪತ್ರಿನಿದಿಗಳಿಂದ ಒತ್ತಡ ಬಂದಿದೆ. ಆದರೆ ನಾನು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಶಾಸಕ ಮಸಾಲಜಯರಾಮ್ ಗೆ ಹೇಳಿದ್ದಿನಿ ಕೇಂದ್ರ ದ ಮಂತ್ರಿಯಾಗಿ ಹೋರಾಟಕ್ಕ ಬರಲು ಸಾದ್ಯವಿಲ್ಲ ಬಂದರೆ ಗೂಟದ ಕಾರು ಕಿತ್ತು ಹಾಕ್ತಾರೆ ಎಂದು ರಾಜ್ಯ ಸರ್ಕಾರಕ್ಕೆ ಕಿವಿನೂ ಇಲ್ಲ ತಲೆನೂ ಇಲ್ಲ ಎಂದು ಜರಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ರಾಜ್ಯ ಸರ್ಕಾರ ಗಂಡನ ದುಡ್ಡು ಕಿತ್ತುಕೊಂಡು ಹೆಂಡತಿಗೆ ಕೊಡುತ್ತಿದೆ. ಟ್ಯಾಕ್ಸ್ ಸಿದ್ದರಾಮಯ್ಯರಾಗಿ ಎಲ್ಲದರ ಮೇಲು ಟ್ಯಾಕ್ಸ್ ಹಾಕಿದ್ದಾರೆ ಎಣ್ಣೆ ಮೇಲು ಇನ್ನು ಟ್ಯಾಕ್ಸ್ ಹಾಕಿದ್ದಾರೆ. ರೈತರಿಗೆ ಸರಿಯಾಗಿ ವಿದ್ಯುತ್ ನೀಡಲು ವಿಪಲವಾಗಿರುವ ಸರ್ಕಾರ ಕತ್ತಲೆ ಬಾಗ್ಯ ನೀಡುತ್ತಿದೆ. ತೋಟದ ಮನೆಯವರು ರಾತ್ರಿ ಹೊತ್ತು ದೀಪ ಹಚ್ಚಿಕೊಂಡು ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿ ಅದಿವೇಷನ ಕಳೆದ ನಂತರ ರಾಜ್ಯ ಸರ್ಕಾರದ ವಿರುದ್ದ ಹೋರಾಟ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅರ್ಹ ಪಲಾನುಭವಿಗಳಿಗೆ ಸವಲತ್ತು ವಿತರಿಸಿ ನಂತರ ಸಾರ್ವಜನಿಕರ ಅರ್ಜಿ ಸ್ವೀಕರಿಸಿ ಅದಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಬದಲ್ಲಿ ಮಾಜಿ ಶಾಸಕರಾದ ಎಂ.ಡಿ. ಲಕ್ಷಿö್ಮÃನಾರಾಯಣ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನನಟೇಶ್ ಉಪಾಧ್ಯಕ್ಷೆ ಬಾಗ್ಯಮ್ಮ ಸದಸ್ಯರಾದ ಅಂಜನ್ ಕುಮಾರ್, ಚಿದಾನಂದ್, ಆಶಾರಾಜಶೇಖರ್ ಮುಖಂಡರಾದ ಹೆಬ್ಬಾಕರವಿ, ಕೊಂಡಜ್ಜಿವಿಶ್ವನಾಥ್, ಶಂಕರೇಗೌಡ, ಡಾ. ಚೌದ್ರಿನಾಗೇಶ್, ದೊಡ್ಡೇಗೌಡರು, ಮುತ್ತಣ್ಣ, ತಿಪಟೂರು ಉಪ ವಿಭಾಗದಿಕಾರಿ ಸಪ್ರಶ್ರೀ, ತಹಶೀಲ್ದಾರ್ ಎ.ಎನ್.ಕುಂ.ಇ.ಅಹಮದ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಪಲಾನುಭವಿಗಳು ಇದ್ದರು.

(Visited 1 times, 1 visits today)