ತುರುವೇಕೆರೆ: ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸುತ್ತಿರುವ ರಾಗಿ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಧನಂಜಯಾರಾದ್ಯ ಮಾತನಾಡಿ ಜಿಲ್ಲೇಯಲ್ಲಿ ಎಲ್ಲಾ ರಾಗಿ ಖರೀದಿ ಕೇಂದ್ರಗಳಲ್ಲಿ ಮಾ.೩ ರಿಂದ ರಾಗಿ ಖರೀದಿಸುತ್ತಿದೆ. ಈಗಾಗಲೇ ಸಾವಿರಾರು ಕ್ವಿಂಟಾಲ್ ರಾಗಿಯನ್ನು ರೈತರಿಂದ ಖರೀದಿಸಿದ್ದು ಇದುವರೆವಿಗೂ ರಾಗಿ ಹಣವನ್ನು ರೈತರ ಖಾತೆಗೆ ಜಮಾ ಮಾಡಿರುವುದಿಲ್ಲ. ರೈತರು ಆರ್ಥಿಕವಾಗಿ ತೊಂದರಯಲ್ಲಿದ್ದು ಜೀವನ ನಿರ್ವಹಣೆಗೆ ಆ ಹಣವನ್ನೇ ಅವಲಂಬಿಸಿದ್ದಾರೆ. ಬ್ಯಾಂಕುಗಳು ಮತ್ತು ಖಾಸಗಿಯವರಿಂದ ಸಾಲ ಮಾಡಿದ್ದು ಮಾನಸಿಕವಾಗಿ ನೋವು ಅನುಭವಿಸುತ್ತಿದ್ದಾನೆ. ಆದುದರಿಂದ ರೈತರ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಆಯಾ ದಿನವೇ ಸರ್ಕಾರ ರೈತರ ಖಾತೆಗಳಿಗೆ ಹಣ ಜಮಾ ಮಾಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯ ತುರುವೇಕೆರೆ ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ ಕ್ರಷರ್ ಗಣಿಗಾರಿಕೆ ನಡೆಯುತ್ತಿದ್ದು ಇದರ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಿದ್ದರೂ ಸಹಾ ಇನ್ನೂ ಗಣಿಗಾರಿಕೆ ನಿಂತಿಲ್ಲ. ಇದರಿಂದ ರೈತರಿಗೆ ಹಾಗೂ ದನಕರುಗಳಿಗೆ ತುಂಬಾ ತೊಂದರೆಯಾಗುತ್ತಿದೆ. ವಾತಾವರಣ ಕಲುಷಿತಗೊಳ್ಳುತ್ತಿದೆ. ಇದಕ್ಕೆ ಸಂಬAದಿಸಿದAತೆ ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮಾ.೨೪ರಂದು ರೈತ ಮುಖಂಡರ ಸಭೆ ಕರೆದಿದ್ದು ಒಂದು ವೇಳೆ ಫಲಶೃತಿಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದಿAದ ತೀವ್ರತರ ಹೋರಾಟವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂಧರ್ಭದಲ್ಲಿ ತಿಳಿಸಿದರಲ್ಲದೆ ಕಳೆದ ೪೫ ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಹಾ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಜನಪರ ಚಳುವಳಿ, ಕನ್ನಡ ಚಳುವಳಿ, ದಲಿತ ಚಳುವಳಿಗಳನ್ನು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದರೂ ಅಧಿಕಾರಕ್ಕೆ ಬರುವಂತ ರಾಜಕೀಯ ಪಕ್ಷಗಳು ಸಮಸ್ಯೆಗಳನ್ನು ಬಗೆಹರಿಸಲು ಸಾದ್ಯವಾಗುತ್ತಿಲ್ಲ. ಆ ನಿಟ್ಟಿನಲ್ಲಿ ಒಂದು ಹೊಸ ರಾಜಕೀಯ ಪಕ್ಷ ಕಟ್ಟುವ ಉದ್ದೇಶದಿಂದ ಮಾ.೨೭ರಂದು ತುಮಕೂರಿನ ಕನ್ನಡ ಸಾಹಿತ್ಯ ಭವನದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಿ.ಎಸ್.ಪಿ ಯ ರಾಜ್ಯಾಧ್ಯಕ್ಷರು, ರಾಜ್ಯ ನಾಯಕರಾದ ಇಬ್ರಾಯಿಂ, ಲಲಿತಾ ನಾಯಕ್ ಹಾಗೂ ರಾಜ್ಯ ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಎಲ್ಲಾ ಜನಪರ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಸಂಘದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಅಂದಿನ ಕಾರ್ಯಕ್ರಮಕ್ಕೆ ಎಲ್ಲ ಜನಪರ ಚಳುವಳಿ ನಾಯಕರು, ಪ್ರಗತಿಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಉಪಾ ಧ್ಯಕ್ಷ ತೋಂಟಾರಾದ್ಯ, ತಾಲ್ಲೂಕು ಅಧ್ಯಕ್ಷ ಎ. ಗಂಗಾಧರ್ ಉಪಾಧ್ಯಕ್ಷ ಉಮೇಶ್, ಸಂಚಾ ಲಕ ಶಂಕರಲಿAಗಪ್ಪ, ಚಿ.ನಾ.ಹಳ್ಳಿ ಅಧ್ಯಕ್ಷ ಮಲ್ಲಿಕಾರ್ಜುನ, ಗೌರವಾಧ್ಯಕ್ಷ ಮುತ್ತುರಾಜ್, ತಾ.ನಗರ ಘಟಕ ಅಧ್ಯಕ್ಷ ವಿಜಯ್ ಕುಮಾರ್, ರೈತಮುಖಂಡರಾದ ಬಸವರಾಜು, ಬನಶಂಕರಪ್ಪ, ಜುಂಜಣ್ಣ, ಆಹಾರ ಶಿರಸ್ಥೆದಾರ್ ಕೃಷ್ಣೇಗೌಡ, ಗುಣಮಟ್ಟ ತನಿಖಾಧಿಕಾರಿ ಚಿರಂಜೀವಿ, ರಾಗಿ ಖರೀದಿದಾರ ಕಾಂತರಾಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
(Visited 1 times, 1 visits today)