ಬೆಂಗಳೂರು:
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿಯಲ್ಲಿ ಡಿಜಿಟಲ್ ಹಾಗೂ ಸ್ಮಾರ್ಟ್ ಕೈಗಡಿಯಾರವನ್ನು ನಿಷೇಧಿಸಿ ಕರ್ನಾಟಕ ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡುವ ಸಾಧ್ಯತೆ ಇದೆ ಎಂದು ಎಲ್ಲಾ ಕೈಗಡಿಯಾರವನ್ನು ನಿಷೇಧಿಸಲು ಮೊದಲ ಚಿಂತನೆ ನಡೆದಿತ್ತು ಆದರೆ ಎಲ್ಲಾ ವಿದ್ಯಾರ್ಥಿಗಳ ಬಳಿಕ ಡಿಜಿಟಲ್ ಕೈಗಡಿಯಾರ ಇರುವುದಿಲ್ಲ.
ನಮಗೆ ಸಮಯ ನೋಡಲು ತೊಂದರೆಯಾಗುತ್ತದೆ ಹಾಗಾಗಿ ಅನಾಲಾಗ್, ಮೆಕ್ಯಾನಿಕಲ್ ಕೈಗಡಿಯಾರವನ್ನು ಕಟ್ಟಲು ಅವಕಾಶ ಮಾಡಿಕೊಡಿ ಎಂದು ವಿದ್ಯಾರ್ಥಿಗಳು ಇಲಾಖೆಯಗೆ ಮನವಿ ಮಾಡಿದ್ದರು.
ಈ ಕುರಿತು ಗಂಭೀರ ಚಿಂತನೆ ನಡೆಸಿರುವ ಪ್ರೌಢಶಿಕ್ಷಣ ಮಂಡಳಿ ಅನಾಲಾಗ್, ಮೆಕ್ಯಾನಿಕಲ್ ಕೈಗಡಿಯಾರವನ್ನು ಬಳಕೆ ಮಾಡಬಹುದು, ಡಿಜಿಟಲ್, ಸ್ಮಾರ್ಟ್ ವಾಚ್‌ಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
(Visited 128 times, 1 visits today)