ಹುಳಿಯಾರು: ಈ ಆಸ್ಪತ್ರೆಗೆ ಕಾಯಂ ವೈದ್ಯರಿಲ್ಲ. ನಿಯೋಜನೆಗೊಂಡಿರುವ ವೈದ್ಯರೂ ನಿತ್ಯ ಬರೋದಿಲ್ಲ. ಪರಿಣಾಮ ಹತ್ತಾರು ಹಳ್ಳಿಗಳ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಅಗತ್ಯ ಮೂಲ ಸೌಕರ್ಯದ ಕೊರತೆಯಿಂದ ಆಸ್ಪತ್ರೆ ಭಣಗುಡುತ್ತಿದೆ. ಒಟ್ಟಾರೆ ಇಲ್ಲೊಂದು ಆಸ್ಪತ್ರೆ ಇದೆ ಎನ್ನುವುದನ್ನೇ ಜನ ಮರೆಯುವಂತಾಗಿದೆ.
ಹಳ್ಳಿ ಜನರಿಗೆ ತರ್ತು ಹಾಗೂ ಗುಣ ಮಟ್ಟದ ಚಿಕಿತ್ಸೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿಯಿದು. ರಾಷ್ಟಿçÃಯ ಹೆದ್ದಾರಿ ೨೩೪ ಹಾದು ಹೋಗುವ ಮಾರ್ಗದಲ್ಲಿ ಈ ಗ್ರಾಮ ಬರುವುದರಿಂದ ಇಲ್ಲಿನ ಆರೋಗ್ಯ ಕೇಂದ್ರ ಮಹತ್ವದಾಗಿದೆ. ಆದರೆ ಇಲ್ಲಿನ ಆಸ್ಪತ್ರೆಗೆ ಚಿಕಿತ್ಸೆ ಕೊಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಯಂ ವೈದ್ಯರಿಲ್ಲದ ಕಾರಣದಿಂದ ಈ ಆಸ್ಪತ್ರೆಗೆ ದಸೂಡಿ ಆಸ್ಪತ್ರೆಯ ಡಾ.ಜುಬೇದ್ ಅವರನ್ನು ೪ ದಿನಗಳು ಹಾಗೂ ಗೋಡೆಕೆರೆಯ ಡಾ.ಶಂಕರ್ ಅವರನ್ನು ವಾರದಲ್ಲಿ ೨ ದಿನಗಳ ಕಾಲ ಡೆಪ್ಯೂಟೇಷನ್ ಮಾಡಲಾಗಿದೆ. ಆದರೆ ಇವರಿಬ್ಬರೂ ಯಾವಾಗ ಬಂದೋಗುತ್ತಾರೋ ತಿಳಿಯದಾಗಿದೆ. ಅಕಸ್ಮಾತ್ ಬಂದರೂ ಬೆಳಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಇರುವುದಿಲ್ಲ. ಬೆಳಗ್ಗೆ ಬಂದು ಮಧ್ಯಾಹ್ನ ಆಗುವಷ್ಟರಲ್ಲೇ ಅಲ್ಲಿಂದ ಹೊರಟು ಹೋಗುತ್ತಾರೆ. ಮಧ್ಯಾಹ್ನದ ನಂತರ ಯಾವುದಾದರೂ ಅವಘಡ ಸಂಭವಿಸಿದರೇ ಎಲ್ಲಿಗೇ ಹೋಗಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ರಾಷ್ಟಿçÃಯ ಹೆದ್ದಾರಿ ಹಾದು ಹೋಗುವುದರಿಂದ ರಸ್ತೆ ಅಪಘಾತಗಳಾದಾಗ ತುರ್ತು ಚಿಕಿತ್ಸೆಯೂ ಸಹ ಇಲ್ಲಿ ಸಿಗದಾಗಿದೆ. ಗರ್ಭಿಣಿ ಬಾಣಂತಿಯರಿಗೆ ಮಾಸಿಕ ಅಗತ್ಯ ಸಲಹೆ ಸೂಚನೆ, ಔಷಧೋಪಚಾರವೂ ಇಲ್ಲದಾಗಿದೆ. ಒಟ್ಟಾರೆ ವೈದ್ಯರಿಲ್ಲದ ಆಸ್ಪತ್ರೆ, ದೇವರಿಲ್ಲದ ಗರ್ಭಗುಡಿ ಎರಡೂ ವ್ಯರ್ಥ ಎಂಬ ಮಾತನ್ನು ಈ ಆಸ್ಪತ್ರೆ ನೋಡಿಯೇ ಹೇಳಿರಬೇಕು ಎನ್ನುವಂತಿದೆ. ಹಾಗಾಗಿ ಹೊಯ್ಸಲಕಟ್ಟೆ ಸೇರಿದಂತೆ ಹದಿನೈದಿಪ್ಪತ್ತು ಹಳ್ಳಿಗಳ ಜನತೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೂಡಲೇ ಕಾಯಂ ವೈದ್ಯರನ್ನು ನೇಮಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಿಸಿ, ಔಷಧಿ ಪೂರೈಕೆ ಮಾಡಬೇಕು. ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.


ಇಲ್ಲಿನ ಶೌಚಾಲಯಕ್ಕೆ ನೀರೇ ಬರೋದಿಲ್ಲ:
ಆಸ್ಪತ್ರಗೆ ಬರುವ ರೋಗಿಗಳು ಮತ್ತು ಅವರ ಸಹಾಯಕರ ಅನುಕೂಲಕ್ಕಾಗಿ ಎರಡು ಶೌಚಾಲಯ ನಿರ್ಮಿಸಿದ್ದಾರೆ. ಆದರೆ ಈ ಶೌಚಾಲಯಕ್ಕೆ ನೀರೇ ಬರೋದಿಲ್ಲ. ಗ್ರಾಮ ಪಂಚಾಯ್ತಿಯವರು ಇಲ್ಲಿನ ಆಸ್ಪತ್ರೆ ಸಂಪ್‌ಗೆ ನಿತ್ಯ ನೀರು ಪೂರೈಸುತ್ತಾರೆ. ಆದರೆ ಸಂಪ್‌ನಿAದ ಶೌಚಾಲಯ ಹಾಗೂ ಆಸ್ಪತ್ರೆಗೆ ಲ್ಯಾಬ್‌ಗೆ ನೀರು ಪೂರೈಸುವ ಸಿಂಟೆಕ್ಸ್ಗೆ ನೀರು ತುಂಬಿಸದೆ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ. ಪರಿಣಾಮ ಆಸ್ಪತ್ರೆಗೆ ಬರುವ ಜನರಿಗೆ ಬಯಲು ಶೌಚಾಲಯವೇ ಗತಿ.


ಕುಡುಕರ ಅಡ್ಡೆಯಾದ ಆಸ್ಪತ್ರೆ:
ಕಾಯಂ ವೈದ್ಯರಿಲ್ಲ, ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಇರೋದಿಲ್ಲ ಎನ್ನುವ ಕಾರಣದಿಂದಾಗಿ ಆಸ್ಪತ್ರೆಯ ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಸುತ್ತಲೂ ಕಾಂಪೌAಡ್ ಇರುವುದರಿಂದ ಕಾಂಪೌAಡ್ ಹಾರಿ ಬಂದು ಇಲ್ಲಿ ಮದ್ಯಪಾನ ಮಾಡಿದರೆ ಯಾರಿಗೂ ಕಾಣೋದಿಲ್ಲ ಎನ್ನುವ ಕಾರಣದಿಂದ ಕುಡುಕರು ನಿತ್ಯ ಇಲ್ಲಿ ಪಾರ್ಟಿ ಮಾಡಿ ಹೋಗುತ್ತಿದ್ದಾರೆ. ನಿತ್ಯ ಮುಂಜಾನೆ ಇಲ್ಲಿನ ಡಿ ಗ್ರೂಪ್ ನೌಕರನಿಗೆ ಮದ್ಯದ ಬಾಟಲಿ, ಕುರುಕಲು ತಿಂಡಿಯ ಕವರ್ ಕ್ಲೀನ್ ಮಾಡುವ ಅನಿವಾರ್ಯ ಕರ್ಮ ನಿರ್ಮಾಣವಾಗಿದೆ.


ಫಿಲ್ಟರ್ ಅಂತಾರಾದರೂ ಹಾಗೆ ಕಾಣೋದಿಲ್ಲ: 
ಈ ಆಸ್ಪತೆಯ ಹಿಂಭಾಗ ಮೇಲೆ ಕೆಳಗೆ ೨ ನೀರಿನ ಕ್ಯಾನ್ ಇಟ್ಟಿದ್ದಾರೆ. ಇದಕ್ಕೆ ಮೇಲಿನ ಕ್ಯಾನ್‌ನಿಂದ ಕೆಳಗಿನ ಕ್ಯಾನ್‌ಗೆ ಪೈಪ್ ಅಳವಡಿಸಿದ್ದಾರೆ. ಕೆಳಗಿನ ಕ್ಯಾನ್‌ನಿಂದ ನೆಲಕ್ಕೆ ಮತ್ತೊಂದು ಪೈಪ್ ಅಳವಡಿಸಿದ್ದಾರೆ. ಇದೇನೆಂದು ಸಿಬ್ಬಂದಿ ಕೇಳಿದರೆ ಫಿಲ್ಟರ್ ಅನ್ನುತ್ತಾರೆ. ಇಲ್ಲಿಗೆ ಎಲ್ಲಿಂದ ನೀರು ಬರುತ್ತದೆ. ಹೇಗೆ ಫಿಲ್ಟರ್ ಆಗುತ್ತದೆ ಎಂದು ಮರು ಪ್ರಶ್ನಿಸಿದರೆ ಮೌನಕ್ಕೆ ಶರಣಾಗುತ್ತಾನೆ. ಒಟ್ಟಾರೆ ಇದೊಂದು ದುಡ್ಡು ಮಾಡುವ ಸ್ಕೀಂ ಇರಬಹುದಾಗಿದೆ. ಇದೇನೆಂದು ವೈದ್ಯಾಧಿಕಾರಿಗಳೇ ಹೇಳಬೇಕಿದೆ. ಯಾಕೆ ಬಳಸುತ್ತಿಲ್ಲ ಎನ್ನುವುದನ್ನೂ ಇವರೇ ಹೇಳಬೇಕಿದೆ.
ವಾರದಲ್ಲಿ ನೀರಿನ ಸಮಸ್ಯೆ ಪರಿಹಾರ
ಶೌಚಾಲಯಕ್ಕೆ ನೀರು ಬರೋದಿಲ್ಲ ಎನ್ನುವ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಪಂಚಾಯ್ತಿ ಅವರೊಂದಿಗೆ ಮಾತನಾಡಿ ಎರಡ್ಮೂರು ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುತ್ತೇನೆ. ಅಲ್ಲದೆ ನಿಯೋಜನೆಗೊಂಡಿರುವ ಇಬ್ಬರು ವೈದ್ಯರಿಗೂ ನಿತ್ಯ ಬಂದೋಗುವAತೆ ತಿಳಿಸುತ್ತೇನೆ.
ಡಾ.ವೈ.ಎಚ್.ಮಧು, ಪ್ರಭಾರ ಆರೋಗ್ಯಾಧಿಕಾರಿ, ಹೊಯ್ಸಕಟ್ಟೆ ಪಿಎಚ್‌ಸಿ

(Visited 1 times, 1 visits today)