ತಿಪಟೂರು: ನಗರದ ಸಂತೆಪೇಟೆ ಬಸವೇಶ್ವರ ದೇವಸ್ಥಾನದ ಕದಳಿ ಬಳಗ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿAದ ಸಾಲವನ್ನು ಪಡೆದು ಮೊದಲು ಗಾಡಿಯ ಮೂಲಕ ತರಕಾರಿ ಮಾರಾಟ ಮಾಡುತ್ತಾ, ನಂತರ ದ್ವಿಚಕ್ರ ವಾಹನ ಮೂಲಕ, ನಾಲ್ಕು ಚಕ್ರದ ವಾಹನ ಖರೀದಿ ಮಾಡಿ ಹಳ್ಳಿ ಹಳ್ಳಿಗೆ ತೆರಳಿ ಸ್ವಾವಲಂಬಿ ವ್ಯಾಪಾರ ಮಾಡುತ್ತಿರುವ ತರಕಾರಿ ಗಂಗಮ್ಮ ಹಾಗೂ ಗಾಯನದಲ್ಲಿ ಕರೋಗಿಗಾನಶ್ರೀ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಪುಷ್ಪಮೂರ್ತಿ ಮತ್ತು ರಾಜೀವ್ ಗಾಂಧೀ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣದ ಎಂ.ಡಿ.ಎಸ್ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಡಾ.ಪ್ರಗತಿಸಂಗಮೇಶ್ ಸಾಧನೆ ಮಾಡಿದವರಿಗೆ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕದಳಿ ಬಳಗದ ಪ್ರಭಾವಿ ಶ್ವನಾಥ್, ಅನು, ಮಂಜುಳತಿಮ್ಮೇಗೌಡ, ರೇಖಾ ಅನೂಪ್, ಆಶಾ ಮಂಜುನಾಥ್, ಕ್ಯಾತ್ಯಾ ಯಿನಿ, ಹೇಮಾಕಿಟ್ಟಿ, ಉಮಾನಾ ರಾಯ ಣಗೌಡ, ಅನುಸಂಗಮೇಶ್, ರೇವತಿಉಮೇಶ್, ಸುಮನಾ, ಜಯಮ್ಮ, ಸ್ವಪ್ನರೇಣು, ಮಮತ ಪಟೇಲ್, ಮಂಜಮ್ಮ, ರೇಣುಕ, ಮಮತ ರಾಜು, ಆರತಿಮಲ್ಲಿಕಾರ್ಜುನ, ಶರಾವತಿಪ್ರಕಾಶ್, ನಾಗರತ್ನಬೆಣ್ಣೆನಹಳ್ಳಿ, ಪ್ರೇಮಾವಿಶ್ವನಾಥ್, ಜಗ ದಾಂಬ, ಸುನೀತ ಪ್ರವೀಣ, ಸ್ವರ್ಣಷಡಾಕ್ಷರಿ, ಮಮತ ನಿರಂಜನ, ಸುಕನ್ಯಬಿಂದೇಗೌಡ, ಚಂದ್ರ ಮತಿವಿಜಯಣ್ಣ, ಸಾವಿತ್ರಿಹೊಸಮನಿ, ನಂದಿನಿಶಶಿ, ಸಿದ್ದಗಂಗ, ಲೋಹಿತಾಮೋಜಂದಾರ ಮತ್ತಿತ್ತರು ಹಾಜರಿದ್ದರು.

(Visited 1 times, 1 visits today)