ತುಮಕೂರು: ಅಂಗವಿಕಲರ ಪುನರ್ ವಸತಿಗಾಗಿ ದುಡಿಯುತ್ತಿರುವ ಮೊಬಿಲಿಟಿ ಇಂಡಿಯಾ ಸಂಸ್ಥೆ ಯವತಿಯಿಂದ ತುರುವೇಕೆರೆ ತಾಲೂಕು ವ್ಯಾಪ್ತಿಯ ದೈಹಿಕ ವಿಕಲಚೇತನ ಮಕ್ಕಳಿಗೆ ಅಗತ್ಯ ಇರುವ ಸಹಾಯಕ ಸಾಧನ ಸಲಕರಣೆಗಳ ಜೋಡಣಾ ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ತುರು ವೇಕೆರೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ, ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ತುರುವೇಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸ್ವಪ್ನ ನಟೇಶ್, ಮೊಬಿಲಿಟಿ ಇಂಡಿಯಾ ಸಂಸ್ಥೆಯು ನೀಡಿರುವ ಸಲಕರಣೆಗಳು ಮತ್ತು ವ್ಯಾಯಾಮ ಸೇವೆಗಳನ್ನು ಸಮರ್ಪಕವಾಗಿ ಬಳಸಿಕೊಂಡು,ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಂಥ ಆಗಬೇಕೆಂದು ಪೋಷಕರಿಗೆ ತಿಳಿಸಿದರು
ಭವಿಷ್ಯದಲ್ಲಿ ವಿಕಲಚೇತನ ಮಕ್ಕಳ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು.ದೇಶದಾದ್ಯಂತ ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿ ಸುತ್ತಿರುವ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕೆಲಸ ಕಾರ್ಯಗಳಿಗೆ ಪಟ್ಟಣ ಪಂಚಾಯಿತಿ ವತಿ ಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರಸವೆ ನೀಡಿದರು. ಮೊಬಿಲಿಟಿ ಇಂಡಿಯಾ ಸಂಸ್ಥೆಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕರಾದ ಆನಂದ್ ಎಸ್.ಎನ್.ಮಾತನಾಡಿ,ಸಂಸ್ಥೆಯು ತುರುವೇಕೆರೆ ತಾಲೂ ಕಿನ ವ್ಯಾಪ್ತಿಯಲ್ಲಿ ಬರುವಂತಹ ವಿಕಲಚೇತನ ಮಕ್ಕ ಳಿಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಪುನಶ್ಚೇತನ ಸೇವೆಗಳನ್ನು ನೀಡಲಾಗುತ್ತಿದೆ ಈ ಸೇವೆಗಳನ್ನು ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ೧೪ ದೈಹಿಕ ವಿಕಲಚೇತನ ಮಕ್ಕಳು,೨೧ ವಿವಿಧ ರೀತಿಯ ಸಹಾಯಕ ಸಾಧನ ಸಲಕರಣೆಗಳನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಕರುನಾಡು ಸಂಸ್ಥೆಯ ಲೇಪೇಕ್ಷ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಜಣ್ಣ, ಪ್ರೊಸ್ತಿಟಿಕ್ ಮತ್ತು ಆರ್ಥೋಟಿಕ್ ತಜ್ಞರಾದ ಕುಮಾರ, ರುಮಾನ, ಮುರ್ಸಿದ್ದ ಮತ್ತು ವ್ಯಾಯಾಮ ತಜ್ಞರಾದ ಪುನೀತ್, ಪಟ್ಟಣ ಪಂಚಾಯಿತಿಯ ಯು ಆರ್ ಡಬ್ಲ್ಯೂ ಲತಾ ಮತ್ತು ಶಾರದ ಹಾಜರಿದ್ದರು.
(Visited 1 times, 1 visits today)