ತುಮಕೂರು: ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಯಾಗಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಇತರರಿಗೆ ಪರಿಹಾರವನ್ನು ಒದಗಿಸುವ ದೃಷ್ಟಿಯಿಂದ ೨೦೨೪ ರ ಜೂನ್ ೨೨ ರಂದು ನಡೆದ ೫೩ನೇ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಅನುಸಾರ ೨೦೧೭-೧೮’ ೨೦೧೮-೧೯, ೨೦೧೯-೨೦ ಹಣಕಾಸು ವರ್ಷಗಳಿಗೆ ಅನುಗುಣವಾಗಿ ೩೧-೦೩-೨೦೨೫ ರ ಒಳಗೆ ಬಾಕಿ ಇರುವ ತೆರಿಗೆ ಹಣವನ್ನು ಕಟ್ಟಿದವರಿಗೆ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಷರತ್ತಿನ ಅನ್ವಯ ಕಟ್ಟಲು ಕಾಲಾವಕಾಶ ನೀಡಲಾಗಿದ್ದು, ಈ ಅವಕಾಶವನ್ನು ಬಾಕಿ ಇರುವವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಪಿ ಆರ್ ಕುರಂದವಾಡ ಮನವಿ ಮಾಡಿದ್ದಾರೆ. ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ರವರು ೩೧-೦೩-೨೦೨೫ ರವರೆಗೂ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಮಾಡಲಾಗಿರುವ ಶಿಫಾರಸನ್ನು ಸ್ವಾಗತಿಸಿರುವ ಅವರು, ಈ ಅನುಕೂಲತೆಯನ್ನು ಜಿಲ್ಲೆಯ ಎಲ್ಲಾ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
(Visited 1 times, 1 visits today)