ತುಮಕೂರು: ಹತ್ತಾರು ವರ್ಷಗಳಿಂದ ದೇವಾಲಯವಿದ್ದ ಜಾಗ, ನೂರಾರು ತರಕಾರಿ, ಹೂವು, ಹಣ್ಣು ಮಾರಾಟಗಾರಿಗೆ ಆಶ್ರಯವಾಗಿದ್ದ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ಗೆ ಸೇರಿದ ವ್ಯಕ್ತಿಗಳಿಗೆ ಮಾಲ್ ಕಟ್ಟಲು ಗುತ್ತಿಗೆ ನೀಡುವ ಮೂಲಕ ತುಮಕೂರು ನಗರದಲ್ಲಿ ಲ್ಯಾಂಡ್ ಜಿಹಾದ್‌ಗೆ ಬಿಜೆಪಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಹಿಂದುಪರ ಸಂಘಟನೆಗಳ ಒಕ್ಕೂಟದವತಿ ಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಜರಂಗದಳ ತುಮಕೂರು ವಿಭಾಗದ ಸಂಚಾಲಕ ಮಂಜು ಭಾರ್ಗವ ಮಾತನಾಡಿ, ೧೯೫೨ರಲ್ಲಿ ತುಮಕೂರು ನಗರದ ವಿನಾ ಯಕನಗರದಲ್ಲಿನ ಸದರಿ ಜಾಗವನ್ನು ಉದ್ಯಾ ನವನಕ್ಕೆಂದು ಅಂದಿನ ಪುರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಕಾಯ್ದಿರಿಸಲಾಗಿತ್ತು.ತದನಂತರ ಎಪಿಎಂಸಿಯವರು ಸದರಿ ಜಾಗ ವನ್ನು ತರಕಾರಿ, ಹೂವು, ಹಣ್ಣು, ದಿನಸಿ ಮಾರುಕಟ್ಟೆ ಮಾಡಲು ಬಿಟ್ಟುಕೊಡುವಂತೆ ಕೋರಿದಾಗ,ಅವರಿಗೆ ಹಸ್ತಾಂತರಿಸಲಾಯಿತು.ಹತ್ತಾರು ವರ್ಷಗಳ ಕಾಲ ಮಾರುಕಟ್ಟೆ ನಡೆದು, ಕಿರಿದಾಗುತ್ತಾ ಬಂದಾಗ ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿದ ನಂತರ,ಆ ಜಾಗದಲ್ಲಿದ್ದ ಗಣೇಶನ ಮೂರ್ತಿ ಪೂಜೆ ಪುನಃಸ್ಕಾರಗಳು ನಡೆಯತಿದ್ದು, ಸದರಿ ಜಾಗದ ಬಗ್ಗೆ ನಗರಪಾಲಿಕೆ ಮತ್ತು ಎಪಿಎಂಸಿ ನಡುವೆ ಜಟಾಪಟಿ ಇದ್ದು, ನ್ಯಾಯಾಲಯದ ಮೇಟ್ಟಿಲು ಸಹ ಹತ್ತಲಾಗಿತ್ತು.ನ್ಯಾಯಾಲಯದಲ್ಲಿ ತೀರ್ಪು ಬಾಕಿ ಇರುವಾಗಲೇ ನಗರಾಭಿವೃದ್ದಿ ಇಲಾಖೆ, ಕೃಷಿ ಮಾರುಕಟ್ಟೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಖಾಲಿ ಇದ್ದ ಸಿದ್ದಿವಿನಾಯಕ ಮಾರುಕಟ್ಟೆ ಜಾಗವ ನ್ನು ಸ್ಮಾರ್ಟ್ಸಿಟಿಯಿಂದ ಮಾಲ್‌ಕಟ್ಟಲು ಬಿಟ್ಟು ಕೊಡಲು ಹೈಲೆವಲ್ ಕಮಿಟಿನಲ್ಲಿ ಒಪ್ಪಿಗೆ ನೀಡಿರುತ್ತಾರೆ ಎಂದರು.
ಆದರೆ ಸದರಿ ಜಾಗದಲ್ಲಿ ಇದ್ದ ಸಿದ್ದಿವಿನಾಯಕ ದೇವಾಲಯವನ್ನು ೨೦೨೧ರಲ್ಲಿ ಅಂದಿನ ಶಾಸಕ ರು ಹಾಗೂ ಈಗಿನ ಶಾಸಕರು ಆಗಿರುವ ಜಿ.ಬಿ.ಜೋತಿಗಣೇಶ್ ಮತ್ತು ಅಧಿಕಾರಿಗಳು ಪಿಪಿಪಿ ಮಾಡಲ್‌ನಲ್ಲಿ ಮುಸ್ಲೀಂ ಎಜುಕೇ ಷನ್ ಟ್ರಸ್ಟ್ ಹಾಗು ಇನ್ನಿತರ ಸಂಸ್ಥೆಗಳ ನಡೆಸು ವ ನಿರ್ಮಾಣ ಸಂಸ್ಥೆಗೆ ೩೦ ವರ್ಷಗಳಿಗೆ ಲೀಸ್‌ಗೆ ನೀಡಲು ಮುಂದಾಗಿದ್ದಾರೆ. ಇದು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಉದ್ಯಾನವನವೊಂದನ್ನು ಮಾಲ್ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿದ್ದರು.ಇದನ್ನು ವಿರೋಧಿಸಿ ಹೋರಾಟ ಮಾಡಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಇಲ್ಲಸಲ್ಲದೆ ಕೇಸು ಹಾಕಿ, ರೌಡಿಶೀಟರ್ ತೆರೆದು ಇನ್ನಿಲ್ಲದ ಕಿರುಕುಳವನ್ನು ನೀಡಿದ್ದಾರೆ.ಸಿದ್ದಿವಿನಾಯಕ ಮಾರು ಕಟ್ಟೆ ಬಗ್ಗೆ ಬಿಜೆಪಿ ಪಕ್ಷದ ಮುಖಂಡರು, ಶಾಸಕರ ಹೋರಾಟ ಕೇವಲ ನಾಟಕೀಯ ಎಂದು ಮಂಜು ಭಾರ್ಗವ್ ಅಸಹನೆ ವ್ಯಕ್ತಪಡಿಸಿದರು.
ಹಿಂದೂ ದೇವಾಲಯ, ಹಿಂದೂ ಧರ್ಮದ ಉಳಿವಿಗಾಗಿ ಎಂತಹ ಹೋರಾಟಕ್ಕು ಹಿಂದು ಪರ ಸಂಘಟನೆಗಳ ಒಕ್ಕೂಟ ಸಿದ್ದವಿದೆ.ಸರಕಾರ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ನಿರ್ಮಿಸಲು ಹೊರಟಿರುವ ಮಾಲ್ ಯೋಜನೆಯನ್ನು ಕೈಬಿಡಬೇಕು.ಗಣೇಶ ಮಂದಿರ ಮತ್ತು ಉದ್ಯಾ ನವನವನ್ನು ರಕ್ಷಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಮಂಜು ಭಾರ್ಗವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಜಿ, ಹಿಂದೂ ರಾಷ್ಟç ಸಂಕಲ್ಪ ಸಮಿತಿಯ ರಾಜ್ಯ ಸಂಚಾಲಕ ಮಾರಣ್ಣ ಪಾಳೇಗಾರ್,ಭಾರತೀಯ ಹಿಂದೂ ಸನಾತನ ಪ್ರತಿಷ್ಠಾನ ಸಂಕಲ್ಪ ಸಮಿತಿಯ ಮುನೇಗೌಡ, ಹಿಂದೂ ಕನ್ನಡಿಗರ ವೇದಿಕೆ ಹಿಮೇಶ ದೇಸಾಯಿ, ಅಜಾದ್ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಗಜೇಂದ್ರ ಸಿಂಗ್, ಹಿಂದೂ ಜಾಗೃತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವು ಭಗತ್,ರಾಷ್ಟç ರಕ್ಷಣ ಸೇನೆಯ ರಾಜ್ಯಾಧ್ಯಕ್ಷ ಸುರೇಶಗೌಡ, ಹಿಂದೂ ಜನಜಾಗೃತಿ ಸಮಿತಿಯ ವೆಂಕಟೇಶ್, ಭಜರಂಗ ಸೇನೆಯ ಸುನಿಲ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)