ತುಮಕೂರು: ಸ್ಪರ್ಧಾತ್ಮಕ ಜಗತ್ತಿಗೆ ಕಂಪ್ಯೂಟರ್ ಜ್ಞಾನ ಮತ್ತು ಅದರ ಬಳಕೆ ಅನಿವಾರ್ಯ. ವಿದ್ಯಾಭ್ಯಾಸದ ಸಮಯದಿಂದಲೇ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆದುಕೊಂಡರೆ ಭವಿಷ್ಯ ಉಜ್ವ ಲವಾಗುವುದು ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಹೇಳಿದರು.
ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗವು ಸೋಮವಾರ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಕುರಿತ ಒಂದು ದಿನದ ರಾಷ್ಟಿçÃಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ವಿಭಾಗಗಳಲ್ಲಿಯೂ ತಂತ್ರಜ್ಞಾನ ಬಳಕೆ ಅವಶ್ಯಕವಾಗಿದೆ. ಎಲ್ಲಾ ಕಚೇರಿಗಳಲ್ಲಿಯೂ ಕಂಪ್ಯೂಟರ್, ಲ್ಯಾಪ್ಟಾಪ್ ನೋಡುತ್ತಿರುತ್ತೇವೆ. ಇಂತಹ ಯುಗಕ್ಕೆ ತಂತ್ರಜ್ಞಾನದ ಅರಿವು ಮುಂಚೂಣಿಯಲ್ಲಿರಬೇಕು ಎಂದರು.
ಸAಪನ್ಮೂಲ ವ್ಯಕ್ತಿಗಳಾದ ಡಾ. ಆನಂದ ಕುಮಾರ್ ಸುಬ್ರಮಣಿ ನಾಥನ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರ ಕಿರಿದಾದುದಲ್ಲ. ಅದರಲ್ಲಿ ನೀವು ಕಲಿಯಬೇಕಾದ ಕ್ಷೇತ್ರವನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಆಸಕ್ತಿ ಇಟ್ಟು ಕಲಿತರೆ ಯಾವುದೂ ಕಷ್ಟವಾಗುವುದಿಲ್ಲ. ಯಾವುದೇ ಕಲಿಕೆಯಾದರೂ ಜೀವನವನ್ನು ಉನ್ನತ ಮಟ್ಟ ಕ್ಕೆ ಕೊಂಡೊಯ್ಯುವ ಸಾಧನವೆಂಬುದನ್ನು ನೆನಪಿ ಟ್ಟುಕೊಳ್ಳಿ ಇಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್.ಎಸ್.ಐ.ಟಿ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ. ರೇಣುಕಲತಾ ಎಸ್. ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಕ್ಕಿಂತ ಪಠ್ಯೇತರ ಜ್ಞಾನ ಅವಶ್ಯಕ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಒದಗಿಸಿಕೊಡುವ ಕಾರ್ಯನಿರ್ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿ ಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರಕಾಶ್ ಎಂ. ಶೇಟ್., ಡಾ. ಬಿ.ಎಲ್. ಮುಕುಂದಪ್ಪ, ಡಾ. ಆಂ ಥೋನಿನಾಥ್ ಅಮರ ನಾಥನ್ ಹಾಗೂ ಡಾ. ರಮಣಿ ಆರ್. ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)