ಚಿಕ್ಕನಾಯಕನಹಳ್ಳಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಇಟಿ ಮತ್ತು ನೀಟ್ ತರಬೇತಿಯ ಸೌಲಭ್ಯ ಉಚಿತವಾಗಿ ದೊರೆತರೆ ನಗರ ಪ್ರದೇಶದ ಮಕ್ಕಳೊಂದಿಗೆ ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧೆ ತರಲು ಸಾಧ್ಯವಾಗುತ್ತದೆ ಎಂದು ಉಚಿತ ಸಿಇಟಿ ಹಾಗೂ ನೀಟ್ ತರಬೇತಿ ಶಿಬಿರವನ್ನು ಇದೆ ಮಾರ್ಚ್ ೧೯ ರಂದು ಉದ್ಘಾಟನೆ ಗೊಳ್ಳಲಿದೆ ಎಂದು ಶಾಸಕ ಹಾಗೂ ಜೆ ಡಿ ಎಲ್ ಪಿ ನಾಯಕ ಸಿಬಿ ಸುರೇಶ್ ಬಾಬು ಹೇಳಿದರು.
ಅವರು ಇಂದು ಪಟ್ಟಣದ ಜೋಗಿಹಳ್ಳಿ ಗೇಟ್ ಬಳಿ ಇರುವ ಎಚ್ ಡಿ ಎಫ್ ಸಿ ಬ್ಯಾಂಕ್ ಮೇಲ್ಭಾಗದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸುರೇಶ್ ಬಾಬು ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ತರಬೇತಿ ಹಮ್ಮಿಕೊಳ್ಳಲಾಗಿದೆ ಇದರ ಉದ್ಘಾಟನೆಯನ್ನು ಪಟ್ಟಣದ ತೀನಂಶ್ರೀ ಭವನದಲ್ಲಿ ಮಾರ್ಚ್ ೧೯ ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ ಪ್ರಭು ಉದ್ಘಾಟಿಸಲಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿಇಟಿ ತರಬೇತಿಯ ಮೇಲುಸ್ತುವಾರಿ ಸಮಿತಿಯ ನಿರ್ವಹಣೆ ಮೂಲಕ ಮಕ್ಕಳಿಗೆ ಪೂರಕವಾದ ದಿಕ್ಸೂಚಿಯಾಗಿ ಮಾತನಾಡಲಿದ್ದಾರೆ ನಿವೃತ್ತ ತಾಶಿಲ್ದಾರ್ ಲಕ್ಷ್ಮಣಪ್ಪ ಆಶಯ ನುಡಿಗಳನ್ನು ನೀಡುವರು.
ಸಿಇಟಿ ತರಬೇತಿಯಲ್ಲಿ ಲೋರಿತ ಉಪ ನ್ಯಾಸಕರಿಂದ ಹಾಗೂ ಸಂಬAಧ ಪಟ್ಟ ತಾಲೂಕಿನ ಕಾಲೇಜುಗಳ ಪ್ರಾಂಶುಪಾಲರುಗಳು ಒಳಗೊಂಡAತೆ ಸಿಬ್ಬಂದಿಗಳ ಮೂಲಕ ನೀಡಿದ ತರಬೇತಿಯಿಂದ ವಿದ್ಯಾರ್ಥಿಗಳ ಗುಣಮಟ್ಟ ಪರಿಶೀಲಿಸಲು ಪ್ರಶ್ನೆ ಪತ್ರಿಕೆ ಎಂದಿಗೆ ಉತ್ತರ ಪತ್ರಿಕೆಗಳನ್ನು ಆಗಿರುವ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳುವ ವಿಧಾನದ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ನಿರ್ವಹಣೆ ಮಾಡಲಾಗುವುದು ಅದಕ್ಕಾಗಿ ವಿಶೇಷ ನಾಲ್ಕು ತಂಡಗಳಾಗಿ ಪರಿಗಣಿಸಿ ಅವರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯ ಅನಾವರಣವನ್ನು ಅವಲೋಕಿಸಲು ಸಾಧ್ಯವಾಗುತ್ತದೆ ಅಲ್ಲದೆ ತಾಲೂಕಿನಿಂದ ೧೫೦ ರಿಂದ ೧೭೫ ಮಕ್ಕಳು ತರಬೇತಿಗಾಗಿ ನೋಂದಣಿಯಾಗಿದ್ದು ಇವುಗಳ ಸಂಖ್ಯೆ ೩೦೦ ದಾಟುವ ನೀರಿಕ್ಷೆ ಒಂದಿದ್ದು ಹಾಗಾಗಿ ಅಗತ್ ಅದಕ್ಕೆ ಬೇಕಾದ ಪೂರಕವಾದ ತರಬೇತಿ ಪುಸ್ತಕಗಳು ಪೂರಕ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಧ್ಯಾಹ್ನದ ಊಟ ಜೊತೆಗೆ ಸಂಜೆ ಸ್ನಾಕ್ಸ್ ನೀಡುವ ಮೂಲಕ ಆ ಮಕ್ಕಳುಗಳ ಮಾನಸಿಕ ಸ್ಥಿರತೆಯನ್ನು ಒಂದೆಡೆ ಇರುವಂತೆ ಮಾಡುವ ನಿಟ್ಟಿನಲ್ಲಿ ಈ ಶೈಕ್ಷಣಿಕ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಸರ್ಕಾರ ಕೂಡ ಹೈದ್ರಾಬಾದಿನ ವಿದ್ಯಾಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಆನ್ಲೈನ್ ಕೋಚಿಂಗ್ ತರಬೇತಿಯನ್ನು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು ಅದು ಅಷ್ಟು ಯಶಸ್ವಿ ಆಗಲಾರದು, ಆನ್ಲೈನ್ ತರಬೇತಿಯಲ್ಲಿ ಮರು ಪ್ರಶ್ನೆ ಹಾಕಲು ಸಾಧ್ಯವಾಗುವುದಿಲ್ಲ ಹೀಗಾಗಿ ಅಷ್ಟು ಪೂರಕವಾದ ಎಂಬುದು ನನ್ನ ಅಭಿಪ್ರಾಯವಾಗಿದೆ ಹೀಗಾಗಿ ಮಕ್ಕಳು ತರಬೇತುದಾರರಿಂದ ನೀಡುವ ತರಬೇತಿಗೆ ಪಾಲ್ಗೊಂಡು ನಿಮ್ಮ ಶೈಕ್ಷಣಿಕ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಪೂರಕವಾಗುವಂತೆ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.
ತರಬೇತಿಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ನಿವೃತ್ತ ತಹಶೀಲ್ದಾರ್ ಲಕ್ಷ್ಮಣಪ್ಪ ಮಾತನಾಡಿ ನಗರ ಪ್ರದೇಶಗಳಲ್ಲಿ ಸಿಇಟಿ ನೀಟ್ ತರಬೇತಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆರ್ಥಿಕವಾಗಿ ದುಬಾರಿಯಾಗಬಹುದು ಅದಕ್ಕಾಗಿ ನಮ್ಮ ಶಾಸಕರು ರಾಜ್ಯದ ನಾನಾ ಮೂಲಗಳಿಂದ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನಗರ ಪ್ರದೇಶದಲ್ಲಿ ಸಿಗುವಂತಹ ಗುಣಮಟ್ಟದ ಸಿಇಟಿ ನೀಟ್ ತರಬೇತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸಿಗುವಂತೆ ಮಾಡಿರುವುದು ಅವರ ಕನಸಾಗಿದೆ ಇದರ ಉಪಯೋಗವನ್ನು ತಾಲೂಕಿನ ಮಕ್ಕಳು ಹಾಗೂ ನೆರೆಹೊರೆಯ ತಾಲೂಕುಗಳ ಮಕ್ಕಳು ಉಪಯೋಗಿಸುವಂತೆ ಮನವಿ ಮಾಡಿದರು ಮೇಲುಸ್ತುವಾರಿ ಸಮಿತಿಯ ಸದಸ್ಯ ಎಂ ಎಸ್ ರವಿಕುಮಾರ್ ಮಾತನಾಡಿ ರಾಜ್ಯಮಟ್ಟದಲ್ಲಿಯೇ ನಡೆಸುವ ತರಬೇತಿದಾರರು ಹೊಂದಿರದAತಹ ಪುಸ್ತಕಗಳನ್ನು ಬೇರೆ ರಾಜ್ಯಗಳಿಂದ ಸಂಗ್ರಹಿಸಲಾಗಿದೆ ಎಂದರು.
ವಕೀಲ ಸುನಿಲ್ ಇಂದ್ರಬಾಬು ಉಮೇಶ್ ಯೋಗೇಶ್ ಜಾಕೀರ್ ದಪ್ಪಕುಂಟೆರವಿಕುಮಾರ್ ಸಿಟಿ ಸುರೇಶ್ ಎಂಎನ್ ಸುರೇಶ್ ಕುಮಾರ್ ನಾಗರಾಜು ಗೌತಮ್ ಶಿವಣ್ಣ ಉಪಸ್ಥಿತರಿದ್ದರು.
(Visited 1 times, 1 visits today)