ಹುಳಿಯಾರು: ಕನ್ನಡಿಗರು ಅರ್ಜಿ ಹಾಕಲು ಸಾಧ್ಯವಾಗದ ರೀತಿಯ ಷರತ್ತು ವಿಧಿಸಿ ನಮ್ಮ ಮೆಟ್ರೊ ಚಾಲಕರನ್ನು (ಲೋಕೊ ಪೈಲಟ್) ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.
ಕರವೇಯ ತಾಲೂಕು ಅಧ್ಯಕ್ಷ ಬೇಕರಿ ಪ್ರಕಾಶ್ ಅವರು ಈ ಸಂಬAಧ ಪತ್ರಿಕಾ ಹೇಳಿಕೆ ನೀಡಿ ಬೆಂಗಳೂರಿನಲ್ಲಿ ಉದ್ಯೋಗ ಇಲ್ಲದೆ ಕನ್ನಡಿಗರು ಪರದಾಡುತ್ತಿದ್ದಾರೆ. ಅಂತಹದರಲ್ಲಿ ಬೇರೆ ರಾಜ್ಯದವರಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನೇಮಕಾತಿ ನಿಯಮಗಳನ್ನು ರೂಪಿಸುತ್ತಿದ್ದಾರೆ. ಈ ಮೂಲಕ ನಮ್ಮ ಮೆಟ್ರೊವನ್ನು ಅವರ ಮೆಟ್ರೋ ಆಗಿ ಬದಲಾಯಿಸಿ ಕೊಂಡಿದ್ದಾರೆ. ಅನ್ಯಭಾಷಿಗರಿಗೆ ಅನುಕೂಲ ಮಾಡಿಕೊಡುವ ನೇಮಕಾತಿ ಅಧಿ ಸೂಚನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನೇಮಕಾತಿ ನಿಯಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯವನ್ನು ಉಲ್ಲೇಖಿಸಿದ್ದರೆ ಈ ರೀತಿಯ ಸಮಸ್ಯೆಯಾಗುತ್ತಿರಲಿಲ್ಲ. ತಕ್ಷಣ ಅಧಿಸೂಚನೆ ರದ್ದುಪಡಿಸಿ ಕನ್ನಡಿಗರಿಗೆ ಅವಕಾಶಕೊಟ್ಟು ಮತ್ತೊಂದು ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
(Visited 1 times, 1 visits today)