ತುಮಕೂರು: ಗ್ರಾಮ ಸರಕಾರವೆಂದು ಕರೆಯುವ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಮಹಿಳಾ ಸದಸ್ಯರ ಪತಿಯರದೇ ದರ್ಬಾರು ಹೆಚ್ಚಾಗಿದ್ದು, ತಾವು ಕಳಪೆ ಕಾಮಗಾರಿ ನಡೆಸಿ,ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ(ಪಿಡಿಓ)ಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ(ರಿ) ರಾಜ್ಯಾಧ್ಯಕ್ಷ ಕೆ.ಹೆಚ್.ಶಿವಕುಮಾರ್(ಬಂಡೆಕುಮಾರ್) ಜಿ.ಪಂ.ಸಿಇಓ ಪ್ರಭು ಮತ್ತು ತಾ.ಪಂ.ಇಓ ಹರ್ಷಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ಹಲವು ಗ್ರಾಮಪಂ ಚಾಯಿತಿಗಳಲ್ಲಿ ಮಹಿಳಾ ಸದಸ್ಯರ ಹೆಸರಿನಲ್ಲಿ ಅವರ ಗಂಡAದಿರುವ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಲ್ಲದೆ,ಇಲ್ಲ, ಸಲ್ಲದ ಆರೋಪ ಮಾಡಿ ಅಮಾನತ್ತು ಮಾಡಿಸುವ ಬೆದರಿಕೆ ಹಾಕಿ ಕಳಪೆ ಕಾಮಗಾರಿಗಳ ಬಿಲ್ ಪಾವತಿಸಲು ಪಿಡಿ ಓಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ.ಇಂತಹ ಪ್ರಕರಣಗಳು ಆಗಿಂದಾಗ್ಗೆ ಹೆಚ್ಚುತ್ತಿವೆ. ಗ್ರಾ.ಪಂ. ಸದಸ್ಯರ ಕುಟುಂಬದವರು ಗುತ್ತಿಗೆ ಕಾಮಗಾರಿ ನಡೆಸುವಂತಿಲ್ಲ ಎಂಬ ನಿಯಮವಿದ್ದರೂ ಬೇನಾಮಿ ಹೆಸರಿನಲ್ಲಿ ಗ್ರಾಪಂ ವ್ಯಾಪ್ತಿಯ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಿ, ಅವು ಕಳಪೆ ಎಂದು ಕಂಡು ಬಂದರೂ ಬಿಲ್ ಪಾವತಿಸಲು ಒತ್ತಡ ತರಲಾಗುತ್ತಿದೆ.ಒಂದು ವೇಳೆ ಕಳಪೆ ಕಾಮಗಾರಿಗಳ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರೇ, ಸಿಇಓ, ಇಓಗಳಿಗೆ ನಿಮ್ಮ ವಿರುದ್ದ ದೂರು ನೀಡಿ, ಅಮಾನತ್ತು ಮಾಡಿಸುವ ಬೆದರಿಕೆ ಹಾಕಲಾಗತ್ತಿದೆ. ಇದರಿಂದ ಪಿಡಿಓಗಳು ಭಯದಿಂದ ಕೆಲಸ ಮಾಡುವಂತಾಗಿದೆ. ಹಾಗಾಗಿ ಸಿಇಓ ಅವರು ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಂಡೆ ಕುಮಾರ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತುಮಕೂರು ತಾಲೂಕು ಬೆಳಧರ ಗ್ರಾ.ಪಂ.ನ ಒಂದೇ ಅಧ್ಯಕ್ಷರ ಅವಧಿಯಲ್ಲಿ ಮೂವರು ಪಿಡಿಓ ಗಳು ಬದಲಾಗಿದ್ದಾರೆ. ಕಾರಣವೆಂದರೆ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರ ಒತ್ತಡ. ಚುನಾಯಿತ ಪ್ರತಿನಿಧಿಗಳ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ, ಕಚೇರಿಗೆ ಒಂದು ಶೌಚಾ ಲಯ ನಿರ್ಮಾಣ ಮಾಡಿಕೊಂಡಿದ್ದೇನೆ ನೆಪ ಮಾಡಿ ಕೊಂಡು ಮಹಿಳಾ ಪಿಡಿಒಗೆ ಇನ್ನಿಲ್ಲ ದ ಕಿರುಕುಳ ನೀಡಲಾ ಗುತ್ತಿದೆ. ಎಷ್ಟೋ ಗ್ರಾ.ಪಂಗಳಲ್ಲಿ ಕೆಲಸ ಮಾಡಲು ಪಿಡಿಓಗಳು ಹೆದರುವಂತಹ ಸ್ಥಿತಿ ಇದೆ. ಹಾಗಾಗಿ ಜಿಲ್ಲಾ ಪಂಚಾಯಿತಿ ಸಿಇಓ ಅವರು ಕೂಡಲೇ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ,ಭಯಮುಕ್ತ ವಾತಾವರಣ ನಿರ್ಮಾಣ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಹೆಚ್.ಕೆ.ಶಿವಕುಮಾರ್ ನುಡಿದರು.