ತುರುವೇಕೆರೆ: ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕಲಾ ಸಂಗಮ ಕ್ರಿಯೇಷನ್ಸ್ ದಂಡಿನಶಿವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಮಾ.೨೭ರಂದು ಗೀತ ಗಾಯನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸಂಗಮ ಕ್ರಿಯೇಷನ್ಸ್ ನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಈಶ್ವರ್‌ದಲ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಕಲಾಸಂಗಮ ಕ್ರಿಯೇಷನ್ಸ್ ಟ್ರಸ್ಟ್ ಒಂದು ಕ್ರಿಯಾಶೀಲ ಸಾಂಸ್ಕೃತಿಕ ಸಂಸ್ಥೆಯಾಗಿದ್ದು ಹಲವಾರು ರಂಗ ಪ್ರಯೋಗಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡು, ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವAತಹ ಕಾರ್ಯ ಚಟುವಟಿಕೆಯನ್ನು ಹೊಂದಿದೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹುಟ್ಟೂರು ದಂಡಿನಶಿವರದಲ್ಲಿ ಸಾಂಸ್ಕೃತಿಕ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ಕಲಾ ಸಂಗಮ ಸಂಸ್ಥೆ ಸ್ಥಾಪಿಸಿ ಪ್ರತಿ ವರ್ಷ ರಂಗ ತರಭೇತಿ, ಕನ್ನಡ ಗೀತೆಗಳ ಗಾಯನೋತ್ಸವ, ವಿಶ್ವರಂಗಭೂಮಿ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವಗಳನ್ನು ರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ.
ಆ ನಿಟ್ಟಿನಲ್ಲಿ ಇದೇ ಮಾರ್ಚ್ ೨೭ರ ಗುರುವಾರ “ವಿಶ್ವ ರಂಗಭೂಮಿ ದಿನಾಚರಣೆ” ಅಂಗವಾಗಿ ತುರುವೇಕೆರೆ ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಬೆಳಿಗ್ಗೆ ೮ಕ್ಕೆ ರಂಗಗೀತೆ, ಭಾವಗೀತೆ, ದೇಶಭಕ್ತಿಗೀತೆ, ಜಾನಪದ ಗೀತೆಗಳೊಂದಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ ರಾಜ್ಯಮಟ್ಟದ “ಕರೋಕೆ ಗಾಯನ ಸ್ಪರ್ಧೆ” ಹಾಗೂ ಕಲಾಸಂಗಮ ಗಾನಕೋಗಿಲೆ ಅವಾರ್ಡ್ ೨೦೨೫ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ೧೮ವರ್ಷ ಮೇಲ್ಪಟ್ಟವರು ಮಾತ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಸೋಲೋ. ಯುಗಳ ಗೀತೆ ಹೀಗೆ ಅನೇಕ ಕಾರ್ಯಕ್ರಮಗಳು ನೆಡೆಯಲಿದ್ದು ವಿಜೇತರಾದವರಿಗೆ ಪಾರಿತೋಷಕ ಹಾಗೂ ಕಲಾಸಂಗಮ ಗಾನಕೋಗಿಲೆ ಅವಾ ರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿಶೇಷತೆಯೆಂದರೆ ತೀರ್ಪುಗಾರರಿಲ್ಲದೆ ಕೇವಲ ಸ್ಪರ್ಧಾ ಗಾಯಕರಿಂದಲೇ ವಿಜೇತರನ್ನು ಆಯ್ಕೆ ಮಾಡುವಂತಹÀ ವಿಭಿನ್ನ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಸ್ಪರ್ಧಾಳುಗಳು ನೋಂದಣಿಯಾಗುತ್ತಿದ್ದು ತಾಲ್ಲೂಕಿನ ಕಲಾಕುಸುಮಗಳು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ವಿವರಗಳಿಗೆ ೯೮೪೪೩೭೯೦೯೧, ೮೯೭೦೭೧೯೦೦೪ ಗೆ ಸಂಪರ್ಕಿ ಸುವಂತೆ ಈ ಮೂಲಕ ಕೋರಿದ್ದಾರೆ. ಈ ಸಂಧರ್ಭದಲ್ಲಿ ಕಲಾ ಸಂಗಮ ಕ್ರಿಯೇಷನ್ಸ್ ಟ್ರಸ್ಟ್ ನ ಖಜಾಂಚಿ ಕಿಶೋರ್‌ದಲ, ನಿರ್ಧೇಶಕರಗಳಾದ ಕೆ.ಚಿದಾನಂದ್, ಜಿ.ಅಶೋಕ್‌ರಾಜ್, ಕೇಶವಯ್ಯ ಕಲ್ಕೆರೆ ಉಪಸ್ಥಿತರಿದ್ದರು.
(Visited 1 times, 1 visits today)