ಚಿಕ್ಕನಾಯಕನಹಳ್ಳಿ: ಪ್ರಜಾಪ್ರಭುತ್ವದ ವ್ಯೆವಸ್ಥೆಯಲ್ಲಿ ಅಭಿವೃದ್ಧಿಗೆ ಯಾವಾಗಲು ವಿರೋಧವಾಗಿಯೇ ಇರುತ್ತದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಸ್ವಂತಿಕೆ ಚಿಂತನೆಯನ್ನ ಬಿಟ್ಟಾಗ ತಾಲ್ಲೂಕಿನ ಕ್ಷೇತ್ರ ವನ್ನ ಉನ್ನತ ಮಟ್ಟಕ್ಕೆ ಕೊಂಡೊಯಲು ಸಾದ್ಯವಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ನಂಧಿನಿ ಭವನದಲ್ಲಿ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘದ ಕಾರ್ಯ ದರ್ಶಿಗಳಿಂದ ಹಾಗು ಸಿಬ್ಬಂದಿಯಿAದ ತುಮು ಲ್ ನಿರ್ದೇಶಕ ಬಿ.ಎಸ್.ಶಿವಪ್ರಕಾಶ್ ರವರ ಅಭಿನಂಧನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುಣಾವಣೆಯಲ್ಲಿ ಗೆದ್ದಾಗ ಮೊದಲು ಅಭಿವೃದ್ದಿಗೆ ಆದ್ಯತೆ ನೀಡಬೇಕು. ವ್ಯೆಕ್ತಿಗಳ ಕೆಲಸಕ್ಕೆ ಹೆಚ್ಚು ಒತ್ತು ನೀಡಿದರೆ ಸಾಮಾಜಿಕ ಹಿತಾಸಕ್ತಿಗೆ ಭಂಗ ಉಂಟಾಗುತ್ತದೆ. ಸಮಾಜದಲ್ಲಿ ಅಗತ್ಯ ಇರುವ ಅಭಿವೃದ್ಧಿ ಗೆ ಚಿಂತನೆ ನೆಡೆಸಿ ಕೆಲಸಮಾಡಲು ಹೋದಾಗ ಜನರು ಬೆಂಬಲಕೊಡುತ್ತಾರೆ ಆದರೆ ಒಂದಿಬ್ಬರು ತರ್ಲೆ ಮಾಡಿದಾಗ ಕೆಲಸಗಳು ನೆನೆಗುದಿಗೆ ಬೀಳುತ್ತದೆ. ಡಿಂಕನಹಳ್ಳಿ ಪ್ರದೇಶದ ೪೦ಎಕರೆ ಜಾಗದಲ್ಲಿ ಸುಮಾರು ೪೦೦ಕ್ಕೂ ಹೆಚ್ಚಿನ ವೆಚ್ಚದಲ್ಲಿ ೪೦೦ಕೆವಿ ಸಾಮರ್ಥ್ಯ
ಉಳ್ಳ ಬೃಹತ್ ವಿದ್ಯುತ್ ಘಟಕವನ್ನ ನಿರ್ಮಿಸಲು ಮುಂದಾಗಿತ್ತು. ಇದರ ಜೋತೆಗೆ ೨೨೦ಕೆವಿಯನ್ನ ಅಳವಡಿಸಲಾಗುತ್ತಿತ್ತು. ನಾನು ಆ ಪ್ರದೇಶವನ್ನ ಗುರುರ್ತಿಸಿಲ್ಲ ಕೆಇಬಿ ಯವರೆ ಜಾಗವನ್ನ ಗುರ್ತಿಸಿದ್ದರು ೩೭ ಎಕರೆಯನ್ನ ರೈತರು ತಮ್ಮ ಜಮೀನನ್ನ ಸಾರ್ವಜನಿಕ ಹಿತಾಸ ಕ್ತಿಯಲ್ಲಿ ಬಿಟ್ಟುಕೊಡಲು ಒಪ್ಪಿದರೆ ಒಂದಿಬ್ಬರು ತರ್ಲೆ ಮಾಡಿದರು. ಇದಕ್ಕೆ ಸಬಂದಿಸಿದAತೆ ಕೋರ್ಟಿಗೆ ಹೋಗಿದ್ದಾರೆ.ಸದ್ಯ ಆಕೆಲಸ ನೆನಗುದಿಗೆ ಬಿದ್ದಿದೆ. ಈ ಘಟಕ ಆಗಿದ್ದರೆ ೫ ಜಿಲ್ಲೆಗೆ ಉಪಯೋಗವಾಗುತ್ತಿತ್ತು.ನಮ್ಮ ಕ್ಷೇ ತ್ರಕ್ಕೆ ಹೆಚ್ಚಿನ ಲಾಭವಾಗುತ್ತಿತ್ತು ಎಂದರು. ನನ್ನ ಅಧಿಕಾರಅವಧಿಯಲ್ಲಿ ಕ್ಷೇತ್ರದಲ್ಲಿ ೫ ಸ್ಥಳಗಳಲ್ಲಿ ವಿದ್ಯುತ್ ಘಟಕಗಳನ್ನ ಮಂ ಜೂರು ಮಾಡಿಸಿದ್ದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ಎಸ್.ಬುಳ್ಳೇನಹಳ್ಳಿ ಶಿವಪ್ರಕಾಶ್ ಮಾತನಾಡಿ ತುಮುಲ್ ಮಾಜಿ ಅಧ್ಯಕ್ಷ ಶಿವನಂಜಪ್ಪರವರ ಮೇಲೆ ನನ ಅಪಾರವಾದ ಗೌರವವಿದೆ ಈ ಸಮಾರಂಭಕ್ಕೆ ಅವರನ್ನೂ ಆಹ್ವಾನಿಸಿ ಎಂದು ಅಧಿಕಾರಾಗಳಿಗೆ ಹೇಳಲಾಗಿತ್ತು ಎಂದರು. ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯ ಬೇಕಾದ ಎಲ್ಲಾ ಸವಲತ್ತುಗಳನ್ನ ಕೊಡಿಸಲು ನನ್ನ ಪ್ರಾಮಾಣಿಕ ಕರ್ತವ್ಯದಲ್ಲಿ ತೊರಿಸುತ್ತೇನೆ. ಕೆಎಂಎಫ್ ಛೇರ್ಮನ್ ಆಗಿ ಕೆಲಸಮಾಡಿದ ಜೆ.ಸಿ.ಎಂ ಶಾಸಕರಾದ ನಂತರ ಒಕ್ಕೂಟದ ಅಧಿಕಾರಕ್ಕೆ ಆಸೆ ಪಡದೆ ಕಾರ್ಯಕರ್ತರನ್ನ ಬೆಳಸಲು ತುಮುಲ್ ಗೆ ಶ್ರಮಹಾಕಿ ಕಳುಹಿಸುತ್ತಿದ್ದಾರೆ. ನಿಜಕ್ಕೂ ಅವರಿಗೆ ನಮ್ಮ ಅವಶ್ಯಕತೆ ಇಲ್ಲದಿದ್ದರು ಕ್ಷೇತ್ರದ ಅಭಿವೃದ್ದಿಗೆ ಅವರ ಅವಶ್ಯಕತೆ ನಮ್ಮಲ್ಲರಿಗೂ ಇದೆ ಹಾಗಾಗಿ ಕ್ಷೇತ್ರದ ಜನತೆ ಮುಂಬರುವ ಚುಣಾವಣೆಯಲ್ಲಿ ಗೆಲ್ಲಿಸಿ ಅದೃಷ್ಟವಷಾತ್ ಏನಾದರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಡಿತವಾಗಿಯೂ ರಾಜ್ಯದ ಸಿ.ಎಂ ಆಗುತ್ತಾರೆ. ಆಗ ಕ್ಷೇತ್ರ ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗುತ್ತದೆ ಎಂದರು. ಟಿ.ಶಂಕರಲಿAಗಯ್ಯ, ಅಗಸರಹಳ್ಳಿ ಶಿವರಾಜ್ ಕೃಷಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮನಗೊಂಡನಹಳ್ಳಿ ಗಂಗಾಧರಯ್ಯ ಮಾತನಾಡಿದರು.

(Visited 1 times, 1 visits today)