ತುಮಕೂರು: “ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ-ತಮ್ಮ ವಿದ್ಯೆಗೆ ತಕ್ಕ ಹಾಗೇ ಉದ್ಯೋಗ ಪಡೆದುಕೊಳ್ಳಬಹುದು”. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದ ಉದ್ಯೋಗಕ್ಕೆ ಬೇಕಾಗುವ ಎಲ್ಲಾ ಸಕಲ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ಕೌಶಲ್ಯವಿಲ್ಲದಿದ್ದರೆ ಕೆಲಸ ಸಿಗುವುದು ಬಹಳ ಕಷ್ಟವಾಗುತ್ತದೆ ಎಂದು ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಸಿ.ಎ. ಎಸ್.ವಿಶ್ವನಾಥ್‌ರವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ತುಮಕೂರು ಹಾಗೂ ನಿರ್ಮಾಣ್ ಆರ್ಗನೈಜೇಷನ್ ಇವರ ಸಹಯೋಗದೊಂದಿಗೆ ಅನನ್ಯ ಸಮೂಹ ಸಂಸ್ಥೆಗಳು, ಅನನ್ಯ ಇನ್ಟಿ÷್ಸಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಇವರುಗಳ ಸಹಯೋಗದಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಚ್ ೧೭ ರಂದು ಸೋಮವಾರÀ ಅನನ್ಯ ಕ್ಯಾಂಪಸ್‌ನಲ್ಲಿ “ಉದ್ಯೋಗ ಮೇಳ-೨೦೨೫”ರನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ೩೫ ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳಿAದ ಉದ್ಯೋಗಾವಕಾಶವನ್ನು ಮಾಡಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಸಿ.ಎ. ಎಸ್.ವಿಶ್ವನಾಥ್‌ರವರು ಮಾತನಾಡುತ್ತಾ ‘’ಉದ್ಯೋಗಾರ್ತಿಗಳು ಹೆಚ್ಚಿನ ಕೌಶಲ್ಯ ಪಡೆಯಬೇಕೆಂದು ತಿಳಿಸುತ್ತಾ, ಭಾರತದಲ್ಲಿ ಕಳೆದ ಆರು ವರ್ಷಗಳಿಂದ ಇಂಟನ್‌ಶಿಫ್ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು’’, ಇಂಟನ್‌ಶಿಫ್ ಅಥವಾ ತರಬೇತಿ ಅವಧಿಯಲ್ಲಿ ಪ್ರಸ್ತುತವಾದ ಕೌಶಲ್ಯಗಳನ್ನು ಅನುಭವದ ಮೂಲಕ ಪಡೆದುಕೊಳ್ಳುವುದು ಇದರ ಉದ್ದೇಶ. ಒಂದೇ ರೀತಿಯಲ್ಲಿ ಉದ್ಯೋಗಾರ್ತಿಗಳು ಸಾಕಷ್ಟು ತಾಂತ್ರಿಕ ಕೌಶಲ್ಯಗಳನ್ನು ಹೊಂದುವುದರ ಮೂಲಕ ಒಳ್ಳೆಯ ವೃತ್ತಿಪರನಾಗಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನನ್ಯ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಆರ್.ಉಮೇಶ್‌ರವರು ಮಾತನಾಡುತ್ತಾ ಹೆಚ್ಚಿನ ಯುವ ಜನತೆಗೆ ಉದ್ಯೋಗ ನೀಡಬೇಕೆಂದು ತಿಳಿಸುತ್ತಾ, ಬಂದAತಹ ಎಲ್ಲಾ ಕಂಪನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಉದ್ಯೋಗಾವಕಾಶಗಳನ್ನು ಹೆಚ್ಚಿನ ರೀತಿಯಲ್ಲಿ ಯುವಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನನ್ಯ ಇನ್ಟಿ÷್ಸಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನ ಟ್ರಸ್ಟಿಯಾದ ಡಾ.ಹೆಚ್.ಹರೀಶ್‌ರವರು ಮಾತನಾಡುತ್ತಾ ಅನನ್ಯ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೂ ಖಚಿತ ಉದ್ಯೋಗವನ್ನು ನೀಡಲು ಬಹಳ ಪ್ರಯತ್ನಿಸುತ್ತದೆ. ಸಂಸ್ಥೆಯೂ ಎಂದಿಗೂ ನಿರುದ್ಯೋಗಿಗಳನ್ನು ಸಂಸ್ಥೆಯಿAದ ತಯಾರಿಸಲು ಬಯಸುವುದಿಲ್ಲ ತಮ್ಮ ಪದವಿಯೊಂದಿಗೆ ಉದ್ಯೋಗವನ್ನು ಸಹ ಪಡೆದು ಸಂಸ್ಥೆಯಿAದ ವಿದ್ಯಾರ್ಥಿಗಳು ಹೊರ ಹೋಗಬೇಕು ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸಂಸ್ಥೆಯ ವತಿಯಿಂದ ದೀರ್ಘಕಾಲದಿಂದ ಮಾಡಲಾಗುತ್ತಿದೆ ಎಂದರು. ಉದ್ಯೋಗ ಮೇಳದಲ್ಲಿ ಸುಮಾರು ೩೫ ಕ್ಕೂ ವಿವಿಧ ಕಂಪನಿಗಳು ಭಾಗವಹಿಸಿದ್ದವು, ಹಾಗೂ ೬೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಂದಾಣಿ ಪ್ರಕ್ರಿಯೆಯಲ್ಲಿ ಶೇ.೬೮%ರಷ್ಟು ಉದ್ಯೋಗ ಅವಕಾಶಗಳು ದೊರಕಿದವು.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಿಶೋರ್‌ಕುಮಾರ್, ಜೀವನ್ ಕುಮಾರ್, ನಿರ್ಮಾಣ್ ಆರ್ಗನೈಜೇಷನ್ ಸಂಸ್ಥೆಯ ಲೋಹೀತ್ ದೊಡ್ಡಮನಿ, ಕೇಂದ್ರ ವ್ಯವಸ್ಥಾಪಕರು, ಕಾರ್ಯದರ್ಶಿಗಳಾದ ಟಿ.ಎನ್. ಚೆನ್ನಬಸವಪ್ರಸಾದ್, ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಡಾ.ಹೆಚ್.ಹರೀಶ್, ಅನನ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್, ಉದ್ಯೋಗ ಮತ್ತು ತರಬೇತಿ ಅಧಿಕಾರಿಯಾದ. ಶಮಂತಪ್ರಿಯ ಇದ್ದರು.

(Visited 1 times, 1 visits today)