ಚಿಕ್ಕನಾಯಕನಹಳ್ಳಿ:

      ಪೋಷಕರೆ ನಿಮ್ಮ ಮಕ್ಕಳು ಹಾರ್ಲಿಕ್ಸ್ ಪ್ರಿಯರೇ ಎಚ್ಚರ, ಏಕೆಂದರೆ ಪಟ್ಟಣದ ಹಣ್ಣಿನ ವ್ಯಾಪಾರಿ ಕೊಂಡಿರುವ ಹಾರ್ಲಿಕ್ಸ್ ಪ್ಯಾಕ್‍ನಲ್ಲಿ ಸತ್ತಿರುವ ಮೂರು ಜಿರಲೆಗಳು ಪತ್ತೆಯಾಗಿವೆ, ಹಾರ್ಲಿಕ್ಸ್‍ನಲ್ಲಿ ಜಿರಲೆಗಳು ಸತ್ತಿರುವದನ್ನು ಹಣ್ಣಿನ ವ್ಯಾಪಾರಿ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದು ವಾಟ್ಸ್‍ಪ್ ಗ್ರೂಪ್‍ಗಳಲ್ಲಿ ಹರಿಬಿಟ್ಟು ಗ್ರಾಹಕರು ಯಾವುದೇ ಆಹಾರವನ್ನು ಕೊಂಡರು ಎಚ್ಚರದಿಂದಿರಲು ತಿಳಿಸಿದ್ದಾರೆ.

      ಪಟ್ಟಣದ ಸಿವಿಲ್ ಬಸ್ಟಾಂಡ್ ಬಳಿ ಹಣ್ಣಿನ ವ್ಯಾಪಾರ ಮಾಡುವ ಮಹಮದ್‍ಷಫಿರವರು ಕಳೆದ 25ದಿನಗಳ ಹಿಂದೆ ತನ್ನ 8ನೇ ವರ್ಷದ ಮಗ ಮಹಮದ್‍ಅಬ್ದುಲ್‍ಗಾಗಿ ಹಾರ್ಲಿಕ್ಸ್ ಪ್ಯಾಕೆಟ್‍ನ್ನು ಕೊಂಡುಕೊಂಡಿದ್ದಾರೆ, ಹಾರ್ಲಿಕ್ಸ್‍ನ್ನು ತನ್ನ ಮಗನಿಗೆ ಪ್ರತಿನಿತ್ಯ ಎರಡು ಚಮಚದ ಮೂಲಕ ಕೊಡುತ್ತಾ ಬಂದಿದ್ದಾರೆ, ಹಾರ್ಲಿಕ್ಸ್ ಪಾಕೆಟ್‍ನ ಖಾಲಿಯಾಗುವ ಸ್ಥಿತಿಗೆ ಬಂದಾಗ ತಳದಲ್ಲಿ ಸತ್ತಿರುವ ಮೂರು ಜಿರಲೆಗಳು ಕಂಡಬಂದಿತು, ಮಹಮದ್‍ಷಫಿ ತಕ್ಷಣವೇ ತನ್ನ ಮಗನನ್ನ ಕರೆದುಕೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಜಿರಲೆ ಇದ್ದ ಹಾರ್ಲಿಕ್ಸ್ ಪ್ಯಾಕೆಟ್ 08-09-2018ರಲ್ಲಿ ಪ್ಯಾಕ್ ಮಾಡಲಾಗಿದೆ. ಈ ಮಧ್ಯದಲ್ಲಿ ಮಗನನ್ನು ಆಗಾಗ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ತಿಳಿಸಿದ್ದು ಪುಡ್‍ಪಾಯಿಸನ್ ಆಗಿದ್ದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದರು.

(Visited 67 times, 1 visits today)