ಪಾವಗಡ: ತೆಲಂಗಾಣ ವಿಧಾನಸಭೆಯಲ್ಲಿ ಒಳಮೀಸ ಲಾತಿ ವರ್ಗೀಕರಣ ಸಂಬAಧಿತ ವರದಿ ಅಂಗೀಕಾರಗೊAಡಿರುವ ಹಿನ್ನೆಲೆಯಲ್ಲಿ, ಪಾವ ಗಡ ತಾಲ್ಲೂಕಿನ ದಲಿತ ಪರ ಸಂಘಟನೆಗಳ ಮುಖಂಡರು ಈ ನಿರ್ಧಾರವನ್ನು ಶ್ಲಾಘಿಸಿ ಹರ್ಷೋದ್ಗಾರವನ್ನು ಬುಧವಾರ ಸಂಜೆ ೪ ಗಂಟೆಯಲ್ಲಿ ವ್ಯಕ್ತಪಡಿಸಿದರು.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಂಃಅಆ ವರ್ಗೀಕರಣ ಜಾರಿಗೊಳಿಸುವ ಶಾಸನವನ್ನು ಮಂಡಿಸಿ ಅದನ್ನು ಅಂಗೀಕರಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕಾರಣ, ಪಾವಗಡ ತಾಲ್ಲೂಕಿನ ದಲಿತ ಮುಖಂಡರು ಹಾಗೂ ನಾಯಕರು ಹಾಲಿನ ಅಭಿಷೇಕ ನಡೆಸಿ ಹರ್ಷವನ್ನು ಹಂಚಿಕೊAಡರು. ಈ ಕಾರ್ಯಕ್ರಮದಲ್ಲಿ ಮಾದಿಗ ಮೀಸಲಾತಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ಅವರಿಗೂ ಹಾಲಿನ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಟಿ.ಎನ್.ಪೇಟೆ ರಮೇಶ್, ಕೋರ್ಟ್ ನರ ಸಪ್ಪ, ವಳ್ಳೂರು ನಾಗೇಶ್, ಎನ್.ರಾಮಾಂ ಜಿನಪ್ಪ, ಮಂಜುನಾಥ್ ಮಂಗಳವಾಡ, ಕೆ.ಪಿ. ಲಿಂಗಣ್ಣ, ಮೀನಕುಂಟನಹಳ್ಳಿ ನರಸಿಂಹಪ್ಪ, ಶಿವಶಂಕರ, ನರಸಿಂಹ, ದೇವಲಕೆರೆ ಹನುಮಂತರಾಯ, ಭೀಮನಕುಂಟೆ ರಾಮಾಂ ಜಿನಪ್ಪ, ರವಿ, ನಾರಾಯಣಪ್ಪ, ಬಂಗಾರಪ್ಪ ಭಾಗವಹಿಸಿದ್ದರು…

(Visited 1 times, 1 visits today)