ತುರುವೇಕೆರೆ: ಪಟ್ಟಣದ ಶ್ರೀ ಕೋಡಿಬಸವೇಶ್ವರ ಸ್ವಾಮಿ ಮತ್ತು ಶ್ರೀಭದ್ರಕಾಳಮ್ಮ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಬಹಳ ವಿಜೃಂಭಣೆಯಿAದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಶುಭ ಗೋದೋಳಿ ಲಗ್ನದಲ್ಲಿ ಶ್ರೀ ವೀರಭದ್ರಸ್ವಾಮಿಯವರ ಹಾಗೂ ಭದ್ರಕಾಳಿ ಯಮ್ಮನವರ ಕಲ್ಯಾಣೋತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಭಾನುವಾರ ಮದ್ಯಾಹ್ನ ೨ ಗಂಟೆಗೆ ಸರಿಯಾಗಿ ವಿರಕ್ತ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಲಿಂಗದ ವೀರರ ಕುಣಿತ, ಧ್ವಜ ಕುಣಿತದೊಂದಿಗೆ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ವೈಭವ ಯುತವಾಗಿ ಅಪಾರ ಭಕ್ತರ ಸಮಕ್ಷಮದಲ್ಲಿ ನೆರವೇರಿತು. ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿದರೆ, ದೇವಸ್ಥಾನ ಆಡಳಿತ ಮಂಡಳಿಯಿAದ ಬಂದAತ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪ ಡಿಸಲಾಗಿತ್ತು. ಶ್ರೀ ಬಸವೇಶ್ವರ ಯುವಕ ಸಂಘ, ಶ್ರೀ ವೀರಶೈವ ಸಮಾಜ ಹಾಗೂ ಶ್ರೀ ಮಹಿಳಾ ಸಮಾಜ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಜನಪ್ರ ತಿನಿಧಿಗಳು ಸೇರಿದಂತೆ ತುರುವೇಕೆರೆ ಪಟ್ಟಣದ ಭಕ್ತರು ಅಪಾರ ಸಂಖ್ಯೆಯಲ್ಲಿ ರ ಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು. ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಸ್ವಾಮಿಯವರ ಉಯ್ಯಾಲೋತ್ಸವ ಜರುಗಿತು.೧೬ಪೋಟೋ ಶಿರ್ಷಿಕೆ೦೨ ಇತಿಹಾಸ ಪ್ರಸಿದ್ದ ಶ್ರೀ ವೀರಭದ್ರಸ್ವಾಮಿಯವರ ರ ಥೋತ್ಸ ವವು ಭಕ್ತರ ಸಮ್ಮುಖದಲ್ಲಿ ಭಾನುವಾರ ಬಹಳ ವಿಜೃಂ ಭಣೆಯಿಂದ ನೆರವೇರಿತು.

(Visited 1 times, 1 visits today)