ಪಾವಗಡ: ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಶ್ರೀ ಯೋಗಿ ನಾರಾಯಣ ಯತೀಂದ್ರರ ೨೯೯ನೇ ಜಯಂತಿ ಭಕ್ತಿಭಾವದಿಂದ ಆಚರಿಸಲಾಯಿತು. ತಾಲೂಕು ಆಡಳಿತ ಮತ್ತು ತಾಲೂಕು ಬಲಿಜ ಸಂಘದ ವತಿಯಿಂದ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಿ.ಎನ್. ವರದರಾಜು ಭಾಗವಹಿಸಿ, ಸಮುದಾಯದ ಜನತೆಗೆ ಶುಭಕೋರಿದರು. ಅವರು ಮುಂದಿನ ದಿನಗಳಲ್ಲಿ ಸಮುದಾಯವು ವಿಜೃಂಭಣೆಯಿAದ ಕಾರ್ಯಕ್ರಮಗಳನ್ನು ನಡೆಸಿದರೆ, ಸರ್ಕಾರದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಲಿಜ ಸಮುದಾಯದ ಮುಖಂಡ ರವಿ ಮಾತನಾಡಿ, ಸಮುದಾಯದ ಒಗ್ಗಟ್ಟಿನ ಮಹತ್ವವನ್ನು ಕುರಿತು ಮಾತನಾಡಿದರು.
ನಂತರ ಪಟ್ಟಣದ ಶ್ರೀ ಯೋಗಿ ನಾರಾಯ ಣಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆಗಳನ್ನು ಸಮುದಾಯದ ಬಂಧುಗಳು ನೆರವೇರಿಸಿದರು
ಕಾರ್ಯಕ್ರಮದಲ್ಲಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಗುರ್ರಪ್ಪ, ಪುರಸಭಾ ಸದಸ್ಯರಾದ ವೆಂಕಟರಮಣ, ಸತ್ಯ ಲೋಕೇಶ್, ಗಜ ರಮೇಶ್, ಬಿಜೆಪಿ ರವಿ, ಗೋವಿಂದ ಬಾಬು, ಅಶ್ವತ್ಥಪ್ಪ, ಪೋಟೋ ಅಮರ್, ಪ್ರಸಾದ್ ಬಾಬು, ಮಹೇಶ್, ರಾಘವೇಂದ್ರ, ಸುರೇಶ್, ನವೀನ್, ಎಸ್.ಎಸ್.ಕೆ ವಿನಯ್ ಬಾಬು, ಪತ್ರಕರ್ತ ಅನಿಲ್ ಮಹಾದೇವ್, ಗಿರೀಶ್, ಭಾನು, ಭರತ್ ಮುರಳಿ, ಆರ್ ಐ ರಾಜಗೋಪಾಲ್ , ವಿಎ ರಾಜೇಶ್, ಹರ್ಷಿತ, ಕಾವ್ಯ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

(Visited 1 times, 1 visits today)