ಪಾವಗಡ: ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ವೈದ್ಯರನ್ನು ನೇಮಿಸಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಬಿ.ಜೆ.ಪಿ. ಪಕ್ಷದ ವತಿಯಿಂದ ಸೋಮವಾರ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹೆಕಿ ಅಕ್ರೋಶ ಹೊರಹಾಕಿ ತಹಶೀಲ್ದಾರ್ ಡಿ.ಎನ್. ವರದರಾಜುಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲ್ಲೂಕು ಬಿ.ಜೆ.ಪಿ. ಪಕ್ಷದ ಅಧ್ಯಕ್ಷರಾದ ದೊಡ್ಡಹಳ್ಳಿ ಅಶೋಕ್ ಮಾತನಾಡಿ, ತಾಲ್ಲೂಕು ವೈದ್ಯರಾದ ಕಿರಣ್ ಕುಮಾರ್ ರವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಮಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಪ್ರೇರಿತ ಅಧಿಕಾರಿಗಳಿದ್ದು ಅವರನ್ನು ರೆಡ್ ಬುಕ್ ನಲ್ಲಿ ನಮೂದಿಸಲಾಗುವುದು, ಮುಂದಿನ ದಿನಗಳಲ್ಲಿ ಅವರನ್ನು ತಾಲ್ಲೂಕು ಬಿಟ್ಟು ಓಡಿಸಲಾಗುತ್ತದೆ, ನಮ್ಮ ಬಿ.ಜೆ.ಪಿ. ಅಧಿಕಾರವದಿಯಲ್ಲಿ ೧೩ ಕೋಟಿ ವೆಚ್ಚದಲ್ಲಿ ಸರ್ಕಾರಿ ಅಸ್ಪತ್ರೆಯನ್ನು ನಿರ್ಮಾಣ ಮಾಡಿದ್ದರೆ,ಇಲ್ಲಿಯವರೆಗೂ ವೈದ್ಯ ರನ್ನು, ಕನಿಷ್ಟ ಪಕ್ಷ ನರ್ಸಗಳನ್ನು ನೇಮಕ ಮಾಡಿಲ್ಲಾ, ಅಂಬುಲೆನಸ್ ಗಳಿಗೆ ಡೀಸಲ್ ಹಾಕಿಸಲು ಹಣ ಇಲ್ಲಾ ಎನ್ನುತ್ತಾರೆ, ರಾಜ್ಯ ಸರ್ಕಾರ ೧೩ ಸಾವಿರ ಕೋಟಿ ಎಸ್.ಸಿ. ಎಸ್.ಟಿ. ಹಣವನ್ನು ದುರ್ಬಳಕ್ಕೆ ಮಾಡಿದ್ದು, ಈ ಕೂಡಲೆ ಶಾಸಕರು ಕ್ರಮ ಜರುಗಿಸಿ ಅಸ್ಪತ್ರೆಗೆ ವೈದ್ಯರನ್ನು ನೇಮಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಶ್ರೀರಂಗಪುರ ತಾಂಡಾದ ಗಣೇಶ್ ನಾಯ್ಕ ಎಂಬ ಬಾಧಿತ ಮಾತನಾಡಿ ಕಳೆದ ತಿಂಗಳು ಪಾವಗಡ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆ ಹೋಗಿದ್ದಾಗ ವೈದ್ಯರಿಲ್ಲದೆ ತುಮಕೂರು, ಬೆಂಗಳೂರಿಗೆ ಹೋಗುವಾಗ ಮಾರ್ಗ ಮದ್ಯ ನನ್ನ ತಂದೆ ಸಾವನ್ನಪ್ಪಿದ್ದು, ಇಂತಹ ಅನ್ಯಾಯ ಯಾರಿಗೂ ಆಗಬಾರದು ಕೂಡಲೆ ವೈದ್ಯರನ್ನು ನೇಮಿಸಿ ಎಂದು ಅಲವತ್ತು ಕೊಂಡರು.
ಮುಖಂಡ ಡಾ. ಜಿ. ವೆಂಕಟರಾಮಯ್ಯ , ಶ್ರೀರಾಂಗುಪ್ತಾ ಮತ್ತಿತರು ಮಾತನಾಡಿದರು.
ಈ ವೇಳೆ ಮುಖಂಡರಾದ ಶಿವಕುಮಾರ್ ಸಾಕೇಲ್, ಮಾಧವರೆಡ್ಡಿ, ಸುಮನ್, ನಾರಾ ಯಣಪ್ಪ, ದೊಮ್ಮತಮರಿ ಕೃಷ್ಣಪ್ಪ, ಗೋಲ್ಡನ್ ಮಂಜು, ಹನುಮಂತರೆಡ್ಡಿ, ಪ್ರಸನ್ನಕುಮಾರ್, ಹರೀಶ್, ಮುರಳಿ, ಪೂಜಾರಿ ರಾಮಣ್ಣ, ಬಳಸಮುದ್ರ ನಾರಾಯಣಪ್ಪ, ಬಿ.ಜೆ.ಪಿ. ನಾರಾಯಣಪ್ಪ, ವೈ.ಎನ್.ಎಚ್. ಮುರಳಿ, ಬಾಲರಾಜ್, ಮಹಾಲಿಂಗಪ್ಪ ಯಜಮಾನ್ ನಾಗರಾಜ್ ಮತ್ತಿತರಿದ್ದರು.
ಪಟ್ಟಣದ ಸರ್ಕಾರಿ ಅಸ್ಪತ್ರೆಯಿಂದ ಶನಿಮಹಾತ್ಮ ಸರ್ಕಲ್ ವರೆಗೂ ಮರವಣಿಗೆ ಸಾಗಿ ತಹಶೀಲ್ದಾರ್ ಡಿ.ಎನ್. ವರದರಾಜುಗೆ ಮನವಿ ಪತ್ರ ಸಲ್ಲಿಸಲಾಯಿತು.
(Visited 1 times, 1 visits today)