ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಮಾರ್ಗದಲ್ಲಿರುವ ಉದ್ಭವ ಕಣೀವೇ ನರಸಿಂಹಸ್ವಾಮಿ ೭೦ ನೇ ಭ್ರಹ್ಮ ರಥೋತ್ಸವ ಶುಕ್ರವಾರ ಪಾಲ್ಗುಣ ಶುದ್ದ ಪೌರ್ಣಿಮೆ ಮದ್ಯಾಹ್ನ ೧೨-೪೫ ಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಯಿತು.
ವೆAದಪAಡಿತರು ಮಂತ್ರ ಘೋಷಣೆ, ಮಂಗಳವಾದ್ಯಗಳೊAದಿಗೆ ಶುಕ್ರವಾರ ಮದ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ತಹಶೀಲ್ದಾರ್ ಡಿ.ವರದರಾಜು ರಥೋತ್ಸವಕ್ಕೆ ಚಾಲನೆ ನೀಡಿದಾಗ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಹೂವು ಬಾಳೆಹಣ್ಣು ಎಸೆದು ಪುನೀತರಾದರು.
ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ವಿವಿಧ ಸಂಘಸAಸ್ಥೆಗಳು ಪಾನಕ- ಮಜ್ಜಿಗೆ ಅನ್ನಪ್ರಸಾದವನ್ನು ವಿತರಿಸಲಾಯಿತು,
ಗೆಳೆಯರ ಬಳಗದ ವತಿಯಿಂದ ಸುಮಾರು ೧ ಲಕ್ಷö್ಮ ವೆಚ್ಚದಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ರೇಷ್ಮೆ ಇಲಾಖೆಯ ಅವರಣದಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು, ಇದೇ ಅವರಣದಲ್ಲಿ ಕಾಳಿದಾಸ ಸಂಘ ಹಾಗೂ ದರ್ಜಿಗರ ಸಂಘ, ನರಸಿಂಹಸ್ವಾಮಿ ದೇವಸ್ಥಾನ ಸಮಿತಿ, ಶಿರಡಿ ಸಾಯಿಬಾಬಾ ವಾಯು ವಿಹಾರ ಬಳಗ, ಅಯ್ಯಪ್ಪ ಸೇವಾ ಸಮಿತಿ, ದಿವಂಗತ ಬಜ್ಜಪ್ಪರವರ ಕುಟುಂಬ, ವಾಲ್ಮೀಕಿ ಸಂಘ, ಶ್ರಿರಾಮನಾಯಕರ ಕುಟುಂಬ, ಪಿ.ವಿ. ಸುಬ್ಬನರಸಿಂಹ ಕುಟುಂಬದಿAದ ಅನ್ನ ಪ್ರಸಾದ ವಿತರಿಸಲಾಯತು.
ಡಾ. ಎ,ಪಿ. ಜೆ. ಅಬ್ದಲ್ ಕಲಾಂ ಮತ್ತು ಡಾ. ಶಿವಕುಮಾರ ಸ್ವಾಮೀಜಿ ಮತ್ತು ಶ್ರಿವಾರಿ ಮಂಡಳಿ, ಕರ್ನಾಟಕ ರಕ್ಷಣಾ ವೇದಿಕೆ, ಅಜಯ್ ಸಾರಥಿ ಗೆಳೆಯರ ಬಳಗ ವತಿಯಿಂದ ಪಾನಕ, ಮಜ್ಜಿಗೆ, ಹೆಸರುಬೇಳೆ, ವಿತರಿಸಲಾಯಿತು, ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹಗೋಪಾಲ್, ಮಾಜಿ ಪುರಸಭಾಧ್ಯಕ್ಷ ಎ. ಶಂಕರರೆಡ್ಡಿ, ಸುಬ್ಬನರಸಿಂಹ, ರಘುನಾಥಶರ್ಮ, ಕಸಬಾ ಆರ್.ಐ. ರಾಜಗೋಪಾಲ್, ಗ್ರಾಮ ಅಡಳಿತಾಧಿಕಾರಿ ರಾಜೇಶ್, ಪ್ರಸನ್ನಮೂರ್ತಿ, ನರಸಿಂಹನಾಯಕ್, ಮತ್ತಿತರರು ಹಾಜರಿದ್ದರು. ರಥೋತ್ಸದಲ್ಲಿ ಪಾವಗಡ ಪೋಲಿಸ್ ಠಾಣಾ ಸಿ.ಪಿ.ಐ. ಸುರೇಶ್ ಮತ್ತು ಪಿ.ಎಸ್.ಐ. ಗುರನಾಥ್ ಮತ್ತು ತಂಡ ಬಿಗಿ ಪೋಲೀಸ್ ಬಂದೋಭಸ್ತ್ ಕಲ್ಪಿಸಿದ್ದರು.
(Visited 1 times, 1 visits today)