ಹುಳಿಯಾರು: ಹಂದನಕೆರೆ ಹೋಬಳಿ ಹೆಚ್.ಎಂ. ಕಾವಲು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಚಿಕ್ಕನಾಯಕನಹಳ್ಳಿ ವತಿಯಿಂದ ಕರುಣಾ ಕಾರ್ಯಕ್ರಮ ಮತ್ತು ಪಶುಆರೋಗ್ಯ ಶಿಬಿರವನ್ನು ಬುಧವಾರ ಏರ್ಪಡಿಸಲಾಗಿತ್ತು.
ಹಂದನಕೆರೆ ಪಶುಆಸ್ಪತ್ರೆಯ ಪಶುವೈ ದ್ಯಾಧಿಕಾರಿ ಡಾ.ಪ್ರಮೋದ್‌ಕುಮಾರ್ ರವರು ೧೦ ಬರಡು ರಾಸುಗಳಿಗೆ ಚಿಕಿತ್ಸೆ ಮತ್ತು ೧೦ ಗರ್ಭ ಪರೀಕ್ಷೆಗಳನ್ನು ನಡೆಸಿದರು. ೪ ವಿವಿಧ ಗರ್ಭಕೋಶ ತೊಂದರೆ ಇರುವ ರಾಸುಗಳಿಗೆ ಚಿಕಿತ್ಸೆ ೨೦ ರಾಸುಗಳಿಗೆ ವಿವಿಧ ಸಾಮಾನ್ಯ ತೊಂದರೆಗಳಿಗೆ ಚಿಕಿತ್ಸೆಯನ್ನು ನೀಡಿದರು. ೫೦೦ ಕುರಿ/ಮೇಕೆಗಳಿಗೆ ಜಂತುನಾಶಕ ಔಷಧಿಯನ್ನು ವಿತರಿಸಲಾಯಿತು. ಶಿಬಿರಕ್ಕೆ ಬಂದಿದ್ದ ಎಲ್ಲಾ ೧೨೫ ರಾಸುಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲಾಯಿತು. ೭೫ ಮಿಶ್ರತಳಿ ಹಸುಗಳಿಗೆ ಒಂದು ಕೆಜಿಯ ಲವಣ/ಖನಿಜ/ಜೀವಸತ್ವಯುಕ್ತ ಟಾನಿಕ್ ಮಿಶ್ರಣವನ್ನು ನೀಡಲಾಯಿತು. ೩೦ ಕರುಗಳಿಗೆ ಜಂತು ನಾಶಕ ಔಷಧಿ ಕುಡಿಸಿ ಬೆಳವಣಿಗೆಗೆ ಪೂರಕವಾದ ಮತ್ತು ಆರೋಗ್ಯ ವರ್ಧಕ ಚುಚ್ಚು ಮದ್ದು ಹಾಗೂ ಟಾನಿಕ್‌ಗಳನ್ನು ನೀಡಲಾಯಿತು.
ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೆ.ವi.ನಾಗಭೂಷಣರವರು ನೆರೆದಿದ್ದ ರೈತರನ್ನು ಉದ್ದೇಶಿಸಿ ಪಶುಪಾಲನ ಚಟುವಟಿಕೆಗಳ ಕುರಿತು ಮಾತನಾಡಿದರು. ಕರುಗಳ ಸಾಕಾಣಿಕೆ ಬಗ್ಗೆ, ಸಮತೋಲನ ಆಹಾರವನ್ನು ಮತ್ತು ಜಂತುನಾಶಕ ಔಷಧಿಗಳನ್ನು ಸಕಾಲದಲ್ಲಿ ನೀಡುವುದರ ಮೂಲಕ ಕರುಗಳನ್ನು ಉತ್ತಮ ವಾಗಿ ಸಾಕಾಣಿಕೆ ಮಾಡಬಹುದು ಎಂದು ತಿಳಿಸಿ ದರು. ಕುರಿ/ಮೇಕೆಗಳ ಆರೋಗ್ಯ, ಲಸಿಕೆಗಳ ಮಹತ್ವ ಮತ್ತು ಉಪಯೋಗ, ಜಂತುನಾಶಕ ಔಷದೋಪಚಾರ, ಟಗರುಗಳ ಆಯ್ಕೆ ಮತ್ತು ನಿರ್ವಹಣೆ ಸಮತೋಲನ ಆಹಾರದ ನಿರ್ವಹಣೆ, ಸರ್ಕಾರದ ಅನುಗ್ರಹ ಯೋಜನೆ ಮತ್ತು ಎನ್.ಎಲ್.ಎಂ ಯೋಜನೆ, ಮುಂತಾದ ವಿಚಾರಗಳ ಕುರಿತು ತಿಳುವಳಿಕೆ ಮೂಡಿಸಿದರು.
ಪಶು ವೈದ್ಯಾಧಿಕಾರಿ ಡಾ.ರಕ್ಷಿತ್, ಪಶು ವೈದ್ಯ ಪರೀಕ್ಷಕ ದಿನೇಶ್‌ಎನ್, ಕಿರಿಯ ಪಶು ವೈದ್ಯ ಪರೀಕ್ಷಕ ಪ್ರಜ್ವಲ್ ಮತ್ತು ಸಿಬ್ಬಂದಿಗಳಾದ ನಾಗರಾಜು, ನವೀನ್‌ಕುಮಾರ್, ಕಿರಣ್‌ಕುಮಾರ್, ಅತಾವುಲ್ಲಾ ಮತ್ತು ಪಶು ಸಖಿ ಶೋಭ, ಉಷಾ ಮತ್ತು ಗ್ರಾಮಸ್ಥರುಗಳಾದ ಚೌಡಪ್ಪ, ಕರಿಯಪ್ಪ, ರೇಣುಕಪ್ಪ, ಓಂಕಾರ ಮೂರ್ತಿ, ರಮೇಶ್ ಉಪಸ್ಥಿ ತರಿದ್ದರು.
(Visited 1 times, 1 visits today)