ಗುಬ್ಬಿ: ರೈತರಿಗೆ ಜಮೀನು ಮಂಜೂರು ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಭರ್ತಿ ಮಾಡಿಕೊಂಡು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸುವ ಮಧ್ಯವರ್ತಿಯ ದಂಧೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಸರ್ಕಾರ ಭೂ ಸುಧಾರಣಾ ಕಾನೂನು ಮರುಸ್ಥಾಪಿಸಲು ಹೆಚ್ಚುವರಿ ಭೂಮಿ ವಶಕ್ಕೆ ಪಡೆದು ಅರ್ಹರಿಗೆ ಮಂಜೂರು ಮಾಡುವ ಆದೇಶ ತಿಳಿದ ಬಳಿಕ ತಾಲ್ಲೂಕಿನ ಗಡಿ ಭಾಗದಲ್ಲಿ ಗೋಮಾಳ ಜಮೀನು ಸರ್ಕಾರ ಮಂಜೂರು ಮಾಡುತ್ತದೆ ಎಂಬ ವದಂತಿ ಹಬ್ಬಿಸಿ ಮುಗ್ಧ ಹಳ್ಳಿ ಜನರಿಂದ ಮುಖ್ಯ ಮಂತ್ರಿಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಭೂಮಿ ಸಿಗುತ್ತದೆ ಎಂಬ ಗಾಢವಾದ ನಂಬಿಕೆಗೆ ಸಿಲುಕಿದ ರೈತರಿಗೆ ಅರ್ಜಿ ನಮೂನೆಯನ್ನು ಸಾವಿರ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ದಾಖಲೆ ಇಲ್ಲದೆ ಮನಬಂದAತೆ ಬೇರೆ ಜಿಲ್ಲೆ ತಾಲ್ಲೂಕಿನ ರೈತರು ಸಹ ಅರ್ಜಿ ನೀಡುತ್ತಿದ್ದಾರೆ ಎಂಬ ಚರ್ಚೆ ತಾಲ್ಲೂಕು ಕಚೇರಿ ಆವರಣದಲ್ಲಿ ಕಂಡು ಬಂತು.
ಕೆಲ ತಿಂಗಳ ಹಿಂದೆ ಚೇಳೂರು ಮತ್ತು ಹಾಗಲ ವಾಡಿ ಹೋಬಳಿಯ ರೈತರು ಹೋರಾಟ ನಡೆಸಿ ಭೂಮಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ಚಳವಳಿ ಆರಂಭಿಸಿದ್ದರು. ಈ ಸಮಯದ ಅರ್ಜಿ ನಮೂನೆಯನ್ನು ಬಂಡವಾಳ ಮಾಡಿಕೊಂಡ ಕೆಲ ದಂಧೆಕೋರರು ಹಣ ಪೀಕಲು ಅರ್ಜಿಯನ್ನು ಸಾವಿರ ರೂಗಳಿಗೆ ಮಾರಾಟ ಮಾಡಿ ಅರ್ಜಿ ತುಂಬಿಸಿಕೊAಡು ತಾಲ್ಲೂಕು ಕಚೇರಿಗೆ ನೀಡಲು ಬಂದಿರುವುದು ಕಂಡ ತಹಸೀಲ್ದಾರ್ ಬಿ.ಆರತಿ ಅವರು ಮುದ್ರಿತ ಅರ್ಜಿ ನಮೂನೆ ಕಂಡು ಒಬ್ಬರೇ ನೂರಾರು ಅರ್ಜಿ ಹೇಗೆ ಸಲ್ಲಿಸುತ್ತೀರಿ ಎಂದು ಅರ್ಜಿ ಹಿಡಿದು ಬಂದಾತನನ್ನು ಪ್ರಶ್ನಿಸಿದರು.
ಈಗಾಗಲೇ ನಾಲ್ಕು ಸಾವಿರ ಅರ್ಜಿ ಬಂದಿದ್ದು, ಬಗರ್ ಹುಕುಂ ಸಮಿತಿಗೆ ಬಂದ ಸಾವಿರಾರು ಅರ್ಜಿಗಳನ್ನು ವಜಾ ಗೊಳಿಸಲಾಗಿದೆ. ಅರ್ಹ ರೈತರು, ಅನುಭವದಲ್ಲಿರುವ ರೈತರ ಅರ್ಜಿಗಳೇ ರದ್ದು ಆಗಿದೆ. ಇದೆಲ್ಲಾ ತಿಳಿದು ಸಹ ಸಾವಿರಾರು ಅರ್ಜಿಯನ್ನು ತಂದು ತಾಲ್ಲೂಕು ಕಚೇರಿಗೆ ಸಲ್ಲಿಸುವ ಮಧ್ಯವರ್ತಿಗಳ ಉದ್ದೇಶ ತಿಳಿಯಬೇಕಿದೆ. ಯಾವುದೇ ದಾಖಲೆ ಇಲ್ಲದ ಅರ್ಜಿ ನಮೂನೆ ನೇರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು ಹೇಗೆ ವಿಲೇವಾರಿ ಮಾಡಲು ಸಾಧ್ಯ ಎಂಬ ಗೊಂದಲ ಕಚೇರಿಯ ಸಿಬ್ಬಂದಿಯಲ್ಲಿ ಕಾಣುತ್ತಿದೆ. ಅರ್ಜಿಯ ಜೊತೆ ಆ ಧಾರ್ ಕಾರ್ಡ್, ಪಡಿತರ ಚೀಟಿ, ಬಗರ್ ಸಮಿತಿಗೆ ಸಲ್ಲಿಸಿದ್ದ ಅರ್ಜಿ ನಮೂನೆಗಳು ಹೀಗೆ ಇರುವ ದಾಖಲೆ ಒದಗಿಸಬೇಕಿದೆ. ಫಲಾನುಭವಿಗಳು ಬಂದು ಅವರವರ ಅರ್ಜಿ ಸಲ್ಲಿಸಲಿ ಎಂದು ಸೂಚಿಸಿ ನೂರಾ ರು ಅರ್ಜಿಯನ್ನು ತಿರಸ್ಕರಿಸಲಾಯಿತು. ತಕ್ಷಣ ಮಧ್ಯವರ್ತಿ ಸ್ಥಳದಿಂದ ಕಾಲ್ಕಿತ್ತ ಘಟನೆ ನಡೆಯಿತು.
(Visited 1 times, 1 visits today)